ಕರ್ನಾಟಕ ಹೌಸಿಂಗ್ ಬೋರ್ಡ್‌ನಿಂದ ಶಿಡ್ಲಘಟ್ಟದ ಸರಗೂರು, ಚಿಕ್ಕಬಳ್ಳಾಪುರ, ಹೊರ ವಲಯಗಳಲ್ಲಿ ನಿವೇಶನ, ವಸತಿ ನಿರ್ಮಿಸುವುದಾಗಿ ಹೇಳಿ ಸರ್ಕಾರ ರೈತರ ಭೂಮಿಯನ್ನು ಕಬಳಿಸುತ್ತಿದೆ ಎಂದು ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಆರೋಪಿಸಿದ್ದಾರೆ.
ಈ ಭೂಮಿಯನ್ನು ಹೌಸಿಂಗ್ ಬೋರ್ಡ್ ಹೆಸರಿನಲ್ಲಿ ಸಚಿವ ಕೃಷ್ಣಯ್ಯ ಶೆಟ್ಟಿ ಅವರ ಸಹೋದರನ ಹೆಸರಲ್ಲಿ ಜಿಪಿಎ ಮಾಡಿಕೊಳ್ಳಲಾಗಿದೆ ಎಂದು ಸುದ್ದಿಗಾರರೊಂದಿಗೆ ಮಾತನಾಡುತ್ತ ಹೇಳಿದರು.
ಹೌಸಿಂಗ್ ಬೋರ್ಡ್ ಹೆಸರಲ್ಲಿ ರೈತರ ಭೂಮಿಯನ್ನು ಕಡಿಮೆ ಬೆಲೆಗೆ ಪಡೆದು ಹಣ ಲೂಟಿ ಮಾಡಲಾಗುತ್ತದೆ. ಇದು ಇದೇ ರೀತಿ ಮುಂದುವರಿದರೆ ಹೌಸಿಂಗ್ ಬೋರ್ಡ್ ಬಾಗಿಲು ಹಾಕಿಕೊಳ್ಳಬೇಕಾಗುತ್ತದೆ ಎಂದು ದೂರಿದರು.
ಜನತೆಗೆ ನಿವೇಶನ, ವಸತಿ ನೀಡದೇ ಭೂಮಿ ಕಬಳಿಸುತ್ತಿರುವ ಸಚಿವ ಕೃಷ್ಣಯ್ಯ ಶೆಟ್ಟಿ ಈ ಹಗರಣದಿಂದ ಜೈಲಿಗೆ ಹೋಗುವ ಪರಿಸ್ಥಿತಿ ಬರುತ್ತದೆ ಎಂದು ಅವರು ದೂರಿದರು. ಈ ಬಗ್ಗೆ ಸಹ ಜೆಡಿಎಸ್ ಚುನಾವಣಾ ಆಯೋಗಕ್ಕೆ ದೂರು ನೀಡಲಿದೆ ಎಂದು ಹೇಳಿದರು. |