ಮುಖ್ಯ ಪುಟ > ಸುದ್ದಿ ಜಗತ್ತು > ಸುದ್ದಿಗಳು > ರಾಜ್ಯ ಸುದ್ದಿ > 'ಹಿಂದುತ್ವ' ಎನ್ನುವವರ ಕೈ ಕತ್ತರಿಸಬೇಕು: ಕಾಗೋಡು
ಸಲಹೆ/ಪ್ರತಿಕ್ರಿಯೆಮಿತ್ರನಿಗೆ ಕಳುಹಿಸಿಈ ಪುಟ ಮುದ್ರಿಸಿ
 
'ಹಿಂದುತ್ವ' ಎನ್ನುವವರ ಕೈ ಕತ್ತರಿಸಬೇಕು: ಕಾಗೋಡು
ಪಿಲಿಭಿಟ್ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ವರುಣ್ ಗಾಂಧಿ ವಿವಾದಿತ ಹೇಳಿಕೆ ನೀಡಿ ಜೈಲು ಕಂಬಿ ಎಣಿಸುತ್ತಿದ್ದರೆ, ಮತ್ತೊಂದೆಡೆ ರಾಜ್ಯ ಬಿಜೆಪಿ ಸಂಸದ ಕಾರವಾರ ಲೋಕಸಭಾ ಅಭ್ಯರ್ಥಿ, ಬಿಜೆಪಿಯ ಅನಂತಕುಮಾರ್ ಹೆಗಡೆ ಮುಸ್ಲಿಂ ಮತದ ಅವಶ್ಯಕತೆ ಇಲ್ಲ ಎಂಬ ಹೇಳಿಕೆ ಚುನಾವಣಾ ಆಯೋಗದ ಕೆಂಗಣ್ಣಿಗೆ ಗುರಿಯಾಗಿರುವ ಬೆನ್ನಲ್ಲೇ ಕಾಂಗ್ರೆಸ್ ಮುಖಂಡ ಕಾಗೋಡು ತಿಮ್ಮಪ್ಪ, ಹಿಂದುತ್ವ ಎನ್ನುವವರ ಕೈ ಕಡಿಯಬೇಕು ಎಂದು ಕಿಡಿಕಾರುವ ಮೂಲಕ ವಿವಾದಕ್ಕೆ ಈಡಾಗಿದ್ದಾರೆ.

ಸಾಗರದಲ್ಲಿ ಸೋಮವಾರ ಸಂಜೆ ನಡೆದ ಕಾಂಗ್ರೆಸ್ ಕಾರ್ಯಕರ್ತರ ಸಭೆಯಲ್ಲಿ ಮಾತನಾಡಿದ ಅವರು, ಹಿಂದುತ್ವ ಎನ್ನುವವರ ಕೈ ಕತ್ತರಿಸಬೇಕು, ಬಹುಸಂಖ್ಯಾತರು ಅಂದ್ರೆ ಯಾರು?ಎಷ್ಟು ಪರ್ಸೆಂಟ್ ಇದೀರಿ ?ನೀವ್ ಪೂಜೆ ಮಾಡಕೆ, ನಾವ್ ಪ್ರಸಾದ ತಗೊಳ್ಳೋಕೆ. ನಾಚ್ಕೆ ಆಗಲ್ವ ನಿಮಗೆ ?ಅಂತ ಕಿಡಿಕಾರಿದ್ದರು.

ಇದೀಗ ಮಾಜಿ ಸಚಿವ ಕಾಗೋಡು ಹೇಳಿಕೆ ವಿರೋಧ ಪಕ್ಷಗಳನ್ನು ಕೆರಳಿಸಿದ್ದು, ಅವರ ವಿರುದ್ದ ಕ್ರಿಮಿನಲ್ ಮೊಕದ್ದಮೆ ದಾಖಲಿಸುವಂತೆ ಒತ್ತಾಯಿಸಿದೆ.

ಜಿಲ್ಲಾ ಚುನಾವಣಾಧಿಕಾರಿ ಪಂಕಜ್ ಕುಮಾರ್ ಅವರಿಗೆ ಮಂಗಳವಾರ ಬಿಜೆಪಿ ಪಕ್ಷದ ಜಿಲ್ಲಾಧ್ಯಕ್ಷ ಗಿರೀಶ್ ಪಟೇಲ್, ಮುಖಂಡರಾದ ಜ್ಯೋತಿಪ್ರಕಾಶ್, ದೇವದಾಸ್ ನಾಯಕ್, ಸುಭಾಷ್ ಮನವಿ ಸಲ್ಲಿಸಿದ್ದಾರೆ. ಕಾಂಗ್ರೆಸ್ ಲೋಕಸಭಾ ಅಭ್ಯರ್ಥಿ ಬಂಗಾರಪ್ಪ, ಮಾಜಿ ಸಚಿವ ಕುಮಾರ್ ಬಂಗಾರಪ್ಪ ಮತ್ತಿತರ ಮುಖಂಡರ ಉಪಸ್ಥಿತಿಯಲ್ಲಿ ಕಾಗೋಡು ತಿಮ್ಮಪ್ಪ ಅವರು ಮಾಡಿರುವ ಭಾಷಣ ಐಪಿಸಿ 153ರ ಅನ್ವಯ ಶಿಕ್ಷಿಸಬಹುದಾದ ಅಪರಾಧ ಎಂದು ಬಿಜೆಪಿ ಹೇಳಿದೆ.
ಸಂಬಂಧಿತ ಮಾಹಿತಿ ಹುಡುಕಿ
ಮತ್ತಷ್ಟು
ಮಾಜಿ ಸಿಎಂ ಧರಂಗಿಂತ ಪತ್ನಿ ಕೋಟ್ಯಾಧೀಶೆ!
ಕಾಂಗ್ರೆಸ್ ಸಮಸ್ಯೆ ಇತ್ಯರ್ಥದೊಳಗೆ ಚುನಾವಣೆ ಮುಗಿದಿರುತ್ತೆ:ಸಿಎಂ
ಮಂಗಳೂರು ಜಿಲ್ಲಾಧಿಕಾರಿ ವರ್ಗಾವಣೆಗೆ ಬಿಜೆಪಿ ಆಗ್ರಹ
ಚುನಾವಣಾ ಆಯೋಗದ ವಿರುದ್ಧ ದೇಶಪಾಂಡೆ ಆಕ್ರೋಶ
ಕಾಂಗ್ರೆಸ್ 2ನೇ ಪಟ್ಟಿ: ಚಿಕ್ಕಬಳ್ಳಾಪುರ-ಮೊಯ್ಲಿ,ಉಡುಪಿ-ಹೆಗ್ಡೆ
ಗೆಲುವಿಗಾಗಿ ಜಮೀರ್ ಅಹ್ಮದ್ 'ಸುದರ್ಶನ ಹೋಮ'