ಮಡಿಕೇರಿ ಗೋಣಿಕೊಪ್ಪಲಿನ ಆಭರಣ ವ್ಯಾಪಾರಿ ಕೆ.ಗೋಪಿನಾಥ್ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಜಿಲ್ಲಾ ಸತ್ರ ನ್ಯಾಯಾಲಯ ಬುಧವಾರ ಮೂರು ಮಂದಿ ಆರೋಪಿಗಳಿಗೆ ಗಲ್ಲುಶಿಕ್ಷೆ ವಿಧಿಸಿ ತೀರ್ಪು ನೀಡಿದೆ.
ಗೋಪಿನಾಥ್ ಕೊಲೆ ಪ್ರಕರಣದ ಕುರಿತು ವಿಚಾರಣೆ ನಡೆಸಿದ ಜಿಲ್ಲಾ ಸತ್ರ ನ್ಯಾಯಾಲಯದ ನ್ಯಾಯಪೀಠ, ಇದೊಂದು ಹೇಯಕೃತ್ಯವಾಗಿದ್ದು, ಆರೋಪಿಗಳಿಗೆ ಮರಣದಂಡನೆ ವಿಧಿಸಿರುವುದಾಗಿ ಹೇಳಿದೆ.
ಪ್ರಕರಣದ ಆರೋಪಿಗಳಾದ ಮನೋಜ್ ಕುಮಾರ್, ರಫೀಕ್ ಹಾಗೂ ಜನಾರ್ದನ್ ಮರಣದಂಡನೆ ಶಿಕ್ಷೆಗೆ ಗುರಿಯಾಗಿದ್ದಾರೆ. 2002ರಲ್ಲಿ ಗೋಣಿಕೊಪ್ಪಲಿನ ಚಿನ್ನಾಭರಣ ವ್ಯಾಪಾರಿಯಾದ ಗೋಪಿನಾಥ್ ಅವರನ್ನು ಮೂವರು ಆರೋಪಿಗಳು ಕಾರಿನಲ್ಲಿ ಅಪಹರಿಸಿ, ಹುಣಸೂರು ಬಳಿ ಹಗ್ಗ ಬಿಗಿದು ಕೊಲೆಗೈದಿದ್ದರು. ಬಳಿಕ ಶವವನ್ನು ಮನೋಜ್ ಕುಮಾರ್ ಮನೆಯ ಹಿಂದಿನ ಬಾವಿಗೆ ಎಸೆದಿದ್ದರು.
ಗೋಪಿನಾಥ್ ಮನೆ ಬಾರಿದಿರುವುದನ್ನು ಕಂಡ ಮಗ ಪೊಲೀಸರಿಗೆ ದೂರು ಸಲ್ಲಿಸಿದ್ದರು. ತನಿಖೆ ಬಳಿಕ ಕುಟುಂಬದ ಪರಿಚಿತರಾದ ಮನೋಜ್, ಜನಾರ್ದನ್ ಹಾಗೂ ರಫೀಕ್ ಕೊಲೆಗೈದಿರುವ ವಿಷಯ ಬಹಿರಂಗಗೊಂಡಿತ್ತು. |