ಮುಖ್ಯ ಪುಟ > ಸುದ್ದಿ ಜಗತ್ತು > ಸುದ್ದಿಗಳು > ರಾಜ್ಯ ಸುದ್ದಿ > ಬೆಳಗಾವಿ ಧ್ವಜ ವಿವಾದ: ಡಿಸಿ ವರದಿ ಆಯೋಗಕ್ಕೆ ರವಾನೆ
ಸಲಹೆ/ಪ್ರತಿಕ್ರಿಯೆಮಿತ್ರನಿಗೆ ಕಳುಹಿಸಿಈ ಪುಟ ಮುದ್ರಿಸಿ
 
ಬೆಳಗಾವಿ ಧ್ವಜ ವಿವಾದ: ಡಿಸಿ ವರದಿ ಆಯೋಗಕ್ಕೆ ರವಾನೆ
ಬೆಳಗಾವಿ ಸಂಸದ ಸುರೇಶ್ ಅಂಗಡಿ ಅವರು ಬೆಳಗಾವಿ ಮಹಾನಗರ ಪಾಲಿಕೆ ಕಚೇರಿ ಮೇಲೆ ಭಗವಾಧ್ವಜ ಹಾರಿಸಲು ಯತ್ನಿಸಿದ ಪ್ರಕರಣದ ಕುರಿತು ಜಿಲ್ಲಾಧಿಕಾರಿ ಸಲ್ಲಿಸಿರುವ ವರದಿಯನ್ನು ರಾಜ್ಯದ ಕೇಂದ್ರ ಜಂಟಿ ಚುನಾವಣಾಧಿಕಾರಿ ಬಿ.ಬಿ.ಕುಲಕರ್ಣಿ ತಿಳಿಸಿದ್ದಾರೆ.

ವಾಟಾಳ್ ನಾಗರಾಜ್ ನೇತೃತ್ವದ ಅಖಿಲ ಕರ್ನಾಟಕ ಗಡಿ ರಕ್ಷಣಾ ಸಮಿತಿ ಸಲ್ಲಿಸಿದ ಮನವಿಗೆ ಸ್ಪಂದಿಸಿ ಮುಖಂಡರಿಗೆ ಚುನಾವಣಾಧಿಕಾರಿ ಈ ಭರವಸೆ ನೀಡಿದ್ದಾರೆ. ಬೆಳಗಾವಿಯಲ್ಲಿ ನಡೆದ ಭಗವಾಧ್ವಜ ಪ್ರಕರಣದ ವಿಸ್ತ್ರತ ವರದಿ ಹಾಗೂ ಸಿಡಿಯನ್ನು ಜಿಲ್ಲಾಧಿಕಾರಿಗಳು ಆಯೋಗಕ್ಕೆ ಕಳುಹಿಸಿಕೊಟ್ಟಿದ್ದಾರೆ. ಇದರ ಪರಿಶೀಲನೆಗಾಗಿ ಕೇಂದ್ರ ಚುನಾವಣಾ ಆಯೋಗಕ್ಕೆ ಕಳುಹಿಸಲಾಗುವುದು ಎಂದು ಹೇಳಿದರು.

ರಾಜ್ಯದಲ್ಲಿ ಚುನಾವಣಾ ಅಕ್ರಮಗಳನ್ನು ತಡೆಯುವುದರ ಮೂಲಕ ಶಾಂತಿಯುತ ಮತ್ತು ಮುಕ್ತ ಮತದಾನಕ್ಕೆ ಆಯೋಗ ಕ್ರಮ ಕೈಗೊಳ್ಳಬೇಕೆಂದು ಆಗ್ರಹಿಸಿ ಚುನಾವಣಾ ಅಧಿಕಾರಿಗಳ ಕಚೇರಿ ಎದುರು ವಾಟಾಳ್ ನಾಗರಾಜ್ ನೇತೃತ್ವದಲ್ಲಿ ಅಖಿಲ ಕರ್ನಾಟಕ ಗಡಿ ರಕ್ಷಣಾ ಸಮಿತಿ ಗುರುವಾರ ಪ್ರತಿಭಟನೆ ನಡೆಸಿತ್ತು.

ಬೆಳಗಾವಿಯಲ್ಲಿ ರಾಷ್ಟ್ರಧ್ವಜಕ್ಕೆ ಅವಮಾನ ಮಾಡಿದ ಬಿಜೆಪಿ ಸಂಸದ ಸುರೇಶ್ ಅಂಗಡಿಯವರಿಗೆ ಚುನಾವಣೆಯಲ್ಲಿ ಸ್ಪರ್ಧಿಸದಂತೆ ಕ್ರಮ ಕೈಗೊಳ್ಳುವುದು, ಮುಕ್ತ ಹಾಗೂ ಶಾಂತಿಯುತ ಮತದಾನಕ್ಕೆ ಆಯೋಗ ಸೂಕ್ತ ಬಂದೋಬಸ್ತ್ ಮಾಡುವಂತೆ ಒತ್ತಾಯಿಸಿದರು.
ಸಂಬಂಧಿತ ಮಾಹಿತಿ ಹುಡುಕಿ
ಮತ್ತಷ್ಟು
ಏರ್ ಡೆಕ್ಕನ್‌‌ ಸಂಸ್ಥಾಪಕ ಕ್ಯಾ.ಗೋಪಿನಾಥ್ ಲೋಕಸಭಾ ಅಖಾಡಕ್ಕೆ
ರಾಜಧಾನಿಯಲ್ಲಿ ಹಾಡಹಗಲೇ ಮತ್ತೊಂದು ಕೊಲೆ
ನೀತಿ ಸಂಹಿತೆ ಅರಿತು ಕೆಲಸ ಮಾಡಿ: ಯಡಿಯೂರಪ್ಪ
ಎಸ್.ಎಂ.ಕೃಷ್ಣ-ಜಾಫರ್ ಷರೀಫ್ ಬಂಡಾಯದ ಬಾವುಟ?
ಬಳ್ಳಾರಿ: ಆಯೋಗದಿಂದ 5 ಅಧಿಕಾರಿಗಳ ಎತ್ತಂಗಡಿ
ಬಡವರು ಲ್ಯಾಪ್‌‌ಟಾಪ್ ತಗೊಂಡು ಉಪ್ಪಿನಕಾಯಿ ಹಾಕಿ ನೆಕ್ಕೋದಾ: ಸಿದ್ದು