ರಾಷ್ಟ್ರಪ್ರಶಸ್ತಿ ವಿಜೇತೆ ನಟಿ ತಾರಾ ಯಾವುದೇ ಷರತ್ತಿಲ್ಲದೆ ಭಾರತೀಯ ಜನತಾ ಪಕ್ಷಕ್ಕೆ ಸೇರ್ಪಡೆಗೊಂಡಿದ್ದು, ಸೂಕ್ತ ಸ್ಥಾನಮಾನ ನೀಡುವುದು ಪಕ್ಷಕ್ಕೆ ಬಿಟ್ಟ ವಿಚಾರ ಎಂದು ತಿಳಿಸಿದ್ದಾರೆ.ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಪಕ್ಷದಿಂದ ನನ್ನ ನಿರೀಕ್ಷೆಯೇನೂ ಇಲ್ಲ. ಆದರೆ ಸ್ಥಾನಮಾನ ನೀಡಿದರೆ ಸಂತೋಷ ಎಂದರು. ಚಿಕ್ಕಬಳ್ಳಾಪುರ ಲೋಕಸಭಾ ಕ್ಷೇತ್ರದಿಂದ ಸ್ಪರ್ಧಿಸುವಂತೆ ಪಕ್ಷದಿಂದ ನನ್ನನ್ನು ಕೇಳಲಾಗಿತ್ತು. ಆದರೆ ನಾನು ಬೇಡ ಎಂದೆ. ಹಾಗಾಂತ ಪಕ್ಷದಿಂದ ನಾನು ದೂರ ಉಳಿಯುತ್ತೇನೆ ಎಂದರ್ಥವಲ್ಲ. ಪಕ್ಷ ಸ್ಥಾನಮಾನ ನೀಡಿದರೆ ಸಂತೋಷದಿಂದಲೇ ಒಪ್ಪಿಕೊಳ್ಳುತ್ತೇನೆ ಎಂದರು.ಬಿಜೆಪಿ ಪರವಾಗಿ ನಾನು ಈ ಹಿಂದೆಯೂ ಪ್ರಚಾರ ಮಾಡಿದ್ದೇನೆ. ಮುಂದೆ ಕೂಡಾ ಮಾಡುತ್ತೇನೆ. ಈಗಾಗಲೇ ಮಂಗಳೂರು ಸೇರಿದಂತೆ ರಾಜ್ಯದ ವಿವಿಧ ಕಡೆಗಳಲ್ಲಿ ಪ್ರಚಾರ ಕಾರ್ಯದಲ್ಲಿ ಭಾಗವಹಿಸಿದ್ದೇನೆ. ನನಗೆ ಅಭ್ಯರ್ಥಿಯ ಗೆಲುವು ಮುಖ್ಯ ಎಂದರು.ಕಳೆದ ವಿಧಾನಸಭಾ ಉಪಚುನಾವಣೆಯಲ್ಲಿ ಮತ್ತೊಬ್ಬ ನಟಿ ಶ್ರುತಿ ಕೂಡಾ ಬಿಜೆಪಿ ಪರ ಭರ್ಜರಿ ಪ್ರಚಾರ ಮಾಡಿದ್ದರು. ಇನ್ನು ಅನೇಕ ತಾರೆಯರನ್ನು ಬಿಜೆಪಿ ಪ್ರಚಾರಕ್ಕೆ ಸೆಳೆಯುತ್ತಿದೆ. |