ಮುಖ್ಯ ಪುಟ > ಸುದ್ದಿ ಜಗತ್ತು > ಸುದ್ದಿಗಳು > ರಾಜ್ಯ ಸುದ್ದಿ > ಗೆಲುವಿಗಾಗಿ ಜಮೀರ್ ಅಹ್ಮದ್ 'ಸುದರ್ಶನ ಹೋಮ'
ಸಲಹೆ/ಪ್ರತಿಕ್ರಿಯೆಮಿತ್ರನಿಗೆ ಕಳುಹಿಸಿಈ ಪುಟ ಮುದ್ರಿಸಿ
 
ಗೆಲುವಿಗಾಗಿ ಜಮೀರ್ ಅಹ್ಮದ್ 'ಸುದರ್ಶನ ಹೋಮ'
ಪಕ್ಷಾಂತರ ಮಾಡಲು, ಪಕ್ಷ ಬಿಡಲು, ಪಕ್ಷ ಸೇರಲು, ನಾಮಪತ್ರ ಸಲ್ಲಿಸಲು ಹೀಗೆ ಎಲ್ಲದಕ್ಕೂ ಹೋಮ, ಪೂಜೆ-ಪುನಸ್ಕಾರ ಮಾಡುವುದು ರಾಜಕಾರಣಿಗಳಿಗೆ ಸಂಪ್ರದಾಯವಾಗಿಬಿಟ್ಟಿದೆ, ಇದೀಗ ಬೆಂಗಳೂರು ಲೋಕಸಭಾ ಕ್ಷೇತ್ರದ ಅಭ್ಯರ್ಥಿ ಜಮೀರ್ ಅಹ್ಮದ್ ಕೂಡ ಹೋಮದ ಮೊರೆ ಹೋಗಿದ್ದಾರೆ.

ಬೆಂಗಳೂರು ಕೇಂದ್ರ ಲೋಕಸಭಾ ಕ್ಷೇತ್ರದಿಂದ ಸ್ಪರ್ಧಿಸಿರುವ ಜಮೀರ್ ಅವರ ಗೆಲುವಿಗಾಗಿ ಅವರ ಬೆಂಬಲಿಗ ವೆಂಕಟೇಶ್ ಎಂಬವರು ಸಂಪಂಗಿರಾಮನಗರದ ನಿವಾಸದಲ್ಲಿ ಸೋಮವಾರ ಹೋಮ ಏರ್ಪಡಿಸಿದ್ದರು.

ಬಿಳಿ, ಅಗಿ, ಕಪ್ಪು ಪ್ಯಾಂಟ್ ಧರಿಸಿ ಹೆಗಲ ಮೇಲೆ ಶಲ್ಯ ಹಾಕಿದ್ದ ಜಮೀರ್ ಅವರು ಹಿಂದೂ ವಿಧಿ ವಿಧಾನಗಳ ಪ್ರಕಾರ ಗೆಲುವು ಹಾಗೂ ಕಾರ್ಯಸಿದ್ದಿಗಾಗಿ ನಡೆಸುವ ಸುದರ್ಶನ ಹೋಮ ಮತ್ತು ಕಾರ್ಯಸಿದ್ದಿ ಯಾಗದಲ್ಲಿ ಪಾಲ್ಗೊಂಡರು. ಕೊರಳಿಗೆ ಹಾರ ಹಾಕಿಸಿಕೊಂಡು ಪುರೋಹಿತರ ಮಧ್ಯದಲ್ಲಿ ಕುಳಿತ ಅವರು ಹೋಮ ಕುಂಡಕ್ಕೆ ಹವಿಸ್ಸು ಅರ್ಪಿಸಿದರು.

ನಾನು ಮೊದಲು ಹಿಂದೂಸ್ತಾನಿ, ನಂತರ ಕನ್ನಡಿಗ ಆ ಮೇಲೆ ಮುಸ್ಲಿಂ . ನನ್ನ ಗೆಲುವಿಗೆ ಬೆಂಬಲಿಗರು ಆಯೋಜಿಸಿದ್ದ ಹೋಮದಲ್ಲಿ ಕೋಮು ಸೌಹಾರ್ದತೆಯಿಂದ ಪಾಲ್ಗೊಂಡಿದ್ದೇನೆ ಎಂದರು.
ಸಂಬಂಧಿತ ಮಾಹಿತಿ ಹುಡುಕಿ
ಇದನ್ನು ಸಹ ಶೋಧಿಸು: ಜಮೀರ್, ಜೆಡಿಎಸ್, ಹಿಂದೂ, ಮುಸ್ಲಿಂ
ಮತ್ತಷ್ಟು
ಟಿಕೆಟ್ ಸಿಗಲಿ-ಬಿಡಲಿ ಸ್ಪರ್ಧೆ ಖಚಿತ: ಡಿ.ಬಿ.ಚಂದ್ರೇಗೌಡ
ತುಮಕೂರು ವಿವಿಗೆ ನನ್ನ ಹೆಸರು ಬೇಡ: ಶಿವಕುಮಾರಸ್ವಾಮೀಜಿ
ತಮಿಳರ ಮೋಹ-ಸಿಎಂ ಕ್ಷಮೆಗೆ ಕರವೇ ಪಟ್ಟು
ಆತಂಕದಲ್ಲಿ ಮುಖ್ಯಮಂತ್ರಿ ಯಡಿಯೂರಪ್ಪ: ನಾರಾಯಣಸ್ವಾಮಿ
ಶವ ಮಾರಾಟ-ನಾಲ್ವರು ಪೊಲೀಸ್ ಅಧಿಕಾರಿಗಳ ಅಮಾನತು
ರಾಜಾಜಿನಗರದಲ್ಲಿ ಕಚ್ಚಾ ಬಾಂಬ್ ಪತ್ತೆ