ಮುಖ್ಯ ಪುಟ > ಸುದ್ದಿ ಜಗತ್ತು > ಸುದ್ದಿಗಳು > ರಾಜ್ಯ ಸುದ್ದಿ > ದಾವೂದ್‌ ಬಂಟರಿಂದ ಮುತಾಲಿಕ್ ಹತ್ಯೆಗೂ ಸಂಚು
ಸಲಹೆ/ಪ್ರತಿಕ್ರಿಯೆಮಿತ್ರನಿಗೆ ಕಳುಹಿಸಿಈ ಪುಟ ಮುದ್ರಿಸಿ
 
ದಾವೂದ್‌ ಬಂಟರಿಂದ ಮುತಾಲಿಕ್ ಹತ್ಯೆಗೂ ಸಂಚು
NRB
ಪಿಲಿಭಿಟ್ ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ವರುಣ್ ಗಾಂಧಿ, ಗುಜರಾತ್ ಮುಖ್ಯಮಂತ್ರಿ ನರೇಂದ್ರ ಮೋದಿ ಹಾಗೂ ಶ್ರೀರಾಮಸೇನೆ ಸಂಸ್ಥಾಪಕ ಪ್ರಮೋದ್ ಮುತಾಲಿಕ್ ಕೊಲೆಗೆ ಭೂಗತ ಪಾತಕಿ ದಾವೂದ್ ಇಬ್ರಾಹಿಂ ಬಲಗೈ ಬಂಟ ಛೋಟಾಶಕೀಲ್ ಗ್ಯಾಂಗ್‌ ಸಂಚು ರೂಪಿಸಿರುವ ಬಗ್ಗೆ ಗುಪ್ತಚರ ಇಲಾಖೆ ಎಚ್ಚರಿಕೆ ನೀಡಿದೆ.

ಮಾರ್ಚ್ 30ರಂದು ಮಂಗಳೂರು ಸಮೀಪದ ಉಳ್ಳಾಲದಲ್ಲಿ ಐದು ಮಂದಿ ದಾವೂದ್ ಸಹಚರರನ್ನು ಬಂಧಿಸಲಾಗಿತ್ತು. ಬಂಧಿತರಲ್ಲಿ ಇಂಟರ್‌ಪೋಲ್‌ಗೆ ಬೇಕಾಗಿದ್ದ ಮುಂಬೈ ಮೂಲದ ಕ್ರಿಮಿನಲ್ ರಶೀದ್ ಮಲಬಾರಿ ಕೂಡ ಸೇರಿದ್ದು, ವಿಚಾರಣೆ ವೇಳೆ ಈ ಆಘಾತಕಾರಿ ಅಂಶ ಬಯಲಾಗಿರುವುದಾಗಿ ಗುಪ್ತಚರ ಇಲಾಖೆಯ ಮೂಲಗಳು ತಿಳಿಸಿದೆ. ವರುಣ್ ಗಾಂಧಿ ಪಿಲಿಭಿಟ್‌‌ನಲ್ಲಿ ಬಂಧನಕ್ಕೀಡಾಗಲು ಆಗಮಿಸುವ ವೇಳೆಗೆ ಅವರ ಮೇಲೆ ಗುಂಡೆಸೆಯಲು ಈ ಪಾತಕಿಗಳು ಯೋಜಿಸಿದ್ದರು ಎಂದು ಹೇಳಲಾಗಿದೆ.

ಅದೇ ರೀತಿ ಮಂಗಳೂರಿಗೆ ಆಗಮಿಸಿದ್ದ ಈ ಹಂತಕ ಪಡೆ ಶ್ರೀರಾಮಸೇನೆಯ ಸಂಸ್ಥಾಪಕ ಪ್ರಮೋದ್ ಮುತಾಲಿಕ್, ಗುಜರಾತ್ ಮುಖ್ಯಮಂತ್ರಿ ನರೇಂದ್ರ ಮೋದಿ ಅವರನ್ನು ಮುಗಿಸಲು ಸಂಚು ಹೂಡಲಾಗಿತ್ತು ಎಂಬ ಅಂಶವನ್ನು ಹೊರಗೆಡಹಿದ್ದರು.

ಇಂಟರ್‌ಪೋಲ್‌ಗೆ ಬೇಕಾಗಿದ್ದ ಮುಂಬೈ ಮೂಲದ ಕ್ರಿಮಿನಲ್ ರಶೀದ್ ಮಲಬಾರಿ, ಮಹಾರಾಷ್ಟ್ರ ಥಾಣೆಯ ಸಾಯಿಲ್ ಇಸ್ಮಾಯಿಲ್, ಕಾಪು ನಿವಾಸಿ ಇಬ್ರಾಹಿಂ ಹಾಗೂ ಕಾಸರಗೋಡಿನ ಸಯಾಫ್, ಮೊಹಮ್ಮದ್ ಕಾಸಿಂ ಸೇರಿದಂತೆ ಐದು ಮಂದಿಯನ್ನು ಸೋಮವಾರ ಉಳ್ಳಾಲ ಪೊಲೀಸರು ಬಂಧಿಸಿದ್ದರು.

ಬಂಧಿತರಿಂದ ಬಂದೂಕು, ಸಜೀವ ಗುಂಡು, ಕಾರು, ಸ್ವದೇಶಿ-ವಿದೇಶಿ ಸಿಮ್ ಕಾರ್ಡ್ ಹಾಗೂ 19ಸಾವಿರ ರೂ.ನಗದನ್ನು ವಶಪಡಿಸಿಕೊಳ್ಳಲಾಗಿತ್ತು.
ಸಂಬಂಧಿತ ಮಾಹಿತಿ ಹುಡುಕಿ
ಮತ್ತಷ್ಟು
ರೆಡ್ಡಿ ಜೈಲುಪಾಲಾಗೋದು ಗ್ಯಾರಂಟಿ: ಕುಮಾರಸ್ವಾಮಿ
ಮಡಿಕೇರಿ: ಮೂವರು ಹಂತಕರಿಗೆ ಗಲ್ಲು ಶಿಕ್ಷೆ
ಕಾರವಾರ: ಭೀಕರ ಅಫಘಾತಕ್ಕೆ ಸುರತ್ಕಲ್‌ನ ನಾಲ್ವರು ಬಲಿ
ಬ್ಲಾಕ್‌ಮೇಲ್ ಮೂಲಕವೇ ಸಿದ್ದು ರಾಜಕಾರಣ: ಎಚ್‌ಡಿಕೆ
ಲೋಕಸಭೆ-ಗೆದ್ದೇ ಗೆಲ್ಲುವೆ: ಮಲ್ಲಿಕಾರ್ಜುನ ಖರ್ಗೆ
ಕುಮಾರಸ್ವಾಮಿ ಜೈಲುಪಾಲಾಗುವುದು ಖಚಿತ: ಜನಾರ್ದನ ರೆಡ್ಡಿ