ಮುಖ್ಯ ಪುಟ > ಸುದ್ದಿ ಜಗತ್ತು > ಸುದ್ದಿಗಳು > ರಾಜ್ಯ ಸುದ್ದಿ > ಪ್ರಥಮ ಹಂತ: ಇಂದಿನಿಂದ ನಾಮಪತ್ರ ಸಲ್ಲಿಕೆ
ಸಲಹೆ/ಪ್ರತಿಕ್ರಿಯೆಮಿತ್ರನಿಗೆ ಕಳುಹಿಸಿಈ ಪುಟ ಮುದ್ರಿಸಿ
 
ಪ್ರಥಮ ಹಂತ: ಇಂದಿನಿಂದ ನಾಮಪತ್ರ ಸಲ್ಲಿಕೆ
ರಾಜ್ಯದ ಪ್ರಥಮ ಹಂತದ ಲೋಕಸಭಾ ಚುನಾವಣೆಯ 17 ಕ್ಷೇತ್ರಗಳಿಗೆ ಶನಿವಾರದಿಂದ ನಾಮಪತ್ರ ಸಲ್ಲಿಕೆಗೆ ಅಧಿಸೂಚನೆ ಹೊರಡಿಸಲಾಗಿದೆ.

ಏಪ್ರಿಲ್ 23ರಂದು ಚುನಾವಣೆ ನಡೆಯಲಿರುವ 17 ಲೋಕಸಭಾ ಕ್ಷೇತ್ರಗಳಿಗೆ ಹಾಗೂ ಒಂದು ವಿಧಾನಸಭಾ ಕ್ಷೇತ್ರಕ್ಕೆ ನಾಮಪತ್ರ ಸಲ್ಲಿಸಲು ಇಂದಿನಿಂದ ಪ್ರಕ್ರಿಯೆ ಆರಂಭಗೊಂಡಿದೆ.

ಏಪ್ರಿಲ್ 4ರವರೆಗೆ ನಾಮಪತ್ರ ಸಲ್ಲಿಕೆಗೆ ಅವಕಾಶ, ಈ ಅವಧಿಯಲ್ಲಿ ಪ್ರತಿದಿನ ಬೆಳಿಗ್ಗೆ 11ರಿಂದ ಮಧ್ನಾಹ್ನ 3ರವರೆಗೆ ನಾಮಪತ್ರ ಸಲ್ಲಿಸಬಹುದಾಗಿದೆ ಎಂದು ಚುನಾವಣಾ ಅಧಿಕಾರಿಗಳು ತಿಳಿಸಿದ್ದಾರೆ.

ನಾಮಪತ್ರ ಪರಿಶೀಲನೆ ಏ.6ರಂದು ನಡೆಯಲಿದೆ. ನಾಮಪತ್ರ ವಾಪಸ್ ಪಡೆಯಲು ಏ.8 ಅಂತಿಮ ದಿನ ಎಂದು ಆಯೋಗ ಹೇಳಿಕೆಯಲ್ಲಿ ವಿವರಿಸಿದೆ. ಏಪ್ರಿಲ್ 23ರ ಪ್ರಥಮ ಹಂತದಲ್ಲಿ ಚಿಕ್ಕೋಡಿ, ಬೆಳಗಾವಿ, ವಿಜಾಪುರ(ಪ.ಜಾ), ಗುಲ್ಬರ್ಗಾ(ಪ.ಜಾ), ರಾಯಚೂರು(ಪ.ಪಂ), ಬೀದರ್, ಕೊಪ್ಪಳ, ಬಳ್ಳಾರಿ(ಪ.ಜಾ), ಉತ್ತರ ಕನ್ನಡ, ಚಿತ್ರದುರ್ಗ(ಪ.ಜಾ), ತುಮಕೂರು, ಬೆಂಗಳೂರು ಗ್ರಾಮಾಂತರ, ಬೆಂಗಳೂರು ಉತ್ತರ, ಬೆಂಗಳೂರು ಸೆಂಟ್ರಲ್, ಬೆಂಗಳೂರು ದಕ್ಷಿಣ, ಚಿಕ್ಕಬಳ್ಳಾಪುರ ಮತ್ತು ಕೋಲಾರ(ಪ.ಜಾ)ಲೋಕಸಭಾ ಕ್ಷೇತ್ರಗಳಿಗೆ ಚುನಾವಣೆ ನಡೆಯಲಿದೆ.
ಸಂಬಂಧಿತ ಮಾಹಿತಿ ಹುಡುಕಿ
ಮತ್ತಷ್ಟು
ದೇಶಪ್ರೇಮಿ-ದೇಶಭ್ರಷ್ಟರ ನಡುವಿನ ಹೋರಾಟ: ಸದಾನಂದ ಗೌಡ
ಕಾಂಗ್ರೆಸ್ ಪಟ್ಟಿ ನಾಳೆ ಬಿಡುಗಡೆ: ಆಸ್ಕರ್
ಮಾನನಷ್ಟ ಮೊಕದ್ದಮೆ ವಜಾಗೊಳಿಸುವಂತೆ ಎಚ್‌ಡಿಕೆ ಕೋರ್ಟ್‌ಗೆ ಅರ್ಜಿ
ಲೋಕಸಭೆ: ಜೆಡಿಎಸ್ ಪ್ರಥಮಪಟ್ಟಿ ಬಿಡುಗಡೆ
ಚಂದ್ರೇಗೌಡ ಭಿನ್ನಮತದ ಹಿಂದೆ ಹಿಡನ್ ಅಜೆಂಡಾ: ಡಿಕೆಶಿ
ಭಾರತ್ ನಿರ್ಮಾಣ್ ಹೆಸರು ಬಳಕೆ ವಿರುದ್ಧ ಬಿಜೆಪಿ ಕಿಡಿ