ರಾಜ್ಯದ ವಿವಿಧೆಡೆ ಸೈನೇಡ್ ನೀಡಿ ಆರು ಮಂದಿ ಮಹಿಳೆಯರನ್ನು ಕೊಲೆಗೈದ ಹಂತಕಿ ಮಲ್ಲಿಕಾಗೆ ಯಡಿಯೂರಿನ ಲಾಡ್ಜ್‌ವೊಂದರಲ್ಲಿ ಮಹಿಳೆಯೊಬ್ಬಾಕೆ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಇಲ್ಲಿನ 1ನೇ ತ್ವರಿತ ನ್ಯಾಯಾಲಯ ಗಲ್ಲುಶಿಕ್ಷೆ ವಿಧಿಸಿ ತೀರ್ಪು ನೀಡಿದೆ.
ಸೈನೇಡ್ ಮಲ್ಲಿಕಾ ಯಡಿಯೂರಿನ ಲಾಡ್ಜ್‌ನಲ್ಲಿ ಮಹಿಳೆಯೊಬ್ಬಳನ್ನು ಸೈನೇಡ್ ನೀಡಿ ಕೊಲೆಗೈದ ಪ್ರಕರಣದ ವಿಚಾರಣೆ ನಡೆಸಿದ ತುಮಕೂರಿನ 1ನೇ ತ್ವರಿತ ನ್ಯಾಯಾಲಯದ ನ್ಯಾಯಾಧೀಶಾರದ ಎಂ.ಎನ್.ಕೆಂಪಗೌಡರ್ ಅವರು ಮರಣದಂಡನೆ ವಿಧಿಸಿದ್ದಾರೆ.
ಬೆಂಗಳೂರಿನ ನಿವಾಸಿಯಾಗಿರುವ ಮಲ್ಲಿಕಾ ದೇವಾಲಯಕ್ಕೆ ಬರುವ ಮಹಿಳೆಯರನ್ನು ಮಾತಿನ ಮೋಡಿಗೆ ಸಿಲುಕಿಸಿ ಅವರಿಗೆ ಸೈನೇಡ್ ನೀಡಿ ಕೊಲೆಗೈಯುತ್ತಿದ್ದಳು. ಹೀಗೆ ರಾಜ್ಯದ ವಿವಿಧೆಡೆ ಆರು ಮಂದಿ ಮಹಿಳೆಯರನ್ನು ಹತ್ಯೆಗೈದಿದ್ದಳು. ಈ ಹಂತಕಿ ಕೊನೆಗೂ ಬೆಂಗಳೂರಿನ ಕಲಾಸಿಪಾಳ್ಯದ ಪೊಲೀಸ್ ಇನ್ಸ್‌ಪೆಕ್ಟರ್ ಎಚ್.ಎಚ್.ಉಮೇಶ್ ಅವರ ಕೈಗೆ ಸಿಕ್ಕಿಬಿದ್ದು, ತನಿಖೆ ನಡೆಸಿದಾಗ ಆಘಾತಕಾರಿ ಅಂಶ ಬಯಲಾಗಿತ್ತು. |