ಮುಖ್ಯ ಪುಟ > ಸುದ್ದಿ ಜಗತ್ತು > ಸುದ್ದಿಗಳು > ರಾಜ್ಯ ಸುದ್ದಿ > ಶವ ಮಾರಾಟ-ನಾಲ್ವರು ಪೊಲೀಸ್ ಅಧಿಕಾರಿಗಳ ಅಮಾನತು
ಸಲಹೆ/ಪ್ರತಿಕ್ರಿಯೆಮಿತ್ರನಿಗೆ ಕಳುಹಿಸಿಈ ಪುಟ ಮುದ್ರಿಸಿ
 
ಶವ ಮಾರಾಟ-ನಾಲ್ವರು ಪೊಲೀಸ್ ಅಧಿಕಾರಿಗಳ ಅಮಾನತು
ಬೆಂಗಳೂರು: ಮಡಿವಾಳ ಠಾಣೆಯ ವ್ಯಾಪ್ತಿಯಲ್ಲಿ ದೊರೆತ ಶವವೊಂದನ್ನು ಸೇಂಟ್ ಜಾನ್ ಆಸ್ಪತ್ರೆಗೆ ಮಾರಾಟ ಮಾಡಿರುವ ಆರೋಪದ ಮೇಲೆ ನಾಲ್ಕು ಪೊಲೀಸ್ ಅಧಿಕಾರಿಗಳನ್ನು ಅಮಾನತು ಮಾಡಿರುವುದಾಗಿ ಪೊಲೀಸ್ ವರಿಷ್ಠಾಧಿಕಾರಿ ಶಂಕರ್ ಬಿದರಿ ತಿಳಿಸಿದ್ದಾರೆ.

ಘಟನೆಗೆ ಸಂಬಂಧಿಸಿದಂತೆ ಪೊಲೀಸ್ ಇನ್ಸ್‌ಪೆಕ್ಟರ್ ಜಿ.ಎಂ.ಕಾಂತಾರಾಜು, ಎಸ್.ಐ, ವಿಜಯ್ ಕುಮಾರ್, ಎಎಸ್‌ಐ ನಂಜುಂಡಯ್ಯ ಹಾಗೂ ಕಾನ್‌ಸ್ಟೇಬಲ್ ಆದಿರಾಜುವನ್ನು ಅಮಾನತು ಮಾಡಲಾಗಿದೆ.

ಮಡಿವಾಳ ಠಾಣೆಯ ವ್ಯಾಪ್ತಿಯ ಕಾಶಿ ಲಾಡ್ಜ್‌ನ ಆವರಣದಲ್ಲಿ ಅಪರಿಚಿತ ಶವವೊಂದು ಪತ್ತೆಯಾಗಿರುವುದಾಗಿ ಲಾಡ್ಜ್‌ನ ಮ್ಯಾನೇಜರ್ ನಬೀಜ್ ಎಂಬವರು ದೂರು ನೀಡಿದ್ದರು. ಆಗ ಮಡಿವಾಳ ಠಾಣೆಯಲ್ಲಿ ಕಾಂತರಾಜು ಹಾಗೂ ಇನ್ನಿತರ ಮೂರು ಅಧಿಕಾರಿಗಳು ಕರ್ತವ್ಯ ನಿರ್ವಹಿಸುತ್ತಿದ್ದರು. ಆ ಸಂದರ್ಭದಲ್ಲಿ ಪೊಲೀಸರು ಶವವನ್ನು ಸೇಂಟ್ ಜಾನ್ ಮೆಡಿಕಲ್ ಕಾಲೇಜಿಗೆ ಮಾರಾಟ ಮಾಡಲು ನಿರ್ಧರಿಸಿದ್ದರು.

ಮೃತದೇಹ ಪತ್ತೆಯಾದ 2ದಿನದ ನಂತರ ವೆಂಕಟೇಶ್ ಎಂಬುವರು ಠಾಣೆಗೆ ಬಂದು ತಮ್ಮ ತಂದೆ ಕಾವೇರಪ್ಪ ಎಂಬುವರು ಕಾಣೆಯಾಗಿದ್ದಾರೆ ಎಂದು ದೂರು ನೀಡಿದ್ದರು. ಅವರು ಕಾವೇರಪ್ಪ ಅವರ ಭಾವಚಿತ್ರವನ್ನೂ ತಂದಿದ್ದರು. ಆದರೆ, ಮೃತದೇಹವನ್ನು ಕಾಂತರಾಜು ಮತ್ತು ತಂಡ ಕಾವೇರಪ್ಪಗೆ ತೋರಿಸಲೂ ಇಲ್ಲ, ಭಾವಚಿತ್ರ ನೋಡಿ ಅದರ ಗುರುತನ್ನೂ ಹಿಡಿಯಲಿಲ್ಲ. ಪ್ರಕರಣದ ತನಿಖೆಯ ವೇಳೆ ಪತ್ತೆಯಾದ ಶವಗಳನ್ನು ವಿಕ್ಟೋರಿಯಾ ಆಸ್ಪತ್ರೆಗೆ ಸಾಗಿಸಬೇಕಿತ್ತು. ಆದರೆ ಪೊಲೀಸರು ಅದನ್ನು ಸೇಂಟ್ ಜಾನ್ ಆಸ್ಪತ್ರೆಗೆ ಮಾರಾಟ ಮಾಡಿರುವುದಾಗಿ ಆರೋಪ ಬಹಿರಂಗವಾಗಿತ್ತು.

ಅಲ್ಲದೇ ಶವದ ಮೇಲೆ ಗಾಯಗಳಿದ್ದರೂ ಕೊಲೆ ಕೇಸು ದಾಖಲಿಸದೆ, ಅಸಹಜ ಸಾವು ಎಂದು ಪ್ರಕರಣ ದಾಖಲಿಸಿ ನಿರ್ಲಕ್ಷ್ಯ ತೋರಲಾಗಿತ್ತು, ಈ ಬಗ್ಗೆ ಇಲಾಖೆ ತನಿಖೆ ನಡೆಸಿ ಅದರ ವರದಿಯನ್ವಯ ಕಾನೂನು ಕ್ರಮ ಕೈಗೊಳ್ಳಲಿದೆ ಎಂದು ಬಿದರಿ ತಿಳಿಸಿದರು.
ಸಂಬಂಧಿತ ಮಾಹಿತಿ ಹುಡುಕಿ
ಇದನ್ನು ಸಹ ಶೋಧಿಸು: ಮಡಿವಾಳ, ಪೊಲೀಸ್, ಶಂಕರ ಬಿದರಿ
ಮತ್ತಷ್ಟು
ರಾಜಾಜಿನಗರದಲ್ಲಿ ಕಚ್ಚಾ ಬಾಂಬ್ ಪತ್ತೆ
ವಿವಾದದ ಸುಳಿ: ವರುಣ್ ಬಳಿಕ ಅನಂತಕುಮಾರ್ ಹೆಗಡೆ ಸರದಿ
ಲೋಕಸಭೆ: ಅನಂತಕುಮಾರ್ ನಾಮಪತ್ರ ಸಲ್ಲಿಕೆ
ಬಿಜೆಪಿಯಿಂದ ಅಧಿಕಾರದ ದುರ್ಬಳಕೆ: ಖರ್ಗೆ
ಮೇಯರ್ ಪಟ್ಟ ಕನ್ನಡಿಗರಿಗೆ-ಎಂಇಎಸ್‌ಗೆ ಮುಖಭಂಗ
ದೇವೇಗೌಡರು ಬ್ಲಾಕ್‌ಮೇಲ್ ರಾಜಕಾರಣದ ಜನಕ: ಸಿದ್ದರಾಮಯ್ಯ