ಮುಖ್ಯ ಪುಟ > ಸುದ್ದಿ ಜಗತ್ತು > ಸುದ್ದಿಗಳು > ರಾಜ್ಯ ಸುದ್ದಿ > ರೆಡ್ಡಿ ಜೈಲುಪಾಲಾಗೋದು ಗ್ಯಾರಂಟಿ: ಕುಮಾರಸ್ವಾಮಿ
ಸಲಹೆ/ಪ್ರತಿಕ್ರಿಯೆಮಿತ್ರನಿಗೆ ಕಳುಹಿಸಿಈ ಪುಟ ಮುದ್ರಿಸಿ
 
ರೆಡ್ಡಿ ಜೈಲುಪಾಲಾಗೋದು ಗ್ಯಾರಂಟಿ: ಕುಮಾರಸ್ವಾಮಿ
ಬಳ್ಳಾರಿಯ ವಿವಾದಿತ ಗಣಿಗಾರಿಕೆ ಪ್ರದೇಶಕ್ಕೆ ಯಾವುದೇ ಅಕ್ರಮ ಚಟುವಟಿಕೆ ನಡೆಸಲು ಹೋಗಿಲ್ಲ, ಅಲ್ಲಿ ಏನು ನಡೆಯುತ್ತಿದೆ ಎಂಬುದನ್ನು ನೋಡಲು ಹೋಗಿದ್ದೆ ಎಂದ ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಸಚಿವ ಜನಾರ್ದನ ರೆಡ್ಡಿ ಆರೋಪಕ್ಕೆ ತಿರುಗೇಟು ನೀಡಿದ್ದು, ಅಕ್ರಮ ಗಣಿಗಾರಿಕೆ ನಡೆಸುತ್ತಿರುವ ರೆಡ್ಡಿ ಜೈಲುಪಾಲಾಗೋದು ಖಂಡಿತ ಎಂದರು.

ನ್ಯಾಯಾಲಯದ ಆದೇಶವನ್ನು ಧಿಕ್ಕರಿಸಿ ಬಳ್ಳಾರಿಯಲ್ಲಿ ರೆಡ್ಡಿ ಪಟಾಲಂ ನಡೆಸುತ್ತಿರುವ ಹಗಲು ದರೋಡೆ ನಡೆಸುತ್ತಿದೆ ಎಂದು ಗಂಭೀರವಾಗಿ ದೂರಿರುವ ಅವರು, ಗಡಿ ಭಾಗದಲ್ಲಿ ನಡೆಯುತ್ತಿರುವ ಅದಿರು ಕಳ್ಳಸಾಗಾಣಿಕೆ ಕುರಿತು ಹಾಗೂ ಆ ಸ್ಥಳದ ಪರಿಶೀಲನೆಗಾಗಿ ಸ್ಥಳೀಯರು ಆಹ್ವಾನ ನೀಡಿದ ಮೇರೆಗೆ ಭೇಟಿ ನೀಡಿದ್ದೇ ವಿನಃ ಅಕ್ರಮ ಚಟುವಟಿಕೆ ನಡೆಸಲು ಅಲ್ಲ ಎಂದು ಸ್ಪಷ್ಟಪಡಿಸಿದರು.

ಬಳ್ಳಾರಿಯ ವಿವಾದಿತ ಗಣಿ ಪ್ರದೇಶಕ್ಕೆ ಕುಮಾರಸ್ವಾಮಿಯವರು ರಹಸ್ಯ ಭೇಟಿ ನೀಡುವ ಮೂಲಕ, ಅಕ್ರಮ ಗಣಿಗಾರಿಕೆಗೆ ಬೆಂಬಲ ನೀಡುತ್ತಿದ್ದಾರೆಂಬ ಆರೋಪಕ್ಕೆ ಪುಷ್ಠಿ ಸಿಕ್ಕಂತಾಗಿದೆ ಎಂದು ಸಚಿವ ಜನಾರ್ದನ ರೆಡ್ಡಿ ಮಾಡಿರುವ ಆರೋಪಕ್ಕೆ ಸುದ್ದಿಗಾರರೊಂದಿಗೆ ಮಾತನಾಡುತ್ತ ಪ್ರತಿಕ್ರಿಯೆ ನೀಡಿದರು.

ಕುಮಾರಸ್ವಾಮಿಗೆ ಜೈಲು ಗ್ಯಾರಂಟಿ ಎನ್ನುವ ರೆಡ್ಡಿ ಹೇಳಿಕೆಗೆ ತೀಕ್ಷ್ಣವಾಗಿ ತಿರುಗೇಟು ನೀಡಿದ ಅವರು, ಭಗವಂತನ ಇಚ್ಚೆ ಇದ್ದರೆ, ಮುಂದಿನ ದಿನಗಳಲ್ಲಿ ಯಾರು ಜೈಲುಪಾಲಾಗುತ್ತಾರೆ ಎಂಬುದನ್ನು ನೀವೇ ಕಾದು ನೋಡಿ ಎಂದು ಹೇಳಿದರು.
ಸಂಬಂಧಿತ ಮಾಹಿತಿ ಹುಡುಕಿ
ಮತ್ತಷ್ಟು
ಮಡಿಕೇರಿ: ಮೂವರು ಹಂತಕರಿಗೆ ಗಲ್ಲು ಶಿಕ್ಷೆ
ಕಾರವಾರ: ಭೀಕರ ಅಫಘಾತಕ್ಕೆ ಸುರತ್ಕಲ್‌ನ ನಾಲ್ವರು ಬಲಿ
ಬ್ಲಾಕ್‌ಮೇಲ್ ಮೂಲಕವೇ ಸಿದ್ದು ರಾಜಕಾರಣ: ಎಚ್‌ಡಿಕೆ
ಲೋಕಸಭೆ-ಗೆದ್ದೇ ಗೆಲ್ಲುವೆ: ಮಲ್ಲಿಕಾರ್ಜುನ ಖರ್ಗೆ
ಕುಮಾರಸ್ವಾಮಿ ಜೈಲುಪಾಲಾಗುವುದು ಖಚಿತ: ಜನಾರ್ದನ ರೆಡ್ಡಿ
'ಹಿಂದುತ್ವ' ಎನ್ನುವವರ ಕೈ ಕತ್ತರಿಸಬೇಕು: ಕಾಗೋಡು