ಮುಖ್ಯ ಪುಟ > ಸುದ್ದಿ ಜಗತ್ತು > ಸುದ್ದಿಗಳು > ರಾಜ್ಯ ಸುದ್ದಿ > ವಿವಾದದ ಸುಳಿ: ವರುಣ್ ಬಳಿಕ ಅನಂತಕುಮಾರ್ ಹೆಗಡೆ ಸರದಿ
ಸಲಹೆ/ಪ್ರತಿಕ್ರಿಯೆಮಿತ್ರನಿಗೆ ಕಳುಹಿಸಿಈ ಪುಟ ಮುದ್ರಿಸಿ
 
ವಿವಾದದ ಸುಳಿ: ವರುಣ್ ಬಳಿಕ ಅನಂತಕುಮಾರ್ ಹೆಗಡೆ ಸರದಿ
ND
ಪಿಲಿಭಿಟ್ ಲೋಕಸಭಾ ಕ್ಷೇತ್ರದ ಅಭ್ಯರ್ಥಿ ವರುಣ್ ಗಾಂಧಿ ವಿವಾದಿತ ಹೇಳಿಕೆಯ ಮೂಲಕ ಜೈಲು ಕಂಬಿ ಎಣಿಸುತ್ತಿದ್ದರೆ, ಏತನ್ಮಧ್ಯೆಯೇ ಆಡಳಿತಾರೂಢ ಬಿಜೆಪಿ ಸಂಸದ ಅನಂತಕುಮಾರ್ ಹೆಗಡೆ ಸಮುದಾಯವೊಂದರ ವಿರುದ್ಧ ನೀಡಿರುವ ಹೇಳಿಕೆ ಚುನಾವಣಾ ಆಯೋಗದ ಕೆಂಗಣ್ಣಿಗೆ ಗುರಿಯಾಗಿದ್ದು, ಇದು ಚುನಾವಣಾ ನೀತಿ ಸಂಹಿತೆ ಉಲ್ಲಂಘನೆ ಎಂದು ತಿಳಿಸಿದೆ.

ಹಾಲಿ ಸಂಸದ ಹಾಗೂ ಉತ್ತರಕನ್ನಡ ಲೋಕಸಭಾ ಕ್ಷೇತ್ರದ ಅಭ್ಯರ್ಥಿ ಅನಂತಕುಮಾರ್ ಹೆಗಡೆ, ಇತ್ತೀಚೆಗೆ ಅಂಕೋಲಾದಲ್ಲಿ ನಡೆದ ಬಹಿರಂಗ ಸಭೆಯಲ್ಲಿ ಅಲ್ಪಸಂಖ್ಯಾತರ ವಿರುದ್ಧ ಹೇಳಿಕೆ ನೀಡಿದ್ದರು.

ಬಹಿರಂಗ ಸಭೆಯಲ್ಲಿ ನೀಡಿದ್ದ ಹೇಳಿಕೆ ಕುರಿತ ಸಿಡಿಯನ್ನು ಪರಿಶೀಲನೆಗಾಗಿ ಚುನಾವಣಾ ಆಯೋಗಕ್ಕೆ ಕಳುಹಿಸಲಾಗಿದೆ. ಚುನಾವಣಾ ನೀತಿ ಸಂಹಿತೆ ಉಲ್ಲಂಘಿಸಿರುವ ಬಗ್ಗೆ ಉತ್ತರ ಕನ್ನಡ ಸಹಾಯಕ ಜಿಲ್ಲಾಧಿಕಾರಿ ವರದಿ ಅನ್ವಯ ಈ ಕ್ರಮ ಕೈಗೊಳ್ಳಲಾಗಿದೆ ಎಂದು ರಾಜ್ಯ ಚುನಾವಣಾಧಿಕಾರಿ ಎಂ.ಎನ್.ವಿದ್ಯಾಶಂಕರ್ ಸುದ್ದಿಗಾರರೊಂದಿಗೆ ಮಾತನಾಡುತ್ತ ತಿಳಿಸಿದರು.

'ನನಗೆ ಹಿಂದೂಗಳ ಮತ ಮಾತ್ರ ಸಾಕು. ಅಲ್ಪಸಂಖ್ಯಾತರ ಮತ ಬೇಡ ಎಂದು ನಾನು ಈ ಮೊದಲೇ ಸ್ಪಷ್ಟಪಡಿಸಿದ್ದೆ. ಈ ಬಗ್ಗೆ ಚುನಾವಣಾ ಆಯೋಗ ಪ್ರಕರಣ ದಾಖಲಿಸಲಿ' ಎಂದು ಸಂಸದ ಅನಂತ ಕುಮಾರ್ ಹೆಗಡೆ ಸವಾಲು ಹಾಕಿದ್ದರು.

ಭಾನುವಾರ ಅಂಕೋಲಾದಲ್ಲಿ ಸ್ಥಳೀಯ ಸಮಾಜ ಮಂದಿರದಲ್ಲಿ ಬಿಜೆಪಿ ಕಾರ್ಯಕರ್ತ ಬೂತ್ ಮಟ್ಟದ ಕಾರ್ಯಕರ್ತರ ಸಮಾವೇಶದಲ್ಲಿ ಮಾತನಾಡಿದ ಅವರು, ಅಲ್ಪಸಂಖ್ಯಾತರ ಮತದ ಬಗ್ಗೆ ಈ ಹಿಂದೆ ನೀಡಿದ್ದ ಹೇಳಿಕೆಯ ಪ್ರತಿಯೊಂದು ಶಬ್ದಕ್ಕೂ ನಾನು ಬದ್ದ ಎಂದು ಸ್ಪಷ್ಟಪಡಿಸಿದ್ದರು.

ಅಲ್ಪಸಂಖ್ಯಾತರ ಮತಕ್ಕಾಗಿ ಕೆಲವರು ಅವರನ್ನು ತುಷ್ಟೀಕರಣ ಮಾಡುವುದಾದರೆ, ನಾನು ಬಹುಸಂಖ್ಯಾತರಿಗಾಗಿ ರಾಜಕಾರಣ ಮಾಡುತ್ತೇನೆ. ಶ್ರೀರಾಮನಿಗೋಸ್ಕರ, ಶ್ರೀಕೃಷ್ಣನಿಗೋಸ್ಕರ ರಾಜಕಾರಣ ಮಾಡುತ್ತೇನೆ ಎಂದೂ ಕೂಡ ಹೇಳಿದ್ದರು.

ಹೆಗಡೆ ಬಂಧಕ್ಕೆ ಉಗ್ರಪ್ಪ ಆಗ್ರಹ: ಕೋಮು ಸಾಮರಸ್ಯ ಕದಡುತ್ತಿರುವ ಕಾರವಾರದ ಬಿಜೆಪಿ ಸಂಸದ ಅನಂತಕುಮಾರ್ ಹೆಗಡೆ ಅವರನ್ನು ತಕ್ಷಣ ಬಂಧಿಸಬೇಕು ಎಂದು ವಿಧಾನಪರಿಷತ್ ವಿರೋಧಪಕ್ಷದ ನಾಯಕ ವಿ.ಎಸ್.ಉಗ್ರಪ್ಪ ಆಗ್ರಹಿಸಿದ್ದಾರೆ.

ಈ ಸಂಬಂಧ ಮುಖ್ಯ ಚುನಾವಣಾಧಿಕಾರಿ ಎಂ.ಎನ್.ವಿದ್ಯಾಶಂಕರ್ ಅವರಿಗೆ ಕಾಂಗ್ರೆಸ್ ಪಕ್ಷದ ವತಿಯಿಂದ ದೂರು ನೀಡಿದ ನಂತರ ಸುದ್ದಿಗಾರರ ಜತೆ ಮಾತನಾಡಿದ ಅವರು ಅನಂತಕುಮಾರ್ ಹೆಗಡೆ ರಾಜ್ಯದ ವರುಣ್ ಗಾಂಧಿ ಎಂದು ಕಟುವಾಗಿ ಟೀಕಿಸಿದರು.

ಕೋಮುದ್ವೇಷದ ಭಾಷಣ ಮಾಡಿ, ಆಯೋಗಕ್ಕೆ ಸವಾಲು ಹಾಕಿದ ಹೆಗಡೆ ವಿರುದ್ಧ ಕಾನೂನು ಕ್ರಮ ಜರುಗಿಸಬೇಕು ಎಂದು ಈ ಸಂದರ್ಭದಲ್ಲಿ ಒತ್ತಾಯಿಸಿದರು.
ಸಂಬಂಧಿತ ಮಾಹಿತಿ ಹುಡುಕಿ
ಮತ್ತಷ್ಟು
ಲೋಕಸಭೆ: ಅನಂತಕುಮಾರ್ ನಾಮಪತ್ರ ಸಲ್ಲಿಕೆ
ಬಿಜೆಪಿಯಿಂದ ಅಧಿಕಾರದ ದುರ್ಬಳಕೆ: ಖರ್ಗೆ
ಮೇಯರ್ ಪಟ್ಟ ಕನ್ನಡಿಗರಿಗೆ-ಎಂಇಎಸ್‌ಗೆ ಮುಖಭಂಗ
ದೇವೇಗೌಡರು ಬ್ಲಾಕ್‌ಮೇಲ್ ರಾಜಕಾರಣದ ಜನಕ: ಸಿದ್ದರಾಮಯ್ಯ
ಶಾಸಕ ಯೋಗೇಶ್ವರ್ 'ಕಾಂಗ್ರೆಸ್‌ಗೆ ಗುಡ್‌ಬೈ'
ದೇವೇಗೌಡರ ವಿರುದ್ಧ ಸ್ಪರ್ಧಿಸುವುದಿಲ್ಲ: ಅಶೋಕ್ ಖೇಣಿ