ಮುಖ್ಯ ಪುಟ > ಸುದ್ದಿ ಜಗತ್ತು > ಸುದ್ದಿಗಳು > ರಾಜ್ಯ ಸುದ್ದಿ > ಮೇಯರ್ ಪಟ್ಟ ಕನ್ನಡಿಗರಿಗೆ-ಎಂಇಎಸ್‌ಗೆ ಮುಖಭಂಗ
ಸಲಹೆ/ಪ್ರತಿಕ್ರಿಯೆಮಿತ್ರನಿಗೆ ಕಳುಹಿಸಿಈ ಪುಟ ಮುದ್ರಿಸಿ
 
ಮೇಯರ್ ಪಟ್ಟ ಕನ್ನಡಿಗರಿಗೆ-ಎಂಇಎಸ್‌ಗೆ ಮುಖಭಂಗ
ಕನ್ನಡ ಮತ್ತು ಮರಾಠಿ ಭಾಷೆಯ ಹೋರಾಟದಿಂದ ವಿವಾದದ ಗೂಡಾಗಿದ್ದ ಗಡಿನಾಡಾದ ಬೆಳಗಾವಿ ಮಹಾನಗರ ಪಾಲಿಕೆ ಮೇಯರ್ ಪಟ್ಟ ಕನ್ನಡಿಗರಿಗೆ ಒಲಿಯುವ ಮೂಲಕ ಎಂಇಎಸ್ ಮತ್ತೊಮ್ಮೆ ಮುಖಭಂಗ ಅನುಭವಿಸುವಂತಾಗಿದೆ.

ಸೋಮವಾರ ಮಹಾನಗರ ಪಾಲಿಕೆಯ ಮೇಯರ್ ಮತ್ತು ಉಪಮೇಯರ್ ಗದ್ದುಗೆಗಾಗಿ ನಡೆದ ಚುನಾವಣೆಯಲ್ಲಿ ಕೊನೆಗೂ ಮೇಯರ್ ಪಟ್ಟ ಕನ್ನಡಿಗರ ಪಾಲಾಗಿದೆ.

57ಸದಸ್ಯ ಬಲದ ಬೆಳಗಾವಿ ಮೇಯರ್ ಆಗಿ ಕನ್ನಡಿಗರಾದ ಯಲ್ಲಪ್ಪ ಕುರುಬರ್ ಹಾಗೂ ಉಪ ಮೇಯರ್ ಆಗಿ ಜ್ಯೋತಿ ಬಾವಿಕಟ್ಟೆ ಆಯ್ಕೆಯಾಗಿದ್ದಾರೆ. ಇಂದು ನಡೆದ ಮೇಯರ್ ಚುನಾವಣೆಯ ಆರಂಭದಲ್ಲಿ ಎಂಇಎಸ್ ಕಾರ್ಯಕರ್ತರು ಸಾಕಷ್ಟು ಅಡ್ಡಿ ಉಂಟು ಮಾಡಿದ್ದರು.

ಮೇಯರ್ ಚುನಾವಣೆ ಸಂಬಂಧ ರಾಜ್ಯ ಸರ್ಕಾರ ಜಿಲ್ಲಾ ಉಸ್ತುವಾರಿ ಸಚಿವರಾದ ಬಸವರಾಜ ಬೊಮ್ಮಾಯಿ ಅವರನ್ನು ಮಧ್ಯಸ್ಥಿಕೆ ವಹಿಸಲು ನಿಯೋಜಿಸಲಾಗಿತ್ತು. ಆ ಹಿನ್ನೆಲೆಯಲ್ಲಿ ಮೇಯರ್ ಗಿರಿ ಕನ್ನಡಿಗರಿಗೆ ದೊರೆಯಬೇಕೆಂಬ ಛಲದಿಂದ ಕಾಂಗ್ರೆಸ್, ಬಿಜೆಪಿ ಸದಸ್ಯರೊಂದಿಗೆ ಮಾತುಕತೆ ನಡೆಸಿದ್ದರು.

ಇತ್ತೀಚೆಗಷ್ಟೇ ಸಂಸದ ಸುರೇಶ್ ಅಂಗಡಿ ಅವರು ಪಾಲಿಕೆ ಮೇಲೆ ಭಗವಾಧ್ವಜ ಹಾರಿಸುವ ವಿಚಾರಕ್ಕೆ ಸಂಬಂಧಿಸಿದಂತೆ ಎಂಇಎಸ್‌ಗೆ ಬೆಂಬಲ ನೀಡಿದ್ದು, ಕನ್ನಡಪರ ಸಂಘಟನೆಗಳ ಕೆಂಗಣ್ಣಿಗೆ ಗುರಿಯಾಗಿತ್ತು. ಅಲ್ಲದೇ ಇದರಿಂದ ಸಾಕಷ್ಟು ವಿವಾದ ಉಂಟಾಗಿ, ಕೊನೆಗೆ ಸಂಸದ ಅಂಗಡಿ, ಶಾಸಕ ಸಂಜಯ ಪಾಟೀಲ್ ಕ್ಷಮೆಯಾಚಿಸಿದ್ದನ್ನು ಇಲ್ಲಿ ಸ್ಮರಿಸಬಹುದು.

ಕನ್ನಡಿಗರಿಗೆ ಸಂದ ಜಯ: ಬೆಳಗಾವಿ ಮಹಾನಗರ ಪಾಲಿಕೆ ಮೇಯರ್ ಪಟ್ಟ ಕನ್ನಡಿಗರಿಗೆ ದೊರೆಯದೇ ತಾನು ರಾಜಧಾನಿಗೆ ಹಿಂತಿರುಗುವುದಿಲ್ಲ ಎಂದು ಕರವೇ ರಾಜ್ಯಾಧ್ಯಕ್ಷ ನಾರಾಯಣ ಗೌಡ ಘೋಷಿಸಿದ್ದರು. ಎಲ್ಲಾ ಬೆಳವಣಿಗೆ ನಡುವೆಯೇ ಮೇಯರ್ ಪಟ್ಟ ಕನ್ನಡಿಗರಿಗೆ ಮೇಯರ್ -ಉಪಮೇಯರ್ ಪಟ್ಟ ಒಲಿದಿರುವ ಬಗ್ಗೆ ಸಂತಸ ವ್ಯಕ್ತಪಡಿಸಿದ್ದಾರೆ. ಇದು ಕನ್ನಡಪರ ಸಂಘಟನೆಗಳ ಹೋರಾಟದಿಂದ ಎಚ್ಚೆತ್ತಿರುವ ರಾಜ್ಯ ಸರ್ಕಾರ ಕೂಡ ಮುತುವರ್ಜಿ ವಹಿಸಿರುವುದು ಅಭಿನಂದನೀಯ ಎಂದರು.
ಸಂಬಂಧಿತ ಮಾಹಿತಿ ಹುಡುಕಿ
ಮತ್ತಷ್ಟು
ದೇವೇಗೌಡರು ಬ್ಲಾಕ್‌ಮೇಲ್ ರಾಜಕಾರಣದ ಜನಕ: ಸಿದ್ದರಾಮಯ್ಯ
ಶಾಸಕ ಯೋಗೇಶ್ವರ್ 'ಕಾಂಗ್ರೆಸ್‌ಗೆ ಗುಡ್‌ಬೈ'
ದೇವೇಗೌಡರ ವಿರುದ್ಧ ಸ್ಪರ್ಧಿಸುವುದಿಲ್ಲ: ಅಶೋಕ್ ಖೇಣಿ
ಎಂ.ಪಿ.ಪ್ರಕಾಶ್ ಗೋಮುಖ ವ್ಯಾಘ್ರ: ಜನಾರ್ದನ ರೆಡ್ಡಿ
ಬಂಗಾರಪ್ಪಗೆ ತಾಕತ್ತಿದ್ದರೆ ಕ್ಷೇತ್ರಕ್ಕೆ ಕಾಲಿಡಬಾರದು: ಸಿಎಂ
ನನಗೆ ಮುಸ್ಲಿಮರ ಮತ ಬೇಡ: ಅನಂತಕುಮಾರ್ ಹೆಗಡೆ