ಮುಖ್ಯ ಪುಟ > ಸುದ್ದಿ ಜಗತ್ತು > ಸುದ್ದಿಗಳು > ರಾಜ್ಯ ಸುದ್ದಿ > ಗಲಭೆ: ಕ್ಯಾತಮಾರನಹಳ್ಳಿಯಲ್ಲಿ ನಿಷೇಧಾಜ್ಞೆ ಜಾರಿ
ಸಲಹೆ/ಪ್ರತಿಕ್ರಿಯೆಮಿತ್ರನಿಗೆ ಕಳುಹಿಸಿಈ ಪುಟ ಮುದ್ರಿಸಿ
 
ಗಲಭೆ: ಕ್ಯಾತಮಾರನಹಳ್ಳಿಯಲ್ಲಿ ನಿಷೇಧಾಜ್ಞೆ ಜಾರಿ
ಕ್ಷುಲ್ಲಕ ಕಾರಣಗಳಿಂದ ಎರಡು ಗುಂಪುಗಳು ನಡುವೆ ನಡೆದ ಜಗಳ ಹಿಂಸಾಚಾರಕ್ಕೆ ತಿರುಗಿದ ಪರಿಣಾಮ ಗುಂಪನ್ನು ಚದುರಿಸಲು ಪೊಲೀಸರು ಅಶ್ರುವಾಯು ಸಿಡಿಸಿದ್ದು, ಪರಿಸ್ಥಿತಿಯ ಹತೋಟಿಗಾಗಿ ನಿಷೇಧಾಜ್ಞೆ ಜಾರಿ ಮಾಡಿರುವ ಘಟನೆ ಕ್ಯಾತಮಾರನಹಳ್ಳಿಯಲ್ಲಿ ನಡೆದಿದ್ದು, ಎಲ್ಲೆಡೆ ಬಿಗು ಪೊಲೀಸ್ ಬಂದೋಬಸ್ತ್ ಏರ್ಪಡಿಸಲಾಗಿದೆ.

ಗುಂಪು ಘರ್ಷಣೆಯಲ್ಲಿ ಇಬ್ಬರು ಎಎಸ್ಐ ಹಾಗೂ ನಾಲ್ಕು ಮಂದಿ ಪೇದೆಗಳು ಗಾಯಗೊಂಡಿರುವ ಘಟನೆ ಬುಧವಾರ ರಾತ್ರಿ ಮೈಸೂರಿನ ಕ್ಯಾತಮಾರನಹಳ್ಳಿಯಲ್ಲಿ ನಡೆದಿದ್ದು, ಪರಿಸ್ಥಿತಿ ಉದ್ವಿಗ್ನಗೊಂಡಿರುವುದರಿಂದ ಘಟನಾ ಸ್ಥಳದಲ್ಲಿ ನಿಷೇಧಾಜ್ಞೆಯನ್ನು ಜಾರಿಗೊಳಿಸಲಾಗಿದ್ದು, ತೀವ್ರ ಕಟ್ಟೆಚ್ಚರ ವಹಿಸಲಾಗಿದೆ.

ಘಟನೆಯಲ್ಲಿ ನಾಲ್ಕು ದೇವಾಲಯಗಳ ಮೇಲೆ ದಾಳಿ ನಡೆಸಿರುವ ದುಷ್ಕರ್ಮಿಗಳು ಮಾಜಿ ಮೇಯರ್ ಎಚ್ ಎನ್ ಶ್ರೀಕಂಠಯ್ಯ ಅವರ ಮನೆಗೆ ನುಗ್ಗಿ ಪೀಠೋಪಕರಣಗಳನ್ನು ಪುಡಿಗಟ್ಟಿಸಿದ್ದಾರೆ. ಅನೇಕ ವಾಹನಗಳು ಮತ್ತು ಮನೆಗಳು ಮೇಲೂ ದಾಳಿ ನಡೆಸಲಾಗಿದೆ. ಗುರುವಾರ ಬೆಳಿಗ್ಗೆಯೂ ಹಿಂಸಾಚಾರ ಮುಂದುವರಿದಿದ್ದು, ಎರಡು ಆಟೋ, ಎತ್ತಿನಗಾಡಿಗೆ ಬೆಂಕಿ ಹಚ್ಚಲಾಗಿದೆ ಎಂದು ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ. ಘಟನೆಗೆ ಸಂಬಂಧಿಸಿದಂತೆ 16ಮಂದಿಯನ್ನು ವಶಕ್ಕೆ ತೆಗೆದುಕೊಳ್ಳಲಾಗಿದೆ.

15ಸಿಆರ್ ಪಿಎಫ್ ತುಕಡಿಗಳನ್ನು ಭದ್ರತೆಗೆ ನಿಯೋಜಿಸಲಾಗಿದ್ದು. ಯಾವುದೇ ಅಹಿತಕರ ಘಟನೆ ಜರುಗದಂತೆ ನಿಗಾ ಇರಿಸಲಾಗಿದೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ. ಪ್ರಕರಣವನ್ನು ದಾಖಲಿಸಿಕೊಳ್ಳಲಾಗಿದ್ದು, ತನಿಖೆ ಆರಂಭಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಕರಂದ್ಲಾಜೆ ಭೇಟಿ: ಗಲಭೆ ನಡೆದಿರುವ ಪ್ರದೇಶಕ್ಕೆ ಮೈಸೂರು ಉಸ್ತುವಾರಿ ಸಚಿವರಾಗಿರುವ ಶೋಭಾ ಕರಂದ್ಲಾಜೆ ಗುರುವಾರ ಭೇಟಿ ನೀಡಿ ಪರಿಶೀಲನೆ ನಡೆಸಿದರು. ಚುನಾವಣೆ ನಡೆದ ಬಳಿಕ ಘಟನೆ ಕುರಿತು ನ್ಯಾಯಾಂಗ ತನಿಖೆ ನಡೆಸಲು ಆದೇಶ ನೀಡಲಾಗುವುದು ಎಂದು ಭರವಸೆ ನೀಡಿದರು. ಅಲ್ಲದೇ ತಪ್ಪಿತಸ್ಥರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಾಗುವುದು ಎಂದು ಹೇಳಿದರು. ಸರ್ಕಾರಕ್ಕೆ ಮಸಿ ಬಳಿಯುವ ನಿಟ್ಟಿನಲ್ಲಿ ಈ ದುಷ್ಕೃತ್ಯ ನಡೆಸಲಾಗಿದೆ ಎಂದು ಆರೋಪಿಸಿದರು.
ಸಂಬಂಧಿತ ಮಾಹಿತಿ ಹುಡುಕಿ
ಮತ್ತಷ್ಟು
ಡಿ.ಬಿ.ಚಂದ್ರೇಗೌಡ-ಶ್ರೀಕಂಠಯ್ಯ.ಶಿವರಾಮೇಗೌಡ ಬಿಜೆಪಿಗೆ
ಲೋಕಸಭಾ ಅಖಾಡದಲ್ಲಿ ಐವರು ಮಾಜಿ ಸಿಎಂಗಳು...
ಕಾಂಗ್ರೆಸ್ ಅಭ್ಯರ್ಥಿಗಳಿಲ್ಲದೆ ದಿವಾಳಿಯಾಗಿದೆ: ವೆಂಕಯ್ಯ ನಾಯ್ಡು
ರಶೀದ್‌‌ನನ್ನು ಬಿಡಿ, ಇಲ್ಲದಿದ್ರೆ ಸರಣಿ ಸ್ಫೋಟ: ಬೆದರಿಕೆ ಕರೆ
ವಿವಾದಿತ ಹೇಳಿಕೆ: ಅನಂತಕುಮಾರ್ ಹೆಗಡೆಗೆ ನೋಟಿಸ್ ಜಾರಿ
ಬಿ.ಎಸ್.ಯಡಿಯೂರಪ್ಪ ವಿರುದ್ಧ ದೂರು ದಾಖಲು