ಲೋಕಸಭಾ ಚುನಾವಣೆಯ ಅಂಗವಾಗಿ ಕಾಂಗ್ರೆಸ್ ಪಕ್ಷ ಮಂಗಳವಾರ ಮಂಡ್ಯ ಲೋಕಸಭಾ ಕ್ಷೇತ್ರವನ್ನು ಹೊರತುಪಡಿಸಿ ತನ್ನ ಎರಡನೇ ಹಾಗೂ ಅಂತಿಮ ಪಟ್ಟಿಯನ್ನು ಬಿಡುಗಡೆ ಮಾಡಿದೆ.ಶನಿವಾರವಷ್ಟೇ ಕಾಂಗ್ರೆಸ್ ಅಳೆದು-ತೂಗಿ ಕೊನೆಗೆ 22ಲೋಕಸಭಾ ಅಭ್ಯರ್ಥಿಗಳ ಹೆಸರನ್ನು ಬಿಡುಗಡೆ ಮಾಡಿತ್ತು. ಸಾಕಷ್ಟು ಗೊಂದಲ, ಅಸಮಾಧಾನದ ಕಾರಣಗಳಿಂದಾಗಿ ಆರು ಕ್ಷೇತ್ರದ ಅಭ್ಯರ್ಥಿಗಳ ಹೆಸರನ್ನು ನಂತರ ಘೋಷಿಸುವುದಾಗಿ ಕಾಂಗ್ರೆಸ್ ಹೈಕಮಾಂಡ್ ತಿಳಿಸಿತ್ತು. ಇದೀಗ ಮಂಡ್ಯ ಕ್ಷೇತ್ರ ಹೊರತುಪಡಿಸಿ ಉಳಿದ ಐದು ಕ್ಷೇತ್ರಗಳ ಅಭ್ಯರ್ಥಿಗಳನ್ನು ಘೋಷಿಸಿದೆ.ಅಭ್ಯರ್ಥಿಗಳ ವಿವರ:ಚಿಕ್ಕಬಳ್ಳಾಪುರ-ವೀರಪ್ಪ ಮೊಯ್ಲಿಕಾರವಾರ-ಮಾರ್ಗರೇಟ್ ಆಳ್ವಉಡುಪಿ-ಜಯಪ್ರಕಾಶ್ ಹೆಗ್ಡೆಚಾಮರಾಜನಗರ-ಆರ್.ಧ್ರವನಾರಾಯಣ್ಬೆಂಗಳೂರು ದಕ್ಷಿಣ-ಕೃಷ್ಣಬೈರೇಗೌಡ |