ಮುಖ್ಯ ಪುಟ > ಸುದ್ದಿ ಜಗತ್ತು > ಸುದ್ದಿಗಳು > ರಾಜ್ಯ ಸುದ್ದಿ > ಮತದಾರರಿಗೆ ಸಿಮ್‌ಕಾರ್ಡ್ ವಿತರಿಸಿಲ್ಲ: ಅನಂತ್ ಕುಮಾರ್
ಸಲಹೆ/ಪ್ರತಿಕ್ರಿಯೆಮಿತ್ರನಿಗೆ ಕಳುಹಿಸಿಈ ಪುಟ ಮುದ್ರಿಸಿ
 
ಮತದಾರರಿಗೆ ಸಿಮ್‌ಕಾರ್ಡ್ ವಿತರಿಸಿಲ್ಲ: ಅನಂತ್ ಕುಮಾರ್
ಮತದಾರರನ್ನು ಒಲೈಸಲು ನಾನಾ ಕಸರತ್ತು ನಡೆಸುತ್ತಿರುವ ರಾಜಕೀಯ ಮುಖಂಡರು ಚುನಾವಣಾ ಆಯೋಗದ ಹದ್ದಿನ ಕಣ್ಣು ತಪ್ಪಿಸಲು ಹರಸಾಹಸ ಪಡುತ್ತಿದ್ದಾರೆ. ಇದೀಗ ಬೆಂಗಳೂರು ದಕ್ಷಿಣ ಲೋಕಸಭಾ ಕ್ಷೇತ್ರದ ಅಭ್ಯರ್ಥಿ ಅನಂತ್ ಕುಮಾರ್ ಚುನಾವಣಾ ಆಯೋಗದ ಚುನಾವಣಾ ನೀತಿ ಸಂಹಿತೆ ಉಲ್ಲಂಘನೆ ಆರೋಪವನ್ನು ಎದುರಿಸುತ್ತಿದ್ದಾರೆ.

ಮತದಾರರಿಗೆ ಸಿಮ್ ಕಾರ್ಡ್ ವಿತರಿಸಿದ್ದಾರೆ ಎಂಬ ಆರೋಪವನ್ನು ಅವರು ಎದುರಿಸುತ್ತಿದ್ದಾರೆ. ಆದರೆ ಇದನ್ನು ತಳ್ಳಿ ಹಾಕಿರುವ ಅನಂತ‌್‌ಕುಮಾರ್ ನನ್ನ ಮೇಲಿನ ಆರೋಪ ಸತ್ಯಕ್ಕೆ ದೂರ. ಚುನಾವಣೆ ಪಾರದರ್ಶಕವಾಗಿ ನಡೆಯಬೇಕು ಎನ್ನುವುದು ಕಳೆದ ಎರಡು ದಶಕಗಳಿಂದ ನಾನು ಪ್ರತಿಪಾದಿಸುತ್ತಾ ಬಂದಿದ್ದೇನೆ. ನೀತಿ ಸಂಹಿತೆಯನ್ನು ಕಟ್ಟುನಿಟ್ಟಾಗಿ ಅನುಸರಿಸಿದ್ದೇನೆ ಎಂದಿದ್ದಾರೆ.

ಆದರೆ ಈ ಸಂಬಂಧ ನನ್ನ ವಿರುದ್ಧ ಯಾರು ದೂರು ಕೊಟ್ಟಿದ್ದಾರೆ ಎನ್ನುವುದು ಗೊತ್ತಿಲ್ಲ. ಈ ಬಗ್ಗೆ ತನಿಖೆ ನಡೆಸಿ ಮುಂದಿನ ಕ್ರಮ ಕೈಗೊಳ್ಳುವ ಸಂಪೂರ್ಣ ಅಧಿಕಾರ ಚುನಾವಣಾ ಆಯೋಗಕ್ಕಿದೆ ಎಂದು ಅವರು ತಿಳಿಸಿದ್ದಾರೆ.

ಇದೇ ವೇಳೆ ಕಾಂಗ್ರೆಸ್ ವಿರುದ್ಧ ಹರಿಹಾಯ್ದ ಅನಂತ್ ಕುಮಾರ್, ಇತರೆ ಪಕ್ಷಗಳ ಅಭ್ಯರ್ಥಿಯನ್ನು ಪ್ರಕಟಿಸಿಲ್ಲ. ಇತರೆ ಪಕ್ಷಗಳ ಅಭ್ಯರ್ಥಿಗಳಿಗಾಗಿ ಹೊಂಚು ಹಾಕುತ್ತಿದೆ. ಆದರೆ ಬೆಂಗಳೂರು ದಕ್ಷಿಣ ಲೋಕಸಭಾ ಕ್ಷೇತ್ರದ ಜನತೆ ಮಾತ್ರ ನಿರಂತರವಾಗಿ ಕಾಂಗ್ರೆಸ್ಸೇತರ ಅಭ್ಯರ್ಥಿಗಳನ್ನು ಗೆಲ್ಲಿಸುತ್ತಾ ಬಂದಿದ್ದಾರೆ ಎಂದರು.
ಸಂಬಂಧಿತ ಮಾಹಿತಿ ಹುಡುಕಿ
ಮತ್ತಷ್ಟು
ಪಾಲಿಕೆ ಮೇಲೆ ರಾಷ್ಟ್ರಧ್ವಜ ಮಾತ್ರ ಹಾರಾಡಬೇಕು: ಹೈಕೋರ್ಟ್
ಚುನಾವಣೆ ಖರ್ಚಿಗಾಗಿ ನೈಸ್‌‌ಗೆ ಭೂಮಿ ಮಾರಾಟ: ಎಚ್‌ಡಿಕೆ
ಪ್ರಥಮ ಹಂತ: ಇಂದಿನಿಂದ ನಾಮಪತ್ರ ಸಲ್ಲಿಕೆ
ದೇಶಪ್ರೇಮಿ-ದೇಶಭ್ರಷ್ಟರ ನಡುವಿನ ಹೋರಾಟ: ಸದಾನಂದ ಗೌಡ
ಕಾಂಗ್ರೆಸ್ ಪಟ್ಟಿ ನಾಳೆ ಬಿಡುಗಡೆ: ಆಸ್ಕರ್
ಮಾನನಷ್ಟ ಮೊಕದ್ದಮೆ ವಜಾಗೊಳಿಸುವಂತೆ ಎಚ್‌ಡಿಕೆ ಕೋರ್ಟ್‌ಗೆ ಅರ್ಜಿ