ಮುಖ್ಯ ಪುಟ > ಸುದ್ದಿ ಜಗತ್ತು > ಸುದ್ದಿಗಳು > ರಾಜ್ಯ ಸುದ್ದಿ > ಮುಸ್ಲಿಮರಿಗೆ ಅನ್ಯಾಯವಾದರೆ ಸಹಿಸುವುದಿಲ್ಲ: ಯಡಿಯೂರಪ್ಪ
ಸಲಹೆ/ಪ್ರತಿಕ್ರಿಯೆಮಿತ್ರನಿಗೆ ಕಳುಹಿಸಿಈ ಪುಟ ಮುದ್ರಿಸಿ
 
ಮುಸ್ಲಿಮರಿಗೆ ಅನ್ಯಾಯವಾದರೆ ಸಹಿಸುವುದಿಲ್ಲ: ಯಡಿಯೂರಪ್ಪ
ರಾಜ್ಯದಲ್ಲಿ ಅಲ್ಪ ಸಂಖ್ಯಾತರಿಗೆ ಅನ್ಯಾಯವಾದರೆ ಅದನ್ನು ತಾವು ಸಹಿಸುವುದಿಲ್ಲ. ದೂರು ನೀಡಿದ 24 ಗಂಟೆಗಳಲ್ಲಿ ಅಂತಹ ಅನ್ಯಾಯವನ್ನು ಸರಿಪಡಿಸುವುದಾಗಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಭರವಸೆ ನೀಡಿದ್ದಾರೆ.

ಇತ್ತೀಚೆಗೆ ರಾಜ್ಯದಲ್ಲಿ ಜರಗುತ್ತಿರುವ ಸಣ್ಣಪುಟ್ಟ ಘಟನೆಗಳನ್ನೂ ದೊಡ್ಡದು ಮಾಡುವ ಪ್ರಯತ್ನ ಪ್ರತಿಪಕ್ಷಗಳಿಂದ ನಡೆಯುತ್ತಿದೆ. ಬಿಜೆಪಿಯನ್ನು ಅಲ್ಪಸಂಖ್ಯಾತರಿಂದ ದೂರ ಸರಿಸುವ ವ್ಯವಸ್ಥಿತ ಪಿತೂರಿ ಇದು ಎಂದು ದೂರಿದರು.

ಸ್ವಾತಂತ್ರ್ಯ ನಂತರ ಅಲ್ಪಸಂಖ್ಯಾತರನ್ನು ವೋಟ್ ಬ್ಯಾಂಕ್ ಆಗಿ ಬಳಸಿಕೊಂಡ ಕಾಂಗ್ರೆಸ್, ಅಲ್ಪಸಂಖ್ಯಾತರ ಬಗ್ಗೆ ಮೊಸಳೆ ಕಣ್ಣೀರು ಸುರಿಸುತ್ತಿದೆ. ಆ ವರ್ಗದ ಜನ ಇಂದಿಗೂ ಕೊಳೆಗೇರಿಯಲ್ಲಿಯೇ ವಾಸಿಸುವ ಹೀನಾಯ ಸ್ಥಿತಿ ನಿರ್ಮಾಣ ಮಾಡಿದೆ. ಅಲ್ಲಿ ಉಸಿರುಗಟ್ಟುವ ಪರಿಸ್ಥಿತಿ ಇದೆ. ಆದರೆ ರಾಜ್ಯ ಬಿಜೆಪಿ ಸರ್ಕಾರ ಅಲ್ಪಸಂಖ್ಯಾತರ ಕಲ್ಯಾಣಕ್ಕೆ ಪ್ರಾಮಾಣಿಕವಾಗಿ ಶ್ರಮಿಸುತ್ತಿದೆ. ಬಜೆಟ್‌ನಲ್ಲಿ 20-30 ಕೋಟಿ ರೂ. ಇದ್ದ ಅನುದಾನ ಪ್ರಮಾಣವನ್ನು ತಾವು ಉಪಮುಖ್ಯಮಂತ್ರಿ, ಮುಖ್ಯಮಂತ್ರಿಯಾಗಿ 170 ಕೋಟಿ ರೂ.ಗೆ ಹೆಚ್ಚಿಸಿರುವುದಾಗಿ ಹೇಳಿದರು.

ಭಾಗ್ಯಲಕ್ಷ್ಮೀ, ಸಂಧ್ಯಾ ಸುರಕ್ಷಾ ಮುಂತಾದ ಯೋಜನೆಗಳನ್ನು ಉದಾಹರಿಸಿದ ಮುಖ್ಯಮಂತ್ರಿ, ಈ ಯೋಜನೆಗಳಲ್ಲಿ ದೊಡ್ಡ ಪಾಲು ಮುಸ್ಲಿಮರಿಗೆ ಸಿಕ್ಕಿದೆ. ಆದರೆ ಇದು ಸಾಲದು ಈ ವರ್ಗದ ಅಭಿವೃದ್ದಿಗೆ ಇನ್ನಷ್ಟು ಯೋಜನೆ ರೂಪಿಸುವ ಚಿಂತನೆ ಇದೆ ಎಂದರು.
ಸಂಬಂಧಿತ ಮಾಹಿತಿ ಹುಡುಕಿ
ಮತ್ತಷ್ಟು
ಯಡಿಯೂರಪ್ಪ ವಿರುದ್ಧ ಕ್ರಮ: ಎನ್.ಗೋಪಾಲಸ್ವಾಮಿ
ತುಮಕೂರು: 'ಸೈನೇಡ್' ಮಲ್ಲಿಕಾಗೆ ಮರಣದಂಡನೆ
ಸೋನಿಯಾ ವಿರುದ್ಧ ಆಯೋಗಕ್ಕೆ ದೂರು: ಯಡಿಯೂರಪ್ಪ
ಆಡಳಿತಾರೂಢ ಬಿಜೆಪಿ ವಿರುದ್ಧ ನಿಗಾ ಇಡಿ: ಕಾಂಗ್ರೆಸ್-ಜೆಡಿಎಸ್
ಬೆಳಗಾವಿ: ಚುನಾವಣಾ ಪ್ರಚಾರಕ್ಕೆ ಬಂದ್ರೆ ಜಾಗ್ರತೆ !
ಭಾರತ್ ನಿರ್ಮಾಣ್ ಅಲ್ಲ,ನಿರ್ನಾಮ: ಬಿ.ವೈ.ರಾಘವೇಂದ್ರ