76ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನವನ್ನು ಉತ್ತರ ಕರ್ನಾಟಕದ ಗದಗದಲ್ಲಿ ನಡೆಸಲು ಕನ್ನಡ ಸಾಹಿತ್ಯ ಪರಿಷತ್ ನಿರ್ಧರಿಸಿದೆ.
ಬುಧವಾರ ಸುದ್ದಿಗಾರರೊಂದಿಗೆ ಮಾತನಾಡಿದ ಕಸಾಪದ ಅಧ್ಯಕ್ಷ ನಲ್ಲೂರು ಪ್ರಸಾದ್, ಗದಗ್‌ನಲ್ಲಿ 76ನೇ ಕನ್ನಡ ಸಾಹಿತ್ಯ ಸಮ್ಮೇಳನ ನಡೆಸಲು ಒಮ್ಮತಾಭಿಪ್ರಾಯದಿಂದ ನಿರ್ಣಯ ಕೈಗೊಳ್ಳಲಾಗಿದೆ ಎಂದು ತಿಳಿಸಿದರು.
ಇತ್ತೀಚೆಗಷ್ಟೇ ಚಿತ್ರದುರ್ಗದಲ್ಲಿ 75ನೇ ಅಖಿಲ ಕನ್ನಡ ಸಾಹಿತ್ಯ ಸಮ್ಮೇಳನ ಡಾ.ಎಲ್.ಬಸವರಾಜು ಅವರ ಅಧ್ಯಕ್ಷತೆಯಲ್ಲಿ ನಡೆದಿತ್ತು. ಮಠ,ಮಠಾಧೀಶರ ವಿರುದ್ಧ ಕಿಡಿಕಾರಿದ್ದ ಎಲ್‌ಬಿ ಅವರ ಅಧ್ಯಕ್ಷೀಯ ಮಾತು ಸಾಕಷ್ಟು ವಿವಾದಕ್ಕೆ ಗ್ರಾಸ ಒದಗಿಸಿತ್ತು. ಸಮ್ಮೇಳನದಲ್ಲಿ ಸಾಕಷ್ಟು ಅವ್ಯವಸ್ಥೆ ನಡೆಯುವ ಮೂಲಕ ನಲ್ಲೂರು ಪ್ರಸಾದ್ ಅವರ ವಿರುದ್ಧ ಪ್ರತಿಭಟನೆಯನ್ನು ಕೂಡ ನಡೆದಿತ್ತು. |