ನಗರದ ಜನನಿಬಿಡ ಪ್ರದೇಶವಾದ ರಾಜಾಜಿನಗರ ನವರಂಗ್ ಬಾರ್ ಸಮೀಪ ಮಂಗಳವಾರ ಬೆಳಿಗ್ಗೆ ಕಚ್ಚಾ ಬಾಂಬ್‌ವೊಂದು ಪತ್ತೆಯಾಗಿದ್ದು, ಬಾಂಬ್ ಅನ್ನು ತಜ್ಞರ ತಂಡ ನಿಷ್ಕ್ರಿಯಗೊಳಿಸಿರುವುದಾಗಿ ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ.
ರಾಜಧಾನಿಯಲ್ಲಿ ಮತ್ತೆ ಕಚ್ಚಾ ಬಾಂಬ್ ಪತ್ತೆಯಾಗಿರುವುದು ಸ್ಥಳೀಯರಲ್ಲಿ ಆತಂಕ ಮೂಡಿಸಿದ್ದು, ಒಂದು ಕಚ್ಚಾ ಬಾಂಬ್ ಪತ್ತೆಯಾಗಿರುವ ಸ್ಥಳಕ್ಕೆ ಶ್ವಾನ ದಳದ ಮೂಲಕ ತಪಾಸಣೆ ನಡೆಸಿ, ನಿಷ್ಕ್ರಿಯಗೊಳಿಸಲಾಯಿತು.
ಬಾಂಬ್ ಪತ್ತೆಯಾದ ಸುದ್ದಿ ತಿಳಿಯುತ್ತಿದ್ದಂತೆಯೇ ಸ್ಥಳಕ್ಕೆ ಹಿರಿಯ ಪೊಲೀಸ್ ಅಧಿಕಾರಿಗಳು, ಶ್ವಾನದಳ ಮತ್ತು ಬಾಂಬ್ ನಿಷ್ಕ್ರಿಯ ತಂಡ ಧಾವಿಸುವ ಮೂಲಕ ಅನಾಹುತವನ್ನು ತಪ್ಪಿಸಿದಂತಾಗಿದೆ ಎಂದು ಸ್ಥಳೀಯರು ತಿಳಿಸಿದ್ದಾರೆ.
ಈ ಸ್ಫೋಟಕವನ್ನು ಯಾರು ಇಟ್ಟಿದ್ದಾರೆ, ಇನ್ನೂ ಹೆಚ್ಚು ಸ್ಫೋಟಕ ಅಡಗಿಸಿಟ್ಟಿರಬಹುದೇ?ಎಂಬ ಬಗ್ಗೆ ಪೊಲೀಸರು ತೀವ್ರ ತನಿಖೆ ನಡೆಸುತ್ತಿರುವುದಾಗಿ ಅಧಿಕಾರಿಗಳು ತಿಳಿಸಿದ್ದಾರೆ. |