ಮಾರಮ್ಮದೇವಿ ದರ್ಶನ ಪಡೆದು ಭೀಮಾನದಿಯನ್ನು ದಾಟಿ ಊರಿಗೆ ವಾಪಸಾಗುತ್ತಿದ್ದ ವೇಳೆ ದೋಣಿ ಮುಳುಗಿದ ಪರಿಣಾಮ ಆರು ವರ್ಷದ ಬಾಲಕಿ ಸೇರಿದಂತೆ ಐದು ಮಂದಿ ಜೀವಂತ ಸಮಾಧಿಯಾದ ಘಟನೆ ಗುರುವಾರ ನಡೆದಿದೆ.
ಮಾರಮ್ಮ ದೇವಿ ದೇವಸ್ಥಾನಕ್ಕೆ ತೆರಳಿ ಪೂಜೆ ಸಲ್ಲಿಸಿ ಊರಿಗೆ ದೋಣಿಯಲ್ಲಿ ಮರಳುತ್ತಿರುವ ಸಂದರ್ಭದಲ್ಲಿ, ದುರ್ಬಲಗೊಂಡಿದ್ದ ದೋಣಿಯೊಳಗೆ ನೀರು ತುಂಬಿ ಈ ದುರಂತ ಸಂಭವಿಸಿದೆ. ದೋಣಿಯಲ್ಲಿ 12ಮಂದಿ ಪ್ರಯಾಣಿಸುತ್ತಿದ್ದು, ಐದು ಮಂದಿ ಜಲಸಮಾಧಿಯಾಗಿದ್ದಾರೆ.
ಆರು ವರ್ಷದ ರಾಜೇಶ್ವರಿ, ಫರತಾಬಾದ್ ಶೇಖಾಪುರದ ವಿಷ್ಣುವರ್ಧನ್, ಬಂಗಾರಿಯಮ್ಮ, ಸೀತಮ್ಮ , ಸಂಗಮ್ಮ ಸೇರಿದಂತೆ ಐದು ಮಂದಿ ಜೀವಂತ ಸಮಾಧಿಯಾಗದ್ದರೆ, ಉಳಿದ ಏಳು ಮಂದಿ ಅಪಾಯದಿಂದ ಪಾರಾಗಿರುವುದಾಗಿ ಸ್ಥಳೀಯರು ತಿಳಿಸಿದ್ದಾರೆ.
ದೋಣಿ ಮುಳುಗುತ್ತಿದ್ದುದನ್ನು ಗಮನಿಸಿದ ನಾವಿಕ ನೀರಿಗೆ ಹಾರಿ ಈಜಿ ದಡ ಸೇರಿ ಪರಾರಿಯಾಗಿದ್ದಾನೆ, ಆತನ ನಿರ್ಲಕ್ಷ್ಯವೇ ಈ ದುರಂತಕ್ಕೆ ಕಾರಣ ಎನ್ನಲಾಗಿದೆ. ಅಗ್ನಿಶಾಮಕದಳ ಹಾಗೂ ಪೊಲೀಸರು ಸ್ಥಳೀಯರ ನೆರವಿನೊಂದಿಗೆ ಶವಗಳನ್ನು ಹೊರತೆಗೆಯಲಾಯಿತು. |