ಮುಖ್ಯ ಪುಟ > ಸುದ್ದಿ ಜಗತ್ತು > ಸುದ್ದಿಗಳು > ರಾಜ್ಯ ಸುದ್ದಿ > ನಕ್ಸಲರ ಬಗ್ಗೆ ಮಾಹಿತಿ ನೀಡಿದ್ರೆ ಲಕ್ಷ ರೂ.ಇನಾಮು
ಸಲಹೆ/ಪ್ರತಿಕ್ರಿಯೆಮಿತ್ರನಿಗೆ ಕಳುಹಿಸಿಈ ಪುಟ ಮುದ್ರಿಸಿ
 
ನಕ್ಸಲರ ಬಗ್ಗೆ ಮಾಹಿತಿ ನೀಡಿದ್ರೆ ಲಕ್ಷ ರೂ.ಇನಾಮು
ಮಲೆನಾಡು ಪ್ರದೇಶಗಳಲ್ಲಿ ರಹಸ್ಯವಾಗಿ ಕಾರ್ಯಾಚರಿಸುತ್ತಿದ್ದು, ಹಲವಾರು ಪ್ರಕರಣಗಳಲ್ಲಿ ಭಾಗಿಯಾಗಿರುವ 24 ಪ್ರಮುಖ ನಕ್ಸಲರ ಕುರಿತು ಮಾಹಿತಿ ನೀಡುವವರಿಗೆ ಒಂದರಿಂದ ಐದು ಲಕ್ಷ ರೂ.ನಗದು ಬಹುಮಾನ ನೀಡುವುದಾಗಿ ಪೊಲೀಸ್ ಇಲಾಖೆ ಘೋಷಿಸಿದೆ.

ರಾಜ್ಯದ ವಿವಿಧೆಡೆ ಅಪರಾಧ ಕೃತ್ಯ ಎಸಗಿ ತಲೆಮರೆಸಿಕೊಂಡಿರುವ ನಕ್ಸಲೀಯರ ಬಗ್ಗೆ ಮಾಹಿತಿ ನೀಡುವವರ ಹೆಸರನ್ನು ರಹಸ್ಯವಾಗಿ ಇಡಲಾಗುವುದು ಎಂದು ರಾಜ್ಯ ಪೊಲೀಸ್ ಮಹಾನಿರ್ದೇಶಕ ಡಾ.ಅಜಯ್ ಕುಮಾರ್ ಸಿಂಗ್ ಗುರುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡುತ್ತ ತಿಳಿಸಿದರು.

ಶೃಂಗೇರಿ ಬುಕ್ಕಡಿಬೈಲಿನ ಕೃಷ್ಣಮೂರ್ತಿ, ಲತಾ, ತೀರ್ಥಹಳ್ಳಿಯ ಹೊಸಗದ್ದೆ ಪ್ರಭಾ, ಚಿಕ್ಕಮಗಳೂರಿನ ಸೋಮಲಾಪುರದ ನೀಲುಗುಡ್ಡೆಯ ನೀಲುಗುಳಿ ಪದ್ಮನಾಭ, ಮೂಡಿಗೆರೆಯ ಮಾವಿನಕೆರೆಯ ಕನ್ಯಾಕುಮಾರಿ, ಅಂಗಡಿ ಗ್ರಾಮದ ಎ.ಎಸ್.ಸುರೇಶ, ಉಡುಪಿಯ ಕೂಡ್ಲು ನಾಡ್ಪಾಲು ಗ್ರಾಮದ ವಿಕ್ರಮ ಗೌಡ ಮತ್ತು ಕೆ.ಎಂ.ಕೃಷ್ಣಮೂರ್ತಿ ಅವರ ಬಗ್ಗೆ ಮಾಹಿತಿ ನೀಡಿದರೆ ಐದು ಲಕ್ಷ ರೂಪಾಯಿ ಮತ್ತು ಸೊರಬದ ತಲ್ಲೂರಿನ ದೇವೇಂದ್ರ, ದಕ್ಷಿಣ ಕನ್ನಡ ಕುತ್ಲೂರಿನ ವಸಂತ ಅವರ ಸುಳಿವು ಕೊಟ್ಟರೆ ಮೂರು ಲಕ್ಷ ರೂ.ಬಹುಮಾನ ದೊರೆಯಲಿದೆ.

ಚಿಕ್ಕಮಗಳೂರಿನ ಮಾವಿನಕೆರೆಯ ಸಾವಿತ್ರಿ, ಸೋಮಲಾಪುರದ ಎನ್.ನಂದಕುಮಾರ್, ಮೇಗೂರಿನ ಹೊರಲೆ ಸರೋಜ, ಬಾಳೆಹೊಳೆಯ ಎಂ.ವನಜಾಕ್ಷಿ. ಚಿತ್ರದುರ್ಗದ ಸಿಎಂ ನೂರ್ ಜುಲ್ಪಿಕರ್, ಬಂಟ್ವಾಳ ಕೊಡಂಬೆಟ್ಟು ಗ್ರಾಮದ ಲೀಲಾವತಿ, ಉಡುಪಿಯ ಮಚ್ಚಟ್ಟು ಗ್ರಾಮದ ತೊಂಬಟ್ಟು ಲಕ್ಷ್ಮಿ, ರಾಯಚೂರಿನ ಕಲ್ಪನಾ, ಕುತ್ಲೂರಿನ ಸುಂದರಿ, ಶಿವಮೊಗ್ಗದ ಆಶಾ, ಸಿರಿಮನೆ ನಾಗರಾಜು, ಜಯಣ್ಣ, ರವೀಂದ್ರ ಮತ್ತು ಶ್ರೀಮತಿ ಅವರ ಬಗ್ಗೆ ಮಾಹಿತಿ ನೀಡಿದರೆ ಒಂದು ಲಕ್ಷ ರೂ. ನೀಡುವುದಾಗಿ ಸಿಂಗ್ ಘೋಷಿಸಿದ್ದಾರೆ.
ಸಂಬಂಧಿತ ಮಾಹಿತಿ ಹುಡುಕಿ
ಮತ್ತಷ್ಟು
ಡಿ.ಮಂಜುನಾಥ್‌ಗೆ ಟಿಕೆಟ್ ನೀಡಬೇಡಿ: ಮಾದಿಗ ಸಮಿತಿ
ಕಾಂಗ್ರೆಸ್ ಹಳೆಯ ಅತ್ತೆ ಬಿಜೆಪಿ ಹೊಸ ಸೊಸೆ: ಜಗ್ಗೇಶ್
ಬಿಜೆಪಿ ಕದತಟ್ಟುತ್ತಿರುವ ಕಾಂಗ್ರೆಸ್‌ನ 'ಅತಿರಥ-ಮಹಾರಥರು'
ಗುಲ್ಬರ್ಗಾ: ದೋಣಿ ಮುಳುಗಿ ಐವರು ಜಲಸಮಾಧಿ
ಭಯೋತ್ಪಾದನೆ ನಿಗ್ರಹ ಭಾರತಕ್ಕೆ ಮಾತ್ರ ಸಾಧ್ಯ: ರಾಮಚಂದ್ರ ಗೌಡ
ಕಾಂಗ್ರೆಸ್ ದೇಶ ವಿಭಜಿಸಲು ಹೊರಟಿದೆ: ವೆಂಕಯ್ಯ ನಾಯ್ಡು