ಮುಂಬರುವ ಲೋಕಸಭಾ ಚುನಾವಣೆ ದೇಶಪ್ರೇಮಿ ಹಾಗೂ ದೇಶಭ್ರಷ್ಟರ ನಡುವಿನ ಹೋರಾಟವಾಗಲಿದೆ ಎಂದು ರಾಜ್ಯ ಬಿಜೆಪಿ ಅಧ್ಯಕ್ಷ, ಉಡುಪಿ-ಚಿಕ್ಕಮಗಳೂರು ಲೋಕಸಭಾ ಕ್ಷೇತ್ರದ ಅಭ್ಯರ್ಥಿ ಡಿ.ವಿ.ಸದಾನಂದ ಗೌಡ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.
ಅವರು ಉಡುಪಿ ಕುಂಜಿಬೆಟ್ಟು ಕಚೇರಿಯಲ್ಲಿ ಚುನಾವಣಾ ಕಾರ್ಯಾಲಯ ಉದ್ಘಾಟಿಸಿ ಮಾತನಾಡುತ್ತ, ಹಿಂದೆ ಎನ್‌ಡಿಎ ಸರ್ಕಾರವಿದ್ದಾಗ ವಾಜಪೇಯಿ ನೇತೃತ್ವದಲ್ಲಿ ದೇಶ ಪ್ರಗತಿಯನ್ನು ಸಾಧಿಸಿತು. ಯುಪಿಎ ಸರ್ಕಾರ ಕೇವಲ ಆಶ್ವಾಸನೆ ಮಾತ್ರ ನೀಡಿದೆ. ಡಾ.ಮನಮೋಹನ್ ಸಿಂಗ್ ಅವರ ಆಡಳಿತ ಕರಾಳ ಆಡಳಿತ ಎಂದು ಟೀಕಿಸಿದರು.
ಕಾಂಗ್ರೆಸ್ ಮತ್ತು ಮಿತ್ರ ಪಕ್ಷಗಳಿಗೆ ಅವರ ಕುಟಿಲ ನೀತಿ ಗೊತ್ತಾಗಿದೆ. ಆದ್ದರಿಂದ ಮಿತ್ರ ಪಕ್ಷಗಳು ಕಾಂಗ್ರೆಸ್ ತೊರೆಯುತ್ತಿವೆ. ಅಭಿವೃದ್ಧಿಯೊಂದೇ ಮೂಲಮಂತ್ರವಾಗಿರುವ ಬಿಜೆಪಿ ಎಲ್.ಕೆ.ಆಡ್ವಾಣಿ ಅವರನ್ನು ಪ್ರಧಾನಿಯಾಗಿಸಲು ಕಂಕಣಬದ್ದವಾಗಿದೆ ಎಂದರು. |