ಮನುಕುಲಕ್ಕೆ ಮಾರಕವಾಗಿರುವ ಭಯೋತ್ಪಾದನೆ ತಡೆಯಲು ಭಾರತಕ್ಕೆ ಮಾತ್ರ ಸಾಧ್ಯ ಎಂದು ವೈದ್ಯಕೀಯ ಶಿಕ್ಷಣ ಸಚಿವ ರಾಮಚಂದ್ರ ಗೌಡ ಹೇಳಿದರು.
ಅವರು ವಾರಣಾಸಿಯಲ್ಲಿ ನಡೆದ ಆದಿಚುಂಚನಗಿರಿಯ 33ನೇ ಶಾಖಾ ಮಠದ ಉದ್ಘಾಟನಾ ಸಮಾರಂಭದಲ್ಲಿ ಪಾಲ್ಗೊಂಡು ಅವರು ಮಾತನಾಡಿದರು.
ಇಡೀ ಜಗತ್ತು ಇಂದು ಅನ್ಯಾಯ, ಭಯದ ನೆರಳಿನಲ್ಲಿದೆ. ಧರ್ಮಗುರುಗಳು ಮಾತ್ರ ನೆಮ್ಮದಿ ನೆಲೆಯಲ್ಲಿ ಜನರನ್ನು ಮುನ್ನಡೆಸಲು ಸಾಧ್ಯ ಎಂದು ಅವರು ತಿಳಿಸಿದರು. ಭಾರತೀಯರೆಲ್ಲರ ಭಕ್ತಿ ಗೌರವಕ್ಕೆ ಪಾತ್ರರಾಗಿರುವ ಕಾಶಿಯಲ್ಲಿ ಆದಿಚುಂಚನಗಿರಿ ಮಠದ ಶಾಲೆ ಆರಂಭವಾಗಿರುವುದು ಶ್ಲಾಘನೀಯ ಎಂದರು.
ಸಮಾರಂಭದಲ್ಲಿ ಆಶೀರ್ವಚನ ನೀಡಿದ ಆದಿಚುಂಚನಗಿರಿ ಮಠದ ಮಠಾಧೀಶರಾದ ಬಾಲಗಂಗಾಧರನಾಥ ಸ್ವಾಮೀಜಿ ಇಂಥ ಕ್ಷೇತ್ರದಲ್ಲಿ ಶಾಖಾ ಮಠ ತೆರೆದು ಜನತೆಗೆ ಅನುಕೂಲ ಕಲ್ಪಿಸಿಕೊಡುವ ದೃಷ್ಟಿಯಿಂದ ಮಾಡಿದ ಸಂಕಲ್ಪ ಇಂದು ನೆರವೇರಿದೆ ಎಂದರು. |