ಮುಖ್ಯ ಪುಟ > ಸುದ್ದಿ ಜಗತ್ತು > ಸುದ್ದಿಗಳು > ರಾಜ್ಯ ಸುದ್ದಿ > ಲೋಕಸಭೆ: ಜೆಡಿಎಸ್ ಪ್ರಥಮಪಟ್ಟಿ ಬಿಡುಗಡೆ
ಸಲಹೆ/ಪ್ರತಿಕ್ರಿಯೆಮಿತ್ರನಿಗೆ ಕಳುಹಿಸಿಈ ಪುಟ ಮುದ್ರಿಸಿ
 
ಲೋಕಸಭೆ: ಜೆಡಿಎಸ್ ಪ್ರಥಮಪಟ್ಟಿ ಬಿಡುಗಡೆ
ಮಂಗಳೂರು ಸಿಪಿಐಎಂಗೆ-ಉಡುಪಿ-ಸಿಪಿಐಗೆ...
NRB
ಯುಗಾದಿ ದಿನದ ಸಿಹಿ ಸುದ್ದಿ ಎಂಬಂತೆ ಸಿಪಿಐ-ಎಂ ಮತ್ತು ಸಿಪಿಐಗೆ ಎರಡು ಕ್ಷೇತ್ರಗಳನ್ನು ಬಿಟ್ಟು ಕೊಟ್ಟಿರುವ ಜೆಡಿಎಸ್‌ ವರಿಷ್ಠ ಎಚ್.ಡಿ.ದೇವೇಗೌಡರು ಲೋಕಸಭಾ ಚುನಾವಣೆಯ 18 ಅಭ್ಯರ್ಥಿಗಳ ಪ್ರಥಮ ಪಟ್ಟಿಯನ್ನು ಬಿಡುಗಡೆ ಮಾಡಿದ್ದಾರೆ.

ಶುಕ್ರವಾರ ಸಂಜೆ ದೇವೇಗೌಡರು ತಮ್ಮ ನಿವಾಸದಲ್ಲಿ 18ಅಭ್ಯರ್ಥಿಗಳ ಪಟ್ಟಿಯನ್ನು ಅಧಿಕೃತವಾಗಿ ಘೋಷಿಸಿದರು. ಈ ಮೊದಲು ಏಪ್ರಿಲ್ 2ರಂದು ಅಭ್ಯರ್ಥಿಗಳ ಪಟ್ಟಿಯನ್ನು ಬಿಡುಗಡೆ ಮಾಡುವುದಾಗಿ ಹೇಳಿದ್ದ ಗೌಡರು, ಇಂದು ಯುಗಾದಿಯಾಗಿದ್ದು ಸಿಹಿ ಸುದ್ದಿ ನೀಡುವ ನಿಟ್ಟಿನಲ್ಲಿ ಮುಂಚಿತವಾಗಿಯೇ ಅಭ್ಯರ್ಥಿಗಳ ಹೆಸರನ್ನು ಬಿಡುಗಡೆ ಮಾಡುವುದಾಗಿ ಹೇಳಿದರು.

ಕಾಂಗ್ರೆಸ್ ರಾಷ್ಟ್ರೀಯ ಪಕ್ಷವಾಗಿದ್ದು, ಅವರು ಪಟ್ಟಿ ಬಿಡುಗಡೆ ಮಾಡುವುದಕ್ಕೂ, ಮಾಡದಿರುವುದಕ್ಕೂ ತಮಗೂ ಸಂಬಂಧವಿಲ್ಲ. ನಾವು ನಮ್ಮ ಅಭ್ಯರ್ಥಿಗಳ ಪಟ್ಟಿಯನ್ನು ಪ್ರಥಮ ಹಂತವಾಗಿ ಘೋಷಿಸಿದ್ದು, ಉಳಿದ ಅಭ್ಯರ್ಥಿಗಳ ಪಟ್ಟಿಯನ್ನು ಏಪ್ರಿಲ್ 2ರಂದು ಬಿಡುಗಡೆ ಮಾಡುವುದಾಗಿ ಸುದ್ದಿಗಾರರೊಂದಿಗೆ ಮಾತನಾಡುತ್ತ ತಿಳಿಸಿದರು.

ಅಭ್ಯರ್ಥಿಗಳ ವಿವರ:

ಹಾಸನ-ಎಚ್.ಡಿ.ದೇವೇಗೌಡ

ಬೆಂಗಳೂರು ಗ್ರಾಮಾಂತರ-ಎಚ್.ಡಿ.ಕುಮಾರಸ್ವಾಮಿ

ಮಂಡ್ಯ- ಎನ್.ಚಲುವರಾಯಸ್ವಾಮಿ

ತುಮಕೂರು-ಮುದ್ದಹನುಮಗೌಡ

ಉತ್ತರ ಕನ್ನಡ-ವಿ.ಡಿ.ಹೆಗಡೆ

ಕೋಲಾರ-ಚಂದ್ರಣ್ಣ

ಬೀದರ್-ಸುಭಾಶ್ ನೇಳಗಿ

ಬೆಂಗಳೂರು ಕೇಂದ್ರ-ಜಮೀರ್ ಅಹಮ್ಮದ್ ಖಾನ್

ಗುಲ್ಬರ್ಗಾ-ಬಾಬು ಹೊನ್ನಾ ನಾಯಕ್

ಮೈಸೂರು-ಜೀವಿಜಯ

ಚಾಮರಾಜನಗರ-ಕೋಟೆ ಶಿವಣ್ಣ

ಬೆಂಗಳೂರು ದಕ್ಷಿಣ-ಪ್ರೊ.ರಾಧಾಕೃಷ್ಣ

ಬೆಂಗಳೂರು ಉತ್ತರ-ಸುರೇಂದ್ರ ಬಾಬು

ಮಂಗಳೂರು- ಬಿ.ಮಾಧವ(ಸಿಪಿಐ-ಎಂ)

ಉಡುಪಿ-ರಾಧಾ ಸುಂದರೇಶ್(ಸಿಪಿಐ)

ಚಿಕ್ಕಬಳ್ಳಾಪುರ-ಮನೋಹರ್

ಕೊಪ್ಪಳ-ಇಕ್ಬಾಲ್ ಅನ್ಸಾರಿ

ಚಿತ್ರದುರ್ಗ-ರತ್ನಾಕರ ಬಾಬು
ಸಂಬಂಧಿತ ಮಾಹಿತಿ ಹುಡುಕಿ
ಮತ್ತಷ್ಟು
ಚಂದ್ರೇಗೌಡ ಭಿನ್ನಮತದ ಹಿಂದೆ ಹಿಡನ್ ಅಜೆಂಡಾ: ಡಿಕೆಶಿ
ಭಾರತ್ ನಿರ್ಮಾಣ್ ಹೆಸರು ಬಳಕೆ ವಿರುದ್ಧ ಬಿಜೆಪಿ ಕಿಡಿ
ಅನಂತಮೂರ್ತಿ ವಿರುದ್ಧ ಜಾಮೀನು ರಹಿತ ವಾರಂಟ್
ನಕ್ಸಲರ ಬಗ್ಗೆ ಮಾಹಿತಿ ನೀಡಿದ್ರೆ ಲಕ್ಷ ರೂ.ಇನಾಮು
ಡಿ.ಮಂಜುನಾಥ್‌ಗೆ ಟಿಕೆಟ್ ನೀಡಬೇಡಿ: ಮಾದಿಗ ಸಮಿತಿ
ಕಾಂಗ್ರೆಸ್ ಹಳೆಯ ಅತ್ತೆ ಬಿಜೆಪಿ ಹೊಸ ಸೊಸೆ: ಜಗ್ಗೇಶ್