ಮುಖ್ಯ ಪುಟ > ಸುದ್ದಿ ಜಗತ್ತು > ಸುದ್ದಿಗಳು > ರಾಜ್ಯ ಸುದ್ದಿ > ಲೋಕಸಭಾ ಅಖಾಡದಲ್ಲಿ ಐವರು ಮಾಜಿ ಸಿಎಂಗಳು...
ಸಲಹೆ/ಪ್ರತಿಕ್ರಿಯೆಮಿತ್ರನಿಗೆ ಕಳುಹಿಸಿಈ ಪುಟ ಮುದ್ರಿಸಿ
 
ಲೋಕಸಭಾ ಅಖಾಡದಲ್ಲಿ ಐವರು ಮಾಜಿ ಸಿಎಂಗಳು...
NRB
ಈ ಬಾರಿಯಾ ಲೋಕಸಭೆಯಲ್ಲಿ ಐವರು ಮಾಜಿ ಮುಖ್ಯಮಂತ್ರಿಗಳು ಅಖಾಡಕ್ಕಿಳಿದು ಅದೃಷ್ಟ ಪರೀಕ್ಷೆಗೆ ಮುಂದಾಗಿದ್ದು, ಎಚ್.ಡಿ.ದೇವೇಗೌಡ, ಎಸ್.ಬಂಗಾರಪ್ಪ, ಎಂ. ವೀರಪ್ಪ ಮೊಯಿಲಿ, ಎನ್.ಧರ್ಮಸಿಂಗ್ ಮತ್ತು ಎಚ್.ಡಿ.ಕುಮಾರಸ್ವಾ,ಮಿ 15ನೇ ಲೋಕಸಭೆ ಪ್ರವೇಶಿಸುವ ಕನಸು ಹೊತ್ತು ಕಣಕ್ಕಿಳಿದಿದ್ದಾರೆ.

ತಮ್ಮ ಸುದೀರ್ಘ ರಾಜಕೀಯ ಬದುಕಿನಲ್ಲಿ ಮುಖ್ಯಮಂತ್ರಿ ಹಾಗೂ ಪ್ರಧಾನ ಮಂತ್ರಿ ಎರಡೂ ಅತ್ಯುನ್ನತ ಹುದ್ದೆಗಳನ್ನು ಅಲಂಕರಿಸಿದ್ದ ದೇವೇಗೌಡರು ಇದೀಗ ಮತ್ತೆ ಹಾಸನ ಕ್ಷೇತ್ರದಿಂದ ಸ್ಪರ್ಧೆಗಿಳಿದಿದ್ದಾರೆ. ಮೂರು ಬಾರಿ ಗೆದ್ದು, 1 ಬಾರಿ ಸೋತಿರುವ ದೇವೇಗೌಡರು ನಾಲ್ಕನೇ ಬಾರಿಗೆ ಲೋಕಸಭೆ ಪ್ರವೇಶಿಸುವ ಆಸಕ್ತಿ ತೋರಿದ್ದಾರೆ.

NRB
ಸೋಲಿಲ್ಲದ ಸರದಾರ ಎಂದೇ ಹೆಸರಾಗಿದ್ದ ಬಂಗಾರಪ್ಪ ಇದೀಗ ಶಿವಮೊಗ್ಗ ಕ್ಷೇತ್ರದಿಂದ ಕಾಂಗ್ರೆಸ್ ಅಭ್ಯರ್ಥಿಯಾಗಿದ್ದಾರೆ. ಈ ಚುನಾವಣೆ ಮೂಲಕ ಸಾರ್ವಜನಿಕ ಬದುಕು ಪ್ರವೇಶಿಸುತ್ತಿರುವ ಮುಖ್ಯಮಂತ್ರಿ ಯಡಿಯೂರಪ್ಪ ಪುತ್ರ ಬಿ.ವೈ.ರಾಘವೇಂದ್ರ, ಬಂಗಾರಪ್ಪ ಎದುರಾಳಿ. ಕಳೆದ ವಿಧಾನಸಭಾ ಚುನಾವಣೆಯಲ್ಲಿ ಬಂಗಾರಪ್ಪ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರಿಗೆ ಎದುರಾಳಿಯಾಗಿ ಸ್ಪರ್ಧಿಸಿ ಸೋಲು ಕಂಡಿದ್ದರು.

NRB
ಲೋಕಸಭೆ ಪ್ರವೇಶಿಸುವ ಮೂರು ಪ್ರಯತ್ನಗಳಲ್ಲಿ ವಿಫಲರಾಗಿರುವ ಮಾಜಿ ಮುಖ್ಯಮಂತ್ರಿ ಎಂ.ವೀರಪ್ಪ ಮೊಯಿಲಿ ಅವರು ಇದೀಗ ಕರಾವಳಿ ಭಾಗದ ಸಹವಾಸವನ್ನೇ ತೊರೆದು ದೂರದ ಬಯಲುಸೀಮೆ ಚಿಕ್ಕಬಳ್ಳಾಪುರ ಕ್ಷೇತ್ರದ ಮೂಲಕ ಲೋಕಸಭೆ ಪ್ರವೇಶಿಸಲು ಅದೃಷ್ಟ ಪರೀಕ್ಷೆಗೆ ಮುಂದಾಗಿದ್ದಾರೆ. ಈ ಐವರು ಮಾಜಿ ಸಿಎಂಗಳಲ್ಲಿ ಯಾರು ಗೆಲ್ಲುತ್ತಾರೋ ಕಾದು ನೋಡಬೇಕು. ಅದೇ ರೀತಿ ಮಾಜಿ ಸಿಎಂ ಎಚ್.ಡಿ.ಕುಮಾರಸ್ವಾಮಿಯವರು ಲೋಕಸಭೆಗೆ ಹಾರುವ ಕನಸಿನೊಂದಿಗೆ ಬೆಂಗಳೂರು ಗ್ರಾಮಾಂತರ ಕ್ಷೇತ್ರದಿಂದ ಅಖಾಡಕ್ಕಿಳಿದಿದ್ದಾರೆ.
ಸಂಬಂಧಿತ ಮಾಹಿತಿ ಹುಡುಕಿ
ಮತ್ತಷ್ಟು
ಕಾಂಗ್ರೆಸ್ ಅಭ್ಯರ್ಥಿಗಳಿಲ್ಲದೆ ದಿವಾಳಿಯಾಗಿದೆ: ವೆಂಕಯ್ಯ ನಾಯ್ಡು
ರಶೀದ್‌‌ನನ್ನು ಬಿಡಿ, ಇಲ್ಲದಿದ್ರೆ ಸರಣಿ ಸ್ಫೋಟ: ಬೆದರಿಕೆ ಕರೆ
ವಿವಾದಿತ ಹೇಳಿಕೆ: ಅನಂತಕುಮಾರ್ ಹೆಗಡೆಗೆ ನೋಟಿಸ್ ಜಾರಿ
ಬಿ.ಎಸ್.ಯಡಿಯೂರಪ್ಪ ವಿರುದ್ಧ ದೂರು ದಾಖಲು
ಕುಮಾರ್ ಬಳಿ ಸ್ವಂತ ವಾಹನವೇ ಇಲ್ವಂತೆ!
ಎಚ್‌ಡಿಕೆ - ಜಮೀರ್ - ಕತ್ತಿ ನಾಮಪತ್ರ ಸಲ್ಲಿಕೆ