ಮುಖ್ಯ ಪುಟ > ಸುದ್ದಿ ಜಗತ್ತು > ಸುದ್ದಿಗಳು > ರಾಜ್ಯ ಸುದ್ದಿ > ಟಿಕೆಟ್ ಸಿಗಲಿ-ಬಿಡಲಿ ಸ್ಪರ್ಧೆ ಖಚಿತ: ಡಿ.ಬಿ.ಚಂದ್ರೇಗೌಡ
ಸಲಹೆ/ಪ್ರತಿಕ್ರಿಯೆಮಿತ್ರನಿಗೆ ಕಳುಹಿಸಿಈ ಪುಟ ಮುದ್ರಿಸಿ
 
ಟಿಕೆಟ್ ಸಿಗಲಿ-ಬಿಡಲಿ ಸ್ಪರ್ಧೆ ಖಚಿತ: ಡಿ.ಬಿ.ಚಂದ್ರೇಗೌಡ
NRB
ಕಾಂಗ್ರೆಸ್‌‌ನಿಂದ ಟಿಕೆಟ್ ಸಿಗಲಿ, ಬಿಡಲಿ ಲೋಕಸಭೆ ಚುನಾವಣೆಯಲ್ಲಿ ತಮ್ಮ ಸ್ಪರ್ಧೆ ಖಚಿತ ಎಂದು ಹಿರಿಯ ಕಾಂಗ್ರೆಸ್ ಮುಖಂಡ, ಮಾಜಿ ಸಚಿವ ಡಿ.ಬಿ.ಚಂದ್ರೇಗೌಡ ಹೇಳಿದ್ದಾರೆ.

ಯಾವ ಕ್ಷೇತ್ರ ಮತ್ತು ಯಾವ ಪಕ್ಷದ ಅಭ್ಯರ್ಥಿಯಾಗಿ ಸ್ಪರ್ಧಿಸುತ್ತೇನೆ ಎಂಬುದನ್ನು ಇನ್ನೂ ತೀರ್ಮಾನಿಸಿಲ್ಲ. ಆದರೆ ಚುನಾವಣೆ ಅಖಾಡಕ್ಕೆ ಇಳಿಯುವುದು ನಿಶ್ಚಿತ ಎಂದು ಸುದ್ದಿಗಾರರೊಂದಿಗೆ ಮಾತನಾಡುತ್ತ ತಿಳಿಸಿದರು.

ರಾಜ್ಯದಲ್ಲಿ ಕಾಂಗ್ರೆಸ್‌‌ಗೆ ನಾಯಕತ್ವ ಎಂಬುದೇ ಇಲ್ಲದಂತಾಗಿದೆ. ತತ್ವ, ಸಿದ್ದಾಂತಗಳೂ ಮಾಯವಾಗಿವೆ. ಹಣ ಮತ್ತು ವ್ಯಕ್ತಿಗಳೇ ಮುಖ್ಯ ಎಂಬಂತಾಗಿದೆ. ಇದುವರೆಗೆ ತನ್ನದೇ ನೆಲೆಗಟ್ಟಿನ ಮೇಲೆ ಪಕ್ಷ ಸಾಮ್ರಾಜ್ಯ ಆಳಿತ್ತು. ಅಂತಹ ಪಕ್ಷಕ್ಕೆ ಹೊಸದಾಗಿ ಅಹಿಂದ ಹಾಗೂ ಚಳವಳಿಗಳ ಅಗತ್ಯವಿಲ್ಲ. ದೇವರಾಜು ಅರಸು ಕಾಲದಲ್ಲೇ ಈ ಎಲ್ಲ ಚಳವಳಿಗಳು ಚಾಲನೆ ಪಡೆದು ಪರಿಹಾರ ರೂಪಿಸುವ ಕೆಲಸಕ್ಕೂ ನಾಂದಿ ಹಾಡಲಾಗಿತ್ತು ಎಂದರು.

ಕಳೆದ ಚುನಾವಣೆಯಲ್ಲಿ ಬಿಜೆಪಿಗಿಂತ ಶೆ.1ರಷ್ಟು ಹೆಚ್ಚು ಮತಗಳು ಕಾಂಗ್ರೆಸ್‌ಗೆ ಲಭ್ಯವಾಗಿತ್ತು. ಈ ಚುನಾವಣೆಯಲ್ಲೂ ಹೆಚ್ಚಿನ ಸ್ಥಾನ ಗೆಲ್ಲುವ ಎಲ್ಲ ಅವಕಾಶಗಳು ಇದ್ದವು. ಜಾತ್ಯತೀತ ಮಂತ್ರ ಜಪಿಸುವ ವರಿಷ್ಠರು ರಾಜ್ಯದಲ್ಲಿನ ದೊಡ್ಡ ಸಮುದಾಯಕ್ಕೆ ನೀಡಿರುವ ಪ್ರಾಮುಖ್ಯ ಎಷ್ಟು? ನೀತಿ ನಿರೂಪಣಾ ಸಮಿತಿಯಲ್ಲಿ ಒಕ್ಕಲಿಗರಿಗೆ ಸೂಕ್ತ ಸ್ಥಾನ ನೀಡಲಿಲ್ಲ. ಈ ಕುರಿತು ನೀಡಿದ ಸಲಹೆಗಳೂ ಕೂಡಾ ಪ್ರಯೋಜನಕ್ಕೆ ಬರಲಿಲ್ಲ ಎಂದು ಕಿಡಿಕಾರಿದರು.

ಬಿಜೆಪಿ ಕೋಮುವಾದಿ ಎಂಬ ಸಂಶಯ ತಮಗೂ ಇದೆ. ಆದರೆ, ಅದನ್ನು ನಿವಾರಿಸಿ ಸರಿದಾರಿಗೆ ತರುವ ಕೆಲಸ ಆಗಬೇಕಿದೆ. ದತ್ತಪೀಠ ವಿವಾದ ನಿವಾರಣೆಯಾಗಿ ಪೂಜೆಯಲ್ಲಿ ಪಾಲ್ಗೊಂಡಿದ್ದನ್ನೇ ತಮ್ಮ ವಿರುದ್ಧ ಅಪಪ್ರಚಾರಕ್ಕೆ ಬಳಸಲಾಯಿತು. ರಾಮಸೇನೆ ಹಾಗೂ ಪಬ್ ಗಲಭೆಗಳು ಸಣ್ಣಪುಟ್ಟ ವಿಷಯಗಳು ಅದನ್ನು ರಾಷ್ಟ್ರೀಯ ವಿಷಯಗಳೆಂದು ಬಿಂಬಿಸುವುದು ತಪ್ಪು ಎಂದರು.
ಸಂಬಂಧಿತ ಮಾಹಿತಿ ಹುಡುಕಿ
ಮತ್ತಷ್ಟು
ತುಮಕೂರು ವಿವಿಗೆ ನನ್ನ ಹೆಸರು ಬೇಡ: ಶಿವಕುಮಾರಸ್ವಾಮೀಜಿ
ತಮಿಳರ ಮೋಹ-ಸಿಎಂ ಕ್ಷಮೆಗೆ ಕರವೇ ಪಟ್ಟು
ಆತಂಕದಲ್ಲಿ ಮುಖ್ಯಮಂತ್ರಿ ಯಡಿಯೂರಪ್ಪ: ನಾರಾಯಣಸ್ವಾಮಿ
ಶವ ಮಾರಾಟ-ನಾಲ್ವರು ಪೊಲೀಸ್ ಅಧಿಕಾರಿಗಳ ಅಮಾನತು
ರಾಜಾಜಿನಗರದಲ್ಲಿ ಕಚ್ಚಾ ಬಾಂಬ್ ಪತ್ತೆ
ವಿವಾದದ ಸುಳಿ: ವರುಣ್ ಬಳಿಕ ಅನಂತಕುಮಾರ್ ಹೆಗಡೆ ಸರದಿ