ಮುಖ್ಯ ಪುಟ > ಸುದ್ದಿ ಜಗತ್ತು > ಸುದ್ದಿಗಳು > ರಾಜ್ಯ ಸುದ್ದಿ > ಕಾಂಗ್ರೆಸ್, ಜೆಡಿಎಸ್‌ ಅಸ್ತಿತ್ವ ಕಳೆದುಕೊಳ್ಳಲಿವೆ: ಯಡ್ಡಿ
ಸಲಹೆ/ಪ್ರತಿಕ್ರಿಯೆಮಿತ್ರನಿಗೆ ಕಳುಹಿಸಿಈ ಪುಟ ಮುದ್ರಿಸಿ
 
ಕಾಂಗ್ರೆಸ್, ಜೆಡಿಎಸ್‌ ಅಸ್ತಿತ್ವ ಕಳೆದುಕೊಳ್ಳಲಿವೆ: ಯಡ್ಡಿ
ಬಿಜೆಪಿಯನ್ನು ಕೋಮುವಾದಿ ಪಕ್ಷವೆಂದು ಜರಿಯುತ್ತಿರುವ ಕಾಂಗ್ರೆಸ್ ಮತ್ತು ಜೆಡಿಎಸ್‌ಗಳಿಗೆ ಲೋಕಸಭಾ ಚುನಾವಣೆ ನಂತರ ಅಡ್ರೆಸ್ಸೇ ಇರುವುದಿಲ್ಲ ಎಂದು ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಕಟಕಿಯಾಡಿದ್ದಾರೆ.

ಬಿಜೆಪಿಯನ್ನು ಜಾತಿವಾದಿ ಎಂದು ಕರೆದರೆ ಅದು ಇಡೀ ರಾಜ್ಯದ ಜನತೆಗೆ ಮಾಡಿದ ಅಪಮಾನವಾಗುತ್ತದೆ. ನಿಜವಾದ ಕೋಮುವಾದಿಗಳು ನೀವು- ನಾವಲ್ಲ. ಹಿಂದು, ಮುಸ್ಲಿಂ, ಕ್ರೈಸ್ತರೆಲ್ಲರೂ ಒಂದೇ ರೀತಿ ಬದುಕಬೇಕೆನ್ನುವುದು ಕೋಮುವಾದವೇ ಎಂದು ಪ್ರಶ್ನಿಸಿದರು.

ಹಿಂದಿನ ಮುಖ್ಯಮಂತ್ರಿಯಂತೆ ಸಮಾರಂಭದ ವೇದಿಕೆಗೆ ಬರುವ ಅಂಗವಿಕಲರ ಕೈಗೆ 500 ರೂ. ಕೊಟ್ಟು ಪ್ರಚಾರ ಪಡೆಯುತ್ತಿಲ್ಲ. ಹಳ್ಳಿಗಳಿಗೆ ಮಧ್ಯರಾತ್ರಿ ನಂತರ ತೆರಳಿ, ಬೆಳಗಿನ ಜಾವ ಎದ್ದು ಬರುವ ಮುಖ್ಯಮಂತ್ರಿ ನಾನಲ್ಲ. ಜನಸ್ಪಂದನದ ಮೂಲಕ ಜನರ ಮನೆ ಬಾಗಿಲಿಗೆ ಶಾಶ್ವತವಾಗಿ ಸವಲತ್ತುಗಳನ್ನು ತಲುಪಿಸಲಾಗುತ್ತಿದೆ ಎಂದರು.

ರಕ್ತದಲ್ಲಿ ಬರೆದು ಕೊಡುತ್ತೇವೆ-- ಬಿಜೆಪಿ ಬಗ್ಗೆ ನೀವಿಟ್ಟ ನಂಬಿಕೆ, ವಿಶ್ವಾಸಕ್ಕೆ ದ್ರೋಹ ಬಗೆಯುವುದಿಲ್ಲ. ರಾಜ್ಯಾದ್ಯಂತ ಎಲ್ಲೆಡೆ ಬಿಜೆಪಿ ಅಲೆ ಬೀಸುತ್ತಿದೆ. ಇಂಥ ಅಲೆಯ ನಡುವೆ ಸೋನಿಯಾ ಗಾಂಧಿ ಎದುರು ಒಗ್ಗಟ್ಟು ಪ್ರದರ್ಶಿಸಲು ಹೋಗಿ ಕಾಂಗ್ರೆಸ್ ಬಿಕ್ಕಟ್ಟಿಗೆ ಸಿಲುಕಿಗೆ ಎಂದು ಇದೇ ಸಂದರ್ಭದಲ್ಲಿ ಸೀಎಂ ಲೇವಡಿ ಮಾಡಿದರು.
ಸಂಬಂಧಿತ ಮಾಹಿತಿ ಹುಡುಕಿ
ಮತ್ತಷ್ಟು
ಲೋಕಸಭಾ ಚುನಾವಣೆ: ಕೊನೆಗೂ ಕಾಂಗ್ರೆಸ್ ಪಟ್ಟಿ ಪ್ರಕಟ
ಸರ್ಕಾರದಿಂದ ಹೌಸಿಂಗ್ ಬೋರ್ಡ್ ಹಗರಣ: ಕುಮಾರಸ್ವಾಮಿ
ಪಟ್ಟಿಯಲ್ಲಿ ಹೆಸರಿಲ್ಲ, ಮತದಾರರ ಅಳಲು...
ಯತ್ನಾಳ್ ಶೀಘ್ರವೇ ಜೆಡಿಎಸ್ ತೆಕ್ಕೆಗೆ?
ನೀತಿ ಸಂಹಿತೆ ಉಲ್ಲಂಘನೆಯಲ್ಲಿ ಬಿಜೆಪಿ ನಂ-1
ಪೂಣೆ ಹತ್ಯೆ: ಹತ್ತು ಆರೋಪಿಗಳು ಸಿಸಿಬಿ ಪೊಲೀಸರ ಬಲೆಗೆ