ಮುಖ್ಯ ಪುಟ > ಸುದ್ದಿ ಜಗತ್ತು > ಸುದ್ದಿಗಳು > ರಾಜ್ಯ ಸುದ್ದಿ > ಪಾಲಿಕೆ ಮೇಲೆ ರಾಷ್ಟ್ರಧ್ವಜ ಮಾತ್ರ ಹಾರಾಡಬೇಕು: ಹೈಕೋರ್ಟ್
ಸಲಹೆ/ಪ್ರತಿಕ್ರಿಯೆಮಿತ್ರನಿಗೆ ಕಳುಹಿಸಿಈ ಪುಟ ಮುದ್ರಿಸಿ
 
ಪಾಲಿಕೆ ಮೇಲೆ ರಾಷ್ಟ್ರಧ್ವಜ ಮಾತ್ರ ಹಾರಾಡಬೇಕು: ಹೈಕೋರ್ಟ್
ಗಡಿನಾಡಾದ ಬೆಳಗಾವಿ ನೂತನ ಮಹಾನಗರ ಪಾಲಿಕೆ ಕಟ್ಟಡದ ಮೇಲೆ ರಾಷ್ಟ್ರಧ್ವಜ ಮಾತ್ರ ಹಾರಿಸಲಾಗುವುದು. ಭಗವಾಧ್ವಜ ಸೇರಿದಂತೆ ಬೇರೆ ಯಾವುದೇ ಧ್ವಜ ಹಾರಾಟಕ್ಕೆ ಅವಕಾಶ ಇಲ್ಲ ಎಂದು ಪಾಲಿಕೆ ಆಯುಕ್ತರು ಹೈಕೋರ್ಟ್‌ಗೆ ಪ್ರಮಾಣ ಪತ್ರ ಸಲ್ಲಿಸುವ ಮೂಲಕ ಧ್ವಜ ವಿವಾದ ಅಂತ್ಯಕಂಡಂತಾಗಿದೆ.

ಬೆಳಗಾವಿ ಪಾಲಿಕೆ ಕಚೇರಿ ಮೇಲೆ ಹಾರಿಸಿರುವ ಭಗವಾಧ್ವಜ ತೆರವು ಕೋರಿ ಭೀಮಪ್ಪ ಗುಂಡಪ್ಪ ಗಡಾದ ಎಂಬವರು ಸಲ್ಲಿಸಿದ್ದ ಸಾರ್ವಜನಿಕ ಹಿತಾಸಕ್ತಿ ಅರ್ಜಿಯನ್ನು ಮುಖ್ಯ ನ್ಯಾ. ದಿನಕರನ್ ಮತ್ತು ನ್ಯಾ. ಸಭಾಹಿತ್ ಅವರಿದ್ದ ವಿಭಾಗಿಯ ಪೀಠ ಕೂಡ ವಿಚಾರಣೆ ನಡೆಸಿ, ಪಾಲಿಕೆ ಮೇಲೆ ರಾಷ್ಟ್ರಧ್ವಜ ಮಾತ್ರ ಹಾರಾಡಬೇಕು ಎಂದು ಆದೇಶ ನೀಡುವ ಮೂಲಕ ವಿವಾದಕ್ಕೆ ತೆರೆ ಎಳೆದಿದೆ.

ಇತ್ತೀಚೆಗಷ್ಟೇ ಮಹಾನಗರ ಪಾಲಿಕೆ ಮೇಲೆ ಆಡಳಿತಾರೂಢ ಸಂಸದ ಸುರೇಶ್ ಅಂಗಡಿ ಹಾಗೂ ಶಾಸಕ ಪಾಟೀಲ್ ಮರಾಠಿಗರ ಭಗವಾಧ್ವಜವನ್ನು ಹಾರಿಸಲು ಬೆಂಬಲ ವ್ಯಕ್ತಪಡಿಸಿ, ರಾಜಕೀಯ ಹಾಗೂ ಕನ್ನಡ ಪರ ಸಂಘಟನೆಗಳ ಕೆಂಗಣ್ಣಿಗೆ ಗುರಿಯಾಗಿದ್ದರು. ಬಳಿಕ ಕನ್ನಡಿಗರ ಕ್ಷಮೆ ಕೋರುವ ಮೂಲಕ ವಿವಾದಕ್ಕೆ ಅಂತ್ಯ ಹಾಡಲು ಯತ್ನಿಸಿದ್ದರು. ಆದರೂ ಕನ್ನಡ ಪರ ಸಂಘಟನೆಗಳು ಕನ್ನಡ ದ್ರೋಹಿ ಅಂಗಡಿಗೆ ಲೋಕಸಭೆಗೆ ಸ್ಪರ್ಧಿಸಲು ಬಿಜೆಪಿ ಟಿಕೆಟ್ ನೀಡಬಾರದೆಂದು ಪಟ್ಟು ಹಿಡಿದಿದ್ದವು.

ಇದೀಗ ಹಲವು ವರ್ಷಗಳಿಂದ ಕನ್ನಡಿಗರು ಮತ್ತು ಮರಾಠಿಗರ ನಡುವೆ ಸಂಘರ್ಷಕ್ಕೆ ಕಾರಣವಾಗಿದ್ದ ಬೆಳಗಾವಿ ಪಾಲಿಕೆ ಮೇಲಿನ ಭಗವಾಧ್ವಜ ವಿವಾದಕ್ಕೆ ಮುಕ್ತಿ ಸಿಕ್ಕಂತಾಗಿದೆ. ಭಗವಾಧ್ವಜವನ್ನು ತೆರವುಗೊಳಿಸಿ, ಕನ್ನಡ ಬಾವುಟ ಹಾರಿಸಬೇಕೆಂದು ಕನ್ನಡ ಪರ ಸಂಘಟನೆಗಳು ಪಾಲಿಕೆಯನ್ನು ಅಗ್ರಹಿಸಿದ್ದರು.
ಸಂಬಂಧಿತ ಮಾಹಿತಿ ಹುಡುಕಿ
ಮತ್ತಷ್ಟು
ಚುನಾವಣೆ ಖರ್ಚಿಗಾಗಿ ನೈಸ್‌‌ಗೆ ಭೂಮಿ ಮಾರಾಟ: ಎಚ್‌ಡಿಕೆ
ಪ್ರಥಮ ಹಂತ: ಇಂದಿನಿಂದ ನಾಮಪತ್ರ ಸಲ್ಲಿಕೆ
ದೇಶಪ್ರೇಮಿ-ದೇಶಭ್ರಷ್ಟರ ನಡುವಿನ ಹೋರಾಟ: ಸದಾನಂದ ಗೌಡ
ಕಾಂಗ್ರೆಸ್ ಪಟ್ಟಿ ನಾಳೆ ಬಿಡುಗಡೆ: ಆಸ್ಕರ್
ಮಾನನಷ್ಟ ಮೊಕದ್ದಮೆ ವಜಾಗೊಳಿಸುವಂತೆ ಎಚ್‌ಡಿಕೆ ಕೋರ್ಟ್‌ಗೆ ಅರ್ಜಿ
ಲೋಕಸಭೆ: ಜೆಡಿಎಸ್ ಪ್ರಥಮಪಟ್ಟಿ ಬಿಡುಗಡೆ