ಮುಖ್ಯ ಪುಟ > ಸುದ್ದಿ ಜಗತ್ತು > ಸುದ್ದಿಗಳು > ರಾಜ್ಯ ಸುದ್ದಿ > ನೀತಿ ಸಂಹಿತೆ ಉಲ್ಲಂಘನೆಯಲ್ಲಿ ಬಿಜೆಪಿ ನಂ-1
ಸಲಹೆ/ಪ್ರತಿಕ್ರಿಯೆಮಿತ್ರನಿಗೆ ಕಳುಹಿಸಿಈ ಪುಟ ಮುದ್ರಿಸಿ
 
ನೀತಿ ಸಂಹಿತೆ ಉಲ್ಲಂಘನೆಯಲ್ಲಿ ಬಿಜೆಪಿ ನಂ-1
ಮುಖ್ಯಮಂತ್ರಿ ಯಡಿಯೂರಪ್ಪ-ಪುತ್ರ ರಾಘವೇಂದ್ರ ಪ್ರಮುಖರು...
NRB
ರಾಜ್ಯದಲ್ಲಿ ಚುನಾವಣಾ ನೀತಿ ಸಂಹಿತೆ ಉಲ್ಲಂಘಿಸುವುದರಲ್ಲಿ ಆಡಳಿತಾರೂಢ ಬಿಜೆಪಿ ಪಕ್ಷ ನಂ.1ಸ್ಥಾನ ಪಡೆದಿರುವುದಾಗಿ ಚುನಾವಣಾ ಆಯೋಗ ತಿಳಿಸಿದೆ.

ಲೋಕಸಭಾ ಚುನಾವಣೆ ಘೋಷಣೆಯಾಗಿರುವ ಹಿನ್ನೆಲೆಯಲ್ಲಿ ದೇಶಾದ್ಯಂತ ನೀತಿ ಸಂಹಿತೆ ಜಾರಿಯಲ್ಲಿದ್ದರು ಕೂಡ ರಾಜಕೀಯ ಪಕ್ಷಗಳು ನೀತಿ ಸಂಹಿತೆಯನ್ನು ಉಲ್ಲಂಘಿಸುವುದರಲ್ಲಿ ಮುಂಚೂಣಿಯಲ್ಲಿವೆ. ಅದರಲ್ಲೂ ರಾಜ್ಯದಲ್ಲಿ ಬಿಜೆಪಿ 24 ನೀತಿ ಸಂಹಿತೆಯನ್ನು ಉಲ್ಲಂಘಿಸುವ ಮೂಲಕ ಪ್ರಥಮ ಸ್ಥಾನದಲ್ಲಿದೆ ಎಂದು ಆಯೋಗ ಹೇಳಿದೆ.

ಒಟ್ಟು 450 ಪ್ರಕರಣಗಳು ದಾಖಲಾಗಿದ್ದು, ಅದರಲ್ಲಿ ಬಿಜೆಪಿ 24, ಕಾಂಗ್ರೆಸ್ 7 ಹಾಗೂ ಜೆಡಿಎಸ್ 4 ನೀತಿ ಸಂಹಿತೆ ಪ್ರಕರಣಗಳನ್ನು ಉಲ್ಲಂಘಿಸಿದೆ ಎಂದು ವಿವರಿಸಿದೆ.

ನೀತಿ ಸಂಹಿತೆ ಉಲ್ಲಂಘಿಸುವುದರಲ್ಲಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಹಾಗೂ ಪುತ್ರ, ಶಿವಮೊಗ್ಗ ಲೋಕಸಭಾ ಕ್ಷೇತ್ರದ ಅಭ್ಯರ್ಥಿ ಬಿ.ವೈ.ರಾಘವೇಂದ್ರ ಪ್ರಮುಖರಾಗಿದ್ದಾರೆ ಎಂದು ಆಯೋಗ ತಿಳಿಸಿದೆ.
ಸಂಬಂಧಿತ ಮಾಹಿತಿ ಹುಡುಕಿ
ಮತ್ತಷ್ಟು
ಪೂಣೆ ಹತ್ಯೆ: ಹತ್ತು ಆರೋಪಿಗಳು ಸಿಸಿಬಿ ಪೊಲೀಸರ ಬಲೆಗೆ
ಮತದಾರರಿಗೆ ಸಿಮ್‌ಕಾರ್ಡ್ ವಿತರಿಸಿಲ್ಲ: ಅನಂತ್ ಕುಮಾರ್
ಪಾಲಿಕೆ ಮೇಲೆ ರಾಷ್ಟ್ರಧ್ವಜ ಮಾತ್ರ ಹಾರಾಡಬೇಕು: ಹೈಕೋರ್ಟ್
ಚುನಾವಣೆ ಖರ್ಚಿಗಾಗಿ ನೈಸ್‌‌ಗೆ ಭೂಮಿ ಮಾರಾಟ: ಎಚ್‌ಡಿಕೆ
ಪ್ರಥಮ ಹಂತ: ಇಂದಿನಿಂದ ನಾಮಪತ್ರ ಸಲ್ಲಿಕೆ
ದೇಶಪ್ರೇಮಿ-ದೇಶಭ್ರಷ್ಟರ ನಡುವಿನ ಹೋರಾಟ: ಸದಾನಂದ ಗೌಡ