ಮುಖ್ಯ ಪುಟ > ಸುದ್ದಿ ಜಗತ್ತು > ಸುದ್ದಿಗಳು > ರಾಜ್ಯ ಸುದ್ದಿ > ಕುಮಾರಸ್ವಾಮಿ ಜೈಲುಪಾಲಾಗುವುದು ಖಚಿತ: ಜನಾರ್ದನ ರೆಡ್ಡಿ
ಸಲಹೆ/ಪ್ರತಿಕ್ರಿಯೆಮಿತ್ರನಿಗೆ ಕಳುಹಿಸಿಈ ಪುಟ ಮುದ್ರಿಸಿ
 
ಕುಮಾರಸ್ವಾಮಿ ಜೈಲುಪಾಲಾಗುವುದು ಖಚಿತ: ಜನಾರ್ದನ ರೆಡ್ಡಿ
NRB
ಜೆಡಿಎಸ್ ರಾಜ್ಯಾಧ್ಯಕ್ಷ, ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಅವರು ಬಳ್ಳಾರಿ ವಿವಾದಿತ ಗಣಿ ಪ್ರದೇಶಕ್ಕೆ ರಹಸ್ಯವಾಗಿ ಭೇಟಿ ನೀಡುವ ಮೂಲಕ ಅಕ್ರಮಗಣಿಗಾರಿಕೆಗೆ ಬೆಂಬಲ ನೀಡುತ್ತಿದ್ದಾರೆಂಬುದಕ್ಕೆ ಪುಷ್ಠಿ ಸಿಕ್ಕಂತಾಗಿದೆ ಎಂದು ಸಚಿವ ಜನಾರ್ದನ ರೆಡ್ಡಿ ಆರೋಪಿಸಿದ್ದು, ಕುಮಾರಸ್ವಾಮಿ ಜೈಲು ಪಾಲಾಗುವುದರಲ್ಲಿ ಯಾವುದೇ ಅನುಮಾನವಿಲ್ಲ ಎಂದು ಭವಿಷ್ಯ ನುಡಿದಿದ್ದಾರೆ.

ಬಳ್ಳಾರಿಯಲ್ಲಿ ಬುಧವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕುಮಾರಸ್ವಾಮಿಯವರು ವಿವಾದಿತ ಎಂಎಸ್‌ಪಿಎಲ್ ಒಡೆತನದ ಗಣಿ ಪ್ರದೇಶಕ್ಕೆ ರಹಸ್ಯವಾಗಿ ಭೇಟಿ ನೀಡುವ ಮೂಲಕ, ಅಕ್ರಮ ಗಣಿಗಾರಿಕೆಯವರಿಂದ ಗಣಿ ಕಪ್ಪ ಸಂಗ್ರಹಿಸುತ್ತಿದ್ದಾರೆಂಬ ಆರೋಪಕ್ಕೆ ಪುಷ್ಠಿ ಸಿಕ್ಕಂತಾಗಿದೆ ಎಂದು ದೂರಿದರು.

NRB
ಈ ಸಂದರ್ಭದಲ್ಲಿ ಕುಮಾರಸ್ವಾಮಿಯವರು ರಹಸ್ಯವಾಗಿ ಗಣಿಪ್ರದೇಶಕ್ಕೆ ಭೇಟಿ ನೀಡಿದ ವೀಡಿಯೋವನ್ನು ಬಿಡುಗಡೆ ಮಾಡಿದರು. ಅಲ್ಲದೇ ಈ ಮೊದಲೇ ನಾನು ಮಾಜಿ ಮುಖ್ಯಮಂತ್ರಿ ಕುಮಾರಸ್ವಾಮಿ ಅವರ ವಿರುದ್ಧ 150ಕೋಟಿ ರೂ.ಗಳ ಗಣಿಕಪ್ಪದ ಆರೋಪ ಮಾಡಿದ್ದೇ. ಅದಕ್ಕೆ ಈಗ ಪುಷ್ಠಿ ಸಿಕ್ಕಿದೆ. ಪ್ರಕರಣ ನ್ಯಾಯಾಲಯದಲ್ಲಿದ್ದು, ಕುಮಾರಸ್ವಾಮಿ ಜೈಲು ಪಾಲಾಗುವುದರಲ್ಲಿ ಯಾವುದೇ ಅನುಮಾನ ಇಲ್ಲ ಎಂದರು.

ಅಕ್ರಮ ಗಣಿಗಾರಿಕೆ ವಿರುದ್ಧ ಕೂಗು ಹಾಕುತ್ತಿರುವ ಕುಮಾರಸ್ವಾಮಿಯವರು ಹಾಗೂ ಜೆಡಿಎಸ್ ಯಾಕೆ ರಹಸ್ಯವಾಗಿ ವಿವಾದಿತ ಅಕ್ರಮ ಗಣಿಗಾರಿಕಾ ಪ್ರದೇಶಕ್ಕೆ ಭೇಟಿ ನೀಡಿದ್ದಾರೆ?ಎಂದು ಪ್ರಶ್ನಿಸಿದ್ದಾರೆ.
ಸಂಬಂಧಿತ ಮಾಹಿತಿ ಹುಡುಕಿ
ಮತ್ತಷ್ಟು
'ಹಿಂದುತ್ವ' ಎನ್ನುವವರ ಕೈ ಕತ್ತರಿಸಬೇಕು: ಕಾಗೋಡು
ಮಾಜಿ ಸಿಎಂ ಧರಂಗಿಂತ ಪತ್ನಿ ಕೋಟ್ಯಾಧೀಶೆ!
ಕಾಂಗ್ರೆಸ್ ಸಮಸ್ಯೆ ಇತ್ಯರ್ಥದೊಳಗೆ ಚುನಾವಣೆ ಮುಗಿದಿರುತ್ತೆ:ಸಿಎಂ
ಮಂಗಳೂರು ಜಿಲ್ಲಾಧಿಕಾರಿ ವರ್ಗಾವಣೆಗೆ ಬಿಜೆಪಿ ಆಗ್ರಹ
ಚುನಾವಣಾ ಆಯೋಗದ ವಿರುದ್ಧ ದೇಶಪಾಂಡೆ ಆಕ್ರೋಶ
ಕಾಂಗ್ರೆಸ್ 2ನೇ ಪಟ್ಟಿ: ಚಿಕ್ಕಬಳ್ಳಾಪುರ-ಮೊಯ್ಲಿ,ಉಡುಪಿ-ಹೆಗ್ಡೆ