ಮುಖ್ಯ ಪುಟ > ಸುದ್ದಿ ಜಗತ್ತು > ಸುದ್ದಿಗಳು > ರಾಜ್ಯ ಸುದ್ದಿ > ಮಾಜಿ ಸಿಎಂ ಧರಂಗಿಂತ ಪತ್ನಿ ಕೋಟ್ಯಾಧೀಶೆ!
ಸಲಹೆ/ಪ್ರತಿಕ್ರಿಯೆಮಿತ್ರನಿಗೆ ಕಳುಹಿಸಿಈ ಪುಟ ಮುದ್ರಿಸಿ
 
ಮಾಜಿ ಸಿಎಂ ಧರಂಗಿಂತ ಪತ್ನಿ ಕೋಟ್ಯಾಧೀಶೆ!
ಮಾಜಿ ಮುಖ್ಯಮಂತ್ರಿ, ಬೀದರ್ ಲೋಕಸಭಾ ಕ್ಷೇತ್ರದ ಅಭ್ಯರ್ಥಿ ಎನ್.ಧರಂಸಿಂಗ್ ಕಾಂಗ್ರೆಸ್ ಅಭ್ಯರ್ಥಿಯಾಗಿ ಮಂಗಳವಾರ ನಾಮಪತ್ರ ಸಲ್ಲಿಸಿದ್ದು, ಅವರು ನೀಡಿದ ಆಸ್ತಿ ವಿವರದಲ್ಲಿ ಅವರ ಪತ್ನಿ ಪ್ರಭಾವತಿ ಕೋಟ್ಯಾಧೀಶೆ ಎಂಬ ಅಂಶ ದಾಖಲಾಗಿದೆ.

ಧರಂಸಿಂಗ್ ಅವರ ಚರ ಮತ್ತು ಸ್ಥಿರ ಆಸ್ತಿ ಸೇರಿದಂತೆ ಎರಡು ಕೋಟಿ ಎಂಬತ್ತು ಲಕ್ಷ ರೂಪಾಯಿಗಳ ಒಡೆಯರಾಗಿದ್ದಾರೆ. ಅವರ ಪತ್ನಿಯು 51 ಕೋಟಿ 46ಲಕ್ಷ ರೂಪಾಯಿ ಮೌಲ್ಯದ ಆಸ್ತಿಯ ಒಡೆಯರಾಗಿದ್ದು, ಅವರ ಒಟ್ಟು ಆಸ್ತಿ 55ಕೋಟಿ 6ಲಕ್ಷ ರೂಪಾಯಿ.

ಧರಂಸಿಂಗ್ ಅವರ ಬಳಿ 92ಲಕ್ಷ ರೂಪಾಯಿಗಳ ಚರ ಆಸ್ತಿಯಿದ್ದರೆ, ಒಂದು ಕೋಟಿ 88ಲಕ್ಷ ರೂಪಾಯಿ ಮೌಲ್ಯದ ಸ್ಥಿರ ಆಸ್ತಿ ಹೊಂದಿದ್ದಾರೆ. ಹಾಗೆಯೇ ಅವರ ಪತ್ನಿ ಪ್ರಭಾವತಿ ಅವರು ಆರು ಕೋಟಿ 81 ಲಕ್ಷ ರೂ. ಚರ ಮತ್ತು 44ಕೋಟಿ 64ಲಕ್ಷ ರೂ.ಮೌಲ್ಯದ ಸ್ಥಿರ ಆಸ್ತಿಯ ಮಾಲೀಕರಾಗಿದ್ದಾರೆ.

ಸಾಲ ಮಾಡಿರುವುದರಲ್ಲಿಯೂ ಧರಂಸಿಂಗ್ ಅವರಿಗಿಂತ ಅವರ ಪತ್ನಿಯೇ ಮುಂದಿದ್ದಾರೆ. ಅವರ ಪತ್ನಿಯ ಹೆಸರಿನಲ್ಲಿ 4ಕೋಟಿ 42ಲಕ್ಷ ರೂಪಾಯಿ ಸಾಲ ಇದ್ದರೆ, ಧರಂಸಿಂಗ್ ಅವರ ಸಾಲದ ಮೊತ್ತ 6ಲಕ್ಷದ 55ಸಾವಿರ ರೂ.ಗಳಷ್ಟು ಇದೆ.
ಸಂಬಂಧಿತ ಮಾಹಿತಿ ಹುಡುಕಿ
ಮತ್ತಷ್ಟು
ಕಾಂಗ್ರೆಸ್ ಸಮಸ್ಯೆ ಇತ್ಯರ್ಥದೊಳಗೆ ಚುನಾವಣೆ ಮುಗಿದಿರುತ್ತೆ:ಸಿಎಂ
ಮಂಗಳೂರು ಜಿಲ್ಲಾಧಿಕಾರಿ ವರ್ಗಾವಣೆಗೆ ಬಿಜೆಪಿ ಆಗ್ರಹ
ಚುನಾವಣಾ ಆಯೋಗದ ವಿರುದ್ಧ ದೇಶಪಾಂಡೆ ಆಕ್ರೋಶ
ಕಾಂಗ್ರೆಸ್ 2ನೇ ಪಟ್ಟಿ: ಚಿಕ್ಕಬಳ್ಳಾಪುರ-ಮೊಯ್ಲಿ,ಉಡುಪಿ-ಹೆಗ್ಡೆ
ಗೆಲುವಿಗಾಗಿ ಜಮೀರ್ ಅಹ್ಮದ್ 'ಸುದರ್ಶನ ಹೋಮ'
ಟಿಕೆಟ್ ಸಿಗಲಿ-ಬಿಡಲಿ ಸ್ಪರ್ಧೆ ಖಚಿತ: ಡಿ.ಬಿ.ಚಂದ್ರೇಗೌಡ