ದೇಶದ ಚುನಾವಣಾ ಆಯೋಗದ ನೀತಿ ಸಂಹಿತೆಯಲ್ಲಿ ಮಾರ್ಪಾಡು ಮಾಡಬೇಕಾದ ಅಗತ್ಯವಿದೆ ಎಂದು ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡರು ಅಭಿಪ್ರಾಯ ವ್ಯಕ್ತಪಡಿಸಿದ್ದು, ಆಯೋಗದ ನೀತಿ ಸಂಹಿತೆ ಅತೀಯಾಯ್ತು ಎಂದು ಆಕ್ರೋಶ ವ್ಯಕ್ತಪಡಿಸಿದರು.
ಬೀದರ್‌ನ ಐಐಟಿ ಕಾಲೇಜು ಆವರಣದಲ್ಲಿ ನಡೆದ ತೃತೀಯ ರಂಗದ ಬೃಹತ್ ಸಮಾವೇಶದಲ್ಲಿ ಮಾತನಾಡಿದ ಅವರು, ಮುಖ್ಯಚುನಾವಣಾ ಆಯುಕ್ತ ಗೋಪಾಲಸ್ವಾಮಿಯವರ ಬಗ್ಗೆ ಗೌರವವಿದೆ. ಆದರೆ ನೀರಿನ ಬಾಟಲಿ ತಂದರೂ ಲೆಕ್ಕ ಕೊಡಿ ಅನ್ನುತ್ತಾರೆ, ಹೋಗ್ಲಿ ಒಂದು ತುತ್ತು ಅನ್ನ ಕೊಟ್ಟು ಅದರ ಲೆಕ್ಕ ಎಷ್ಟು ಅಂತ ವಿವರಣೆ ಕೇಳ್ತಾರೆ? ಇದು ಚುನಾವಣಾ ನೀತಿ ಸಂಹಿತೆಯೇ?ಎಂದು ಆಯೋಗದ ಕ್ರಮವನ್ನು ಖಾರವಾಗಿ ಪ್ರಶ್ನಿಸಿದರು.
ಭಾಷಣದುದ್ದಕ್ಕೂ ಚುನಾವಣಾ ಆಯೋಗದ ವಿರುದ್ಧ ವಾಗ್ದಾಳಿ ನಡೆಸಿದ ಗೌಡರು, ಪ್ರತಿಯೊಂದಕ್ಕೂ ಲೆಕ್ಕ ಕೇಳಿದ್ರೆ ಕಷ್ಟವಾಗುತ್ತೆ, ಆ ಕಾರಣಕ್ಕಾಗಿ ಇಂತಹ ನೀತಿ ಸಂಹಿತೆಯಿಂದ ತೊಂದರೆಯೇ ಹೆಚ್ಚು ಅನುಭವಿಸುವಂತಾಗುತ್ತೆ ಎಂದರು. |