ಮುಖ್ಯ ಪುಟ > ಸುದ್ದಿ ಜಗತ್ತು > ಸುದ್ದಿಗಳು > ರಾಜ್ಯ ಸುದ್ದಿ > ಆತಂಕದಲ್ಲಿ ಮುಖ್ಯಮಂತ್ರಿ ಯಡಿಯೂರಪ್ಪ: ನಾರಾಯಣಸ್ವಾಮಿ
ಸಲಹೆ/ಪ್ರತಿಕ್ರಿಯೆಮಿತ್ರನಿಗೆ ಕಳುಹಿಸಿಈ ಪುಟ ಮುದ್ರಿಸಿ
 
ಆತಂಕದಲ್ಲಿ ಮುಖ್ಯಮಂತ್ರಿ ಯಡಿಯೂರಪ್ಪ: ನಾರಾಯಣಸ್ವಾಮಿ
ಮುಖ್ಯಮಂತ್ರಿಯವರ ರಾಜಕೀಯ ಭವಿಷ್ಯ ಶಿವಮೊಗ್ಗ ಲೋಕಸಭಾ ಕ್ಷೇತ್ರದ ಫಲಿತಾಂಶದ ಮೇಲಿದೆ. ಇದರಿಂದ ಯಡಿಯೂರಪ್ಪ ಆತಂಕಗೊಂಡಿದ್ದಾರೆ ಎಂದು ರಾಜ್ಯ ಜೆಡಿಎಸ್ ರಾಜಕೀಯ ವ್ಯವಹಾರ ಸಮಿತಿ ಅಧ್ಯಕ್ಷ ಸಿ.ನಾರಾಯಣಸ್ವಾಮಿ ಆರೋಪಿಸಿದರು.

ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಶಿವಮೊಗ್ಗದಲ್ಲಿ ಬಿಜೆಪಿಯ ನಿಷ್ಠಾವಂತ ಕಾರ್ಯಕರ್ತರೇ ಯಡಿಯೂರಪ್ಪರನ್ನು ಸೋಲಿಸಿ, ಬಿಜೆಪಿ ಉಳಿಸಿ ಅಭಿಯಾನ ಆರಂಭಿಸಿದ್ದಾರೆ. ಹೀಗಾಗಿ ತಮ್ಮ ಮಗ ರಾಘವೇಂದ್ರನ ಗೆಲುವಿನ ಬಗ್ಗೆ ಆತಂಕಗೊಂಡಿರುವ ಯಡಿಯೂರಪ್ಪ, ಕಾಂಗ್ರೆಸ್-ಜೆಡಿಎಸ್ ಒಳ ಒಪ್ಪಂದ ಮಾಡಿಕೊಂಡಿವೆ ಎಂಬ ಅಪಪ್ರಚಾರದಲ್ಲಿ ತೊಡಗಿದ್ದಾರೆ ಎಂದರು.

ತಮ್ಮ ಮಗ ರಾಘವೇಂದ್ರ ಸ್ಪರ್ಧಿಸುವುದಿಲ್ಲ ಎಂದು ಯಡಿಯೂರಪ್ಪ ದೇವರ ಮೇಲೆ ಆಣೆ ಮಾಡಿದ್ದರು. ಯಾವುದೇ ಕಾರಣಕ್ಕೂ ಆತ ಸ್ಪರ್ಧಿಯಲ್ಲವೆಂದು ಘಂಟಾಘೋಷವಾಗಿ ಹೇಳಿದ್ದರು. ಆಮೇಲೆ ಪಕ್ಷದ ಒತ್ತಡಕ್ಕೆ ಮಣಿದು ಮಗ ಸ್ಪರ್ಧಿಸುತ್ತಾನೆ ಎಂದರು. ದೇವರ ಮೇಲೆ ಮಾಡಿದ ಆಣೆಯನ್ನು ಮುರಿದ ಯಡಿಯೂರಪ್ಪ ಹೇಳುವ ಮಾತನ್ನು ನಂಬುವುದಾದರು ಹೇಗೆ? ಎಂದು ಪ್ರಶ್ನಿಸಿದರು.

ಬಿಜೆಪಿ ಸರ್ಕಾರ ಅಸ್ತಿತ್ವಕ್ಕೆ ಬಂದ ಮೇಲೆ ಭಯೋತ್ಪಾದನೆ, ಘರ್ಷಣೆಗಳು ಜಾಸ್ತಿಯಾಗಿದೆ. ಹೆಣ್ಣುಮಕ್ಕಳು ಸ್ನೇಹಿತರ ಜತೆ, ಅಣ್ಣ ತಮ್ಮಂದಿರ ಜತೆ ಓಡಾಡದ ಪರಿಸ್ಥಿತಿಯನ್ನು ಸೃಷ್ಟಿ ಮಾಡಲಾಗಿದೆ ಎಂದು ಆರೋಪಿಸಿದರು.
ಸಂಬಂಧಿತ ಮಾಹಿತಿ ಹುಡುಕಿ
ಮತ್ತಷ್ಟು
ಶವ ಮಾರಾಟ-ನಾಲ್ವರು ಪೊಲೀಸ್ ಅಧಿಕಾರಿಗಳ ಅಮಾನತು
ರಾಜಾಜಿನಗರದಲ್ಲಿ ಕಚ್ಚಾ ಬಾಂಬ್ ಪತ್ತೆ
ವಿವಾದದ ಸುಳಿ: ವರುಣ್ ಬಳಿಕ ಅನಂತಕುಮಾರ್ ಹೆಗಡೆ ಸರದಿ
ಲೋಕಸಭೆ: ಅನಂತಕುಮಾರ್ ನಾಮಪತ್ರ ಸಲ್ಲಿಕೆ
ಬಿಜೆಪಿಯಿಂದ ಅಧಿಕಾರದ ದುರ್ಬಳಕೆ: ಖರ್ಗೆ
ಮೇಯರ್ ಪಟ್ಟ ಕನ್ನಡಿಗರಿಗೆ-ಎಂಇಎಸ್‌ಗೆ ಮುಖಭಂಗ