ಮುಖ್ಯ ಪುಟ > ಸುದ್ದಿ ಜಗತ್ತು > ಸುದ್ದಿಗಳು > ರಾಜ್ಯ ಸುದ್ದಿ > ಚಂದ್ರೇಗೌಡ ಭಿನ್ನಮತದ ಹಿಂದೆ ಹಿಡನ್ ಅಜೆಂಡಾ: ಡಿಕೆಶಿ
ಸಲಹೆ/ಪ್ರತಿಕ್ರಿಯೆಮಿತ್ರನಿಗೆ ಕಳುಹಿಸಿಈ ಪುಟ ಮುದ್ರಿಸಿ
 
ಚಂದ್ರೇಗೌಡ ಭಿನ್ನಮತದ ಹಿಂದೆ ಹಿಡನ್ ಅಜೆಂಡಾ: ಡಿಕೆಶಿ
ಕಾಂಗ್ರೆಸ್‌ನಲ್ಲಿ ಸೂಕ್ತ ಸ್ಥಾನಮಾನ ದೊರಕುತ್ತಿಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿರುವ ಹಿರಿಯ ಮುಖಂಡರಾದ ಡಿ.ಬಿ.ಚಂದ್ರೇಗೌಡ ಮತ್ತು ವಿ.ಸೋಮಣ್ಣ ವಿರುದ್ದ ಆಕ್ರೋಶ ವ್ಯಕ್ತಪಡಿಸಿರುವ ಕೆಪಿಸಿಸಿ ಕಾರ್ಯಾಧ್ಯಕ್ಷ ಡಿ.ಕೆ.ಶಿವಕುಮಾರ್, ಮುಖಂಡರ ಭಿನ್ನಮತದ ಹಿಂದೆ ಹಿಡನ್ ಅಜೆಂಡಾ ಇದೆ ಎಂದು ತಿಳಿಸಿದ್ದಾರೆ.

ಶುಕ್ರವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಡಿ.ಬಿ.ಚಂದ್ರೇಗೌಡ ಮತ್ತು ವಿ.ಸೋಮಣ್ಣ ಅವರು ಕಾಂಗ್ರೆಸ್ ಪಕ್ಷದ ಟಿಕೆಟ್‌ನಿಂದಲೇ ಶಾಸಕ, ಸಚಿವರಾದವರು. ಕಾಂಗ್ರೆಸ್ ಅವರಿಗೆ ಪ್ರತಿಬಾರಿಯೂ ಸೂಕ್ತ ಸ್ಥಾನಮಾನ ನೀಡಿದೆ ಎಂದರು.

ಇದೀಗ ವೈಯಕ್ತಿಕವಾಗಿ ಅಧಿಕಾರದ ಆಸೆಯಿಂದ ಕಾಂಗ್ರೆಸ್‌ನಿಂದ ತಮಗೆ ಸೂಕ್ತ ಸ್ಥಾನಮಾನ ದೊರಕುತ್ತಿಲ್ಲ ಎಂಬ ಆರೋಪದಲ್ಲಿ ಯಾವುದೇ ಹುರುಳಿಲ್ಲ, ಈ ಭಿನ್ನಮತದ ಹಿಂದೆ ಹಿಡನ್ ಅಜೆಂಡಾ ಅಡಗಿದೆ ಎಂದು ಹೇಳಿದರು.

ಕಾಂಗ್ರೆಸ್‌ನಲ್ಲಿ ಕಳೆದ 20-30ವರ್ಷಗಳಿಂದ ನಿಷ್ಠಾವಂತರಾಗಿ ಕಾರ್ಯನಿರ್ವಹಿಸಿದರು ಕೂಡ ಯಾವುದೇ ಬೆಲೆ ಇಲ್ಲದಂತಾಗಿದೆ. ಎಲ್ಲಿ ನಮಗೆ ಸೂಕ್ತ ಸ್ಥಾನಮಾನ ಸಿಗುತ್ತೋ ಅಲ್ಲಿಗೆ (ಬಿಜೆಪಿ) ಹೋಗುವುದು ಅನಿವಾರ್ಯವಾಗುತ್ತದೆ ಎಂದು ಡಿ.ಬಿ.ಚಂದ್ರೇಗೌಡ, ವಿ.ಸೋಮಣ್ಣ ಅಭಿಪ್ರಾಯ ವ್ಯಕ್ತಪಡಿಸಿದರು.
ಸಂಬಂಧಿತ ಮಾಹಿತಿ ಹುಡುಕಿ
ಮತ್ತಷ್ಟು
ಭಾರತ್ ನಿರ್ಮಾಣ್ ಹೆಸರು ಬಳಕೆ ವಿರುದ್ಧ ಬಿಜೆಪಿ ಕಿಡಿ
ಅನಂತಮೂರ್ತಿ ವಿರುದ್ಧ ಜಾಮೀನು ರಹಿತ ವಾರಂಟ್
ನಕ್ಸಲರ ಬಗ್ಗೆ ಮಾಹಿತಿ ನೀಡಿದ್ರೆ ಲಕ್ಷ ರೂ.ಇನಾಮು
ಡಿ.ಮಂಜುನಾಥ್‌ಗೆ ಟಿಕೆಟ್ ನೀಡಬೇಡಿ: ಮಾದಿಗ ಸಮಿತಿ
ಕಾಂಗ್ರೆಸ್ ಹಳೆಯ ಅತ್ತೆ ಬಿಜೆಪಿ ಹೊಸ ಸೊಸೆ: ಜಗ್ಗೇಶ್
ಬಿಜೆಪಿ ಕದತಟ್ಟುತ್ತಿರುವ ಕಾಂಗ್ರೆಸ್‌ನ 'ಅತಿರಥ-ಮಹಾರಥರು'