ಮುಖ್ಯ ಪುಟ > ಸುದ್ದಿ ಜಗತ್ತು > ಸುದ್ದಿಗಳು > ರಾಜ್ಯ ಸುದ್ದಿ > ಲೋಕಸಭಾ ಚುನಾವಣೆ: ಕೊನೆಗೂ ಕಾಂಗ್ರೆಸ್ ಪಟ್ಟಿ ಪ್ರಕಟ
ಸಲಹೆ/ಪ್ರತಿಕ್ರಿಯೆಮಿತ್ರನಿಗೆ ಕಳುಹಿಸಿಈ ಪುಟ ಮುದ್ರಿಸಿ
 
ಲೋಕಸಭಾ ಚುನಾವಣೆ: ಕೊನೆಗೂ ಕಾಂಗ್ರೆಸ್ ಪಟ್ಟಿ ಪ್ರಕಟ
ಕೊನೆಗೂ ಕಾಂಗ್ರೆಸ್ ಮೊದಲ ಹಂತದ ಅಭ್ಯರ್ಥಿಗಳ ಪಟ್ಟಿ ಬಿಡುಗಡೆಯಾಗಿದೆ. 28 ಲೋಕಸಭಾ ಕ್ಷೇತ್ರಗಳ ಪೈಕಿ 22 ಕ್ಷೇತ್ರಗಳಿಗೆ ಕಾಂಗ್ರೆಸ್ ತನ್ನ ಅಭ್ಯರ್ಥಿಗಳನ್ನು ಘೋಷಿಸಿದೆ. ಉತ್ತರ ಕನ್ನಡ, ಚಿಕ್ಕಬಳ್ಳಾಪುರ, ಬೆಂಗಳೂರು ದಕ್ಷಿಣ, ಮಂಡ್ಯ, ಚಾಮರಾಜನಗರ ಹಾಗೂ ಉಡುಪಿ-ಚಿಕ್ಕಮಗಳೂರು ಕ್ಷೇತ್ರಗಳನ್ನು ಹೊರತುಪಡಿಸಿ ಉಳಿದ 22 ಕ್ಷೇತ್ರಗಳಿಗೆ ತನ್ನ ಅಭ್ಯರ್ಥಿಗಳನ್ನು ಕಾಂಗ್ರೆಸ್ ಪ್ರಕಟಿಸಿದೆ.

ಅಮೆರಿಕ ಜತೆಗಿನ ಅಣು ಒಪ್ಪಂದದ ಸಂದರ್ಭದಲ್ಲಿ ಯುಪಿಎ ಸರ್ಕಾರದ ಪರವಾಗಿ ಮತ ಚಲಾಯಿಸಿ ಕಾಂಗ್ರೆಸ್ ಸೇರ್ಪಡೆಯಾದ ಮೂವರು ಬಿಜೆಪಿ ಸಂಸದರ ಪೈಕಿ ಇಬ್ಬರನ್ನು ಕಾಂಗ್ರೆಸ್ ಕೈ ಹಿಡಿದಿದೆ. ವಿಧಾನಸಭೆ ಪ್ರತಿಪಕ್ಷ ಸ್ಥಾನದ ನಾಯಕ ಮಲ್ಲಿಕಾರ್ಜುನ ಖರ್ಗೆ ಅವರಿಗೆ ಕಲ್ಬುರ್ಗಿ ಕ್ಷೇತ್ರದಿಂದ ಸ್ಪರ್ಧಿಸಲು ಟಿಕೆಟ್ ನೀಡಿದೆ. ಬೀದರ್ ಕ್ಷೇತ್ರದಿಂದ ಧರಂಸಿಂಗ್ ಟಿಕೆಟ್ ಪಡೆದಿದ್ದಾರೆ.

ಜೆಡಿಎಸ್‌ ವರಿಷ್ಠ ದೇವೇಗೌಡರ ವಿರುದ್ಧ ಅವರ ರಾಜಕೀಯ ವೈರಿ ಗಂಡಸಿ ಶಿವರಾಂ ಅವರನ್ನೇ ಕಣಕ್ಕಿಳಿಸಲು ಕಾಂಗ್ರೆಸ್ ಮುಂದಾಗಿದೆ. ಮೈಸೂರಿನಿಂದ ಮಾಜಿ ಸಚಿವ ಎಚ್. ವಿಶ್ವನಾಥ್ ಟಿಕೆಟ್ ಪಡೆದಿದ್ದಾರೆ.

ಕಾಂಗ್ರೆಸ್ ಪಟ್ಟಿ ಹೀಗಿದೆ: ಬೀದರ್- ಧರಂ ಸಿಂಗ್, ವಿಜಾಪುರ- ಪ್ರಕಾಶ್ ರಾಥೋಡ್, ಚಿಕ್ಕೌಡಿ- ಪ್ರಕಾಶ್ ಹುಕ್ಕೇರಿ, ಬೆಳಗಾವಿ- ಅಮರಸಿಂಹ ಪಾಟೀಲ, ಕೊಪ್ಪಳ- ರಾಯರೆಡ್ಡಿ, ಚಿತ್ರದುರ್ಗ- ತಿಪ್ಪೇಸ್ವಾಮಿ, ಹಾಸನ- ಗಂಡಸಿ ಶಿವರಾಂ, ತುಮಕೂರು- ಪಿ. ಕೋದಂಡರಾಮಯ್ಯ, ಕೋಲಾರ- ಕೆ.ಎಚ್. ಮುನಿಯಪ್ಪ, ಬೆಂಗಳೂರು ಉತ್ತರ- ಷರೀಫ್, ಬೆಂಗಳೂರು ಗ್ರಾಮೀಣ- ತೇಜಸ್ವಿನಿ, ಬಾಗಲಕೋಟೆ- ಜೆ.ಟಿ.ಪಾಟೀಲ, ಧಾರವಾಡ- ಮಂಜುನಾಥ ಕುನ್ನೂರು, ದಾವಣಗೆರೆ-ಎಸ್.ಎಸ್. ಮಲ್ಲಿಕಾರ್ಜುನ, ಕಲ್ಬುರ್ಗಿ- ಮಲ್ಲಿಕಾರ್ಜುನ ಖರ್ಗೆ, ಶಿವಮೊಗ್ಗ- ಎಸ್. ಬಂಗಾರಪ್ಪ, ಬಳ್ಳಾರಿ- ಹನುಮಂತಪ್ಪ, ಹಾವೇರಿ-ಸಲೀಂ ಅಹ್ಮದ್, ಮೈಸೂರು-ಎಚ್. ವಿಶ್ವನಾಥ್, ಕೇಂದ್ರ- ಎಚ್.ಟಿ. ಸಾಂಗ್ಲಿಯಾನ, ದ.ಕ-ಜನಾರ್ದನ ಪೂಜಾರಿ.
ಸಂಬಂಧಿತ ಮಾಹಿತಿ ಹುಡುಕಿ
ಮತ್ತಷ್ಟು
ಸರ್ಕಾರದಿಂದ ಹೌಸಿಂಗ್ ಬೋರ್ಡ್ ಹಗರಣ: ಕುಮಾರಸ್ವಾಮಿ
ಪಟ್ಟಿಯಲ್ಲಿ ಹೆಸರಿಲ್ಲ, ಮತದಾರರ ಅಳಲು...
ಯತ್ನಾಳ್ ಶೀಘ್ರವೇ ಜೆಡಿಎಸ್ ತೆಕ್ಕೆಗೆ?
ನೀತಿ ಸಂಹಿತೆ ಉಲ್ಲಂಘನೆಯಲ್ಲಿ ಬಿಜೆಪಿ ನಂ-1
ಪೂಣೆ ಹತ್ಯೆ: ಹತ್ತು ಆರೋಪಿಗಳು ಸಿಸಿಬಿ ಪೊಲೀಸರ ಬಲೆಗೆ
ಮತದಾರರಿಗೆ ಸಿಮ್‌ಕಾರ್ಡ್ ವಿತರಿಸಿಲ್ಲ: ಅನಂತ್ ಕುಮಾರ್