ಮುಖ್ಯ ಪುಟ > ಸುದ್ದಿ ಜಗತ್ತು > ಸುದ್ದಿಗಳು > ರಾಜ್ಯ ಸುದ್ದಿ > ಬಿಜೆಪಿಯಿಂದ ಅಧಿಕಾರದ ದುರ್ಬಳಕೆ: ಖರ್ಗೆ
ಸಲಹೆ/ಪ್ರತಿಕ್ರಿಯೆಮಿತ್ರನಿಗೆ ಕಳುಹಿಸಿಈ ಪುಟ ಮುದ್ರಿಸಿ
 
ಬಿಜೆಪಿಯಿಂದ ಅಧಿಕಾರದ ದುರ್ಬಳಕೆ: ಖರ್ಗೆ
ಲೋಕಸಭೆ ಚುನಾವಣೆ ಸಂದರ್ಭದಲ್ಲಿ ರಾಜ್ಯದ ಆಡಳಿತ ಯಂತ್ರವನ್ನು ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ದುರುಪಯೋಗಪಡಿಸಿಕೊಳ್ಳುತ್ತಿದ್ದಾರೆ ಎಂದು ಪ್ರತಿಪಕ್ಷ ನಾಯಕ ಮಲ್ಲಿಕಾರ್ಜುನ ಖರ್ಗೆ ಆರೋಪಿಸಿದ್ದಾರೆ.

ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಚುನಾವಣಾಧಿಕಾರಿಗಳು ಶಿವಮೊಗ್ಗ ಕ್ಷೇತ್ರಕ್ಕೆ ಒಂದು ರೀತಿ ಉಳಿದೆಡೆ ಒಂದು ರೀತಿ ತಾರತಮ್ಯ ಮಾಡುತ್ತಿದ್ದಾರೆ ಎಂದು ಅವರು ದೂರಿದರು.

ಬಿಜೆಪಿಯಿಂದ ಸ್ಪರ್ಧಿಸಿರುವ ಸಿಎಂ ಪುತ್ರ ರಾಘವೇಂದ್ರ ಹಾಗೂ ಇತರರಿಂದ ನೀತಿ ಸಂಹಿತೆ ಉಲ್ಲಂಘನೆಯಾಗುತ್ತಿದೆ. ಅಲ್ಲಿ ಅಭ್ಯರ್ಥಿ ಘೋಷಣೆಯಾಗಿದ್ದರೂ ಕ್ರಮ ಕೈಗೊಳ್ಳುತ್ತಿಲ್ಲ ಎಂದರು.

ಮುಖ್ಯಮಂತ್ರಿ ಯಡಿಯೂರಪ್ಪ ಬೇವಿನ ಬೀಜ ಬಿತ್ತಿ ಜನರ ನಡುವೆ ಒಡಕು ಉಂಟು ಮಾಡುವ ಸಂಚು ನಡೆಸಿದ್ದಾರೆ. ಇದರ ಫಲ ಅವರೇ ಅನುಭವಿಸಲಿದ್ದಾರೆ. ಹಣ ಹಾಗೂ ಹೆಂಡ ಹರಿಸಿ ಗೆಲ್ಲುವ ತಂತ್ರವನ್ನು ಬಿಜೆಪಿ ಮಾಡುತ್ತಿದೆ. ನ್ಯಾಯಯುತವಾದ ಚುನಾವಣೆ ಮೂಲಕ ಗೆಲ್ಲುವ ತಾಕತ್ತು ಬಿಜೆಪಿಗಿಲ್ಲ ಎಂದು ಖರ್ಗೆ ಹೇಳಿದರು.
ಸಂಬಂಧಿತ ಮಾಹಿತಿ ಹುಡುಕಿ
ಮತ್ತಷ್ಟು
ಮೇಯರ್ ಪಟ್ಟ ಕನ್ನಡಿಗರಿಗೆ-ಎಂಇಎಸ್‌ಗೆ ಮುಖಭಂಗ
ದೇವೇಗೌಡರು ಬ್ಲಾಕ್‌ಮೇಲ್ ರಾಜಕಾರಣದ ಜನಕ: ಸಿದ್ದರಾಮಯ್ಯ
ಶಾಸಕ ಯೋಗೇಶ್ವರ್ 'ಕಾಂಗ್ರೆಸ್‌ಗೆ ಗುಡ್‌ಬೈ'
ದೇವೇಗೌಡರ ವಿರುದ್ಧ ಸ್ಪರ್ಧಿಸುವುದಿಲ್ಲ: ಅಶೋಕ್ ಖೇಣಿ
ಎಂ.ಪಿ.ಪ್ರಕಾಶ್ ಗೋಮುಖ ವ್ಯಾಘ್ರ: ಜನಾರ್ದನ ರೆಡ್ಡಿ
ಬಂಗಾರಪ್ಪಗೆ ತಾಕತ್ತಿದ್ದರೆ ಕ್ಷೇತ್ರಕ್ಕೆ ಕಾಲಿಡಬಾರದು: ಸಿಎಂ