ಮುಖ್ಯ ಪುಟ > ಸುದ್ದಿ ಜಗತ್ತು > ಸುದ್ದಿಗಳು > ರಾಜ್ಯ ಸುದ್ದಿ > 'ಕೈ' ಕಡಿದ್ರೆ ಕಾಂಗ್ರೆಸ್ ಗೆಲ್ಲೋದು ಹೇಗೆ?: ನಾಯ್ಡು
ಸಲಹೆ/ಪ್ರತಿಕ್ರಿಯೆಮಿತ್ರನಿಗೆ ಕಳುಹಿಸಿಈ ಪುಟ ಮುದ್ರಿಸಿ
 
'ಕೈ' ಕಡಿದ್ರೆ ಕಾಂಗ್ರೆಸ್ ಗೆಲ್ಲೋದು ಹೇಗೆ?: ನಾಯ್ಡು
PTI
'ಕೈ' ಕಾಂಗ್ರೆಸ್ ಪಕ್ಷದ ಚಿಹ್ನೆ, ಕೈಯನ್ನೇ ಕಡಿದರೆ ಮತ ಹಾಕೋದು ಹೇಗೆ?ನಿಮ್ಮ ಪಕ್ಷ ಗೆಲ್ಲುವುದು ಹೇಗೆ?ಎಂದು ಬಿಜೆಪಿ ಮುಖಂಡ ವೆಂಕಯ್ಯ ನಾಯ್ಡು ಅವರು ಕಾಗೋಡು ತಿಮ್ಮಪ್ಪ ಹೇಳಿಕೆಗೆ ತೀಕ್ಷ್ಣವಾಗಿ ಪ್ರತಿಕ್ರಿಯಿಸಿದ ಪರಿ ಇದು.

ನಗರದಲ್ಲಿ ಪಕ್ಷದ ಚುನಾವಣಾ ಕಚೇರಿಯಲ್ಲಿ ವಿವಿಧ ಪಕ್ಷದ ನಾಯಕರನ್ನು ಬಿಜೆಪಿಗೆ ಬರಮಾಡಿಕೊಂಡ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಹಿಂದುತ್ವ ಎನ್ನುವವರ ಕೈ ಕತ್ತರಿಸಬೇಕೆಂದು ಹೇಳಿಕೆ ನೀಡಿದ್ದ ಕಾಂಗ್ರೆಸ್ ಮುಖಂಡ ಕಾಗೋಡು ತಿಮ್ಮಪ್ಪ ಅವರ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದರು.

ಕೈ ಇಲ್ಲದಿದ್ದರೆ ಕಾಂಗ್ರೆಸ್ ಗೆಲ್ಲುವುದಾದರು ಹೇಗೆ?ಎಂದು ಪ್ರಶ್ನಿಸಿದ ಅವರು, ದೇಶದಲ್ಲಿ ಶೇ.84ರಷ್ಟು ಹಿಂದೂಗಳಿದ್ದಾರೆ, ಅಷ್ಟೂ ಜನರ ಮತ ಬೇಡ ಎಂದರೆ ಹೇಗೆ?ನೀವು ಗೆಲ್ಲೋಕೆ ಸಾಧ್ಯವಾಗುತ್ತಾ ಎಂದು ತಿರುಗೇಟು ನೀಡಿದರು. ವರುಣ್ ಗಾಂಧಿ ಹೇಳಿಕೆ ನೀಡಿದಾಗ ರಾಷ್ಟ್ರೀಯ ಭದ್ರತಾ ಕಾಯ್ದೆಯಡಿ ಮೊಕದ್ದಮೆ ದಾಖಲಿಸಿ ಜೈಲಿಗೆ ಕಳುಹಿಸುತ್ತಾರೆ. ಆದರೆ ಕಾಗೋಡು ಅಂತಹವರಿಗೆ ಮಾತ್ರ ಏನು ಆಗುವುದಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಸಂಬಂಧಿತ ಮಾಹಿತಿ ಹುಡುಕಿ
ಮತ್ತಷ್ಟು
ಕಾಗೋಡು ಹೇಳಿಕೆ ಅಕ್ಷಮ್ಯ ಅಪರಾಧ: ಯಡಿಯೂರಪ್ಪ
ಗಲಭೆ: ಕ್ಯಾತಮಾರನಹಳ್ಳಿಯಲ್ಲಿ ನಿಷೇಧಾಜ್ಞೆ ಜಾರಿ
ಡಿ.ಬಿ.ಚಂದ್ರೇಗೌಡ-ಶ್ರೀಕಂಠಯ್ಯ.ಶಿವರಾಮೇಗೌಡ ಬಿಜೆಪಿಗೆ
ಲೋಕಸಭಾ ಅಖಾಡದಲ್ಲಿ ಐವರು ಮಾಜಿ ಸಿಎಂಗಳು...
ಕಾಂಗ್ರೆಸ್ ಅಭ್ಯರ್ಥಿಗಳಿಲ್ಲದೆ ದಿವಾಳಿಯಾಗಿದೆ: ವೆಂಕಯ್ಯ ನಾಯ್ಡು
ರಶೀದ್‌‌ನನ್ನು ಬಿಡಿ, ಇಲ್ಲದಿದ್ರೆ ಸರಣಿ ಸ್ಫೋಟ: ಬೆದರಿಕೆ ಕರೆ