ಮಾಜಿ ಮುಖ್ಯಮಂತ್ರಿ, ಯುವ ನೇತಾರ, ಜೆಡಿಎಸ್ ರಾಜ್ಯಾಧ್ಯಕ್ಷ ಮಾಜಿ ಪ್ರಧಾನಿ ಪುತ್ರ ಕುಮಾರ ಸ್ವಾಮಿಬಳಿ ಸ್ವಂತಕ್ಕೊಂದು ವಾಹನವೇ ಇಲ್ಲ! ಹೋಗಲಿ ಬಿಡಿ ಅವರ ಪತ್ನಿ ಬಳಿ ಇರ್ಬೋದು ಅಂತೀರಾ? ಊಹುಂ ಅವರ ಬಳಿಯೂ ಇಲ್ವಂತೆ!ಬೆಂಗಳೂರು ಗ್ರಾಮಾಂತರ ಲೋಕಸಭಾ ಕ್ಷೇತ್ರದಿಂದ ಜೆಡಿಎಸ್ ಅಭ್ಯರ್ಥಿಯಾಗಿ ಕಣಕ್ಕಿಳಿದ ಕುಮಾರಸ್ವಾಮಿ ಅವರು ಬುಧವಾರ ಸಲ್ಲಿಸಿರುವ ನಾಮಪತ್ರದೊಂದಿಗೆ ಅಡಕವಾಗಿದ್ದ ಪ್ರಮಾಣಪತ್ರ ಹೇಳುತ್ತಿರುವ ಸತ್ಯಗಳಿವು.ಕುಮಾರ ಸ್ವಾಮಿಗೆ ಹೋಲಿಸಿದರೆ ಆಸ್ತಿ ಹಾಗೂ ಸಾಲ ಎರಡರಲ್ಲೂ ಅನಿತಾ ಮುಂದಿದ್ದಾರೆ. ಕುಮಾರಸ್ವಾಮಿ ಒಟ್ಟು ಆಸ್ತಿ 7.07 ಕೋಟಿ ರೂಪಾಯಿ. ಸಾಲ 2.41 ಕೋಟಿ. ಅನಿತಾ ಅವರ ಹೊಂದಿರುವ ಒಟ್ಟು ಆಸ್ತಿ 33.1 ಕೋಟಿ ಆಗಿದ್ದರೆ ಅವರ ಮೇಲಿರುವ ಋಣಭಾರ 31,2 ಕೋಟಿ ರೂಪಾಯಿಗಳು. |