ಪತ್ರಿಕೋದ್ಯಮದ ಪ್ರತಿಷ್ಠಿತ ಪ್ರಶಸ್ತಿಯಾಗಿರುವ ರಾಮನಾಥ್ ಗೋಯಂಕಾ ಪ್ರಶಸ್ತಿಯನ್ನು ಟಿವಿ 9 ಕನ್ನಡ ವಾರ್ತಾವಾಹಿನಿಗೆ ಲಭಿಸಿದೆ. ಪತ್ರಕರ್ತ ಎಂ.ಎಸ್.ರಾಘವೇಂದ್ರ ನೇತೃತ್ವದ 'ವಾರೆಂಟ್'ವಿಭಾಗದ ತನಿಖಾ ವರದಿಗೆ ಈ ಪ್ರಶಸ್ತಿ ದೊರೆತಿದೆ.
ಹುಬ್ಬಳ್ಳಿಯಲ್ಲಿ ಅವ್ಯಾಹತವಾಗಿ ನಡೆಯುತ್ತಿದ್ದ ಮಹಿಳೆಯರ ಮಾರಾಟ ಜಾಲದ ಬಗ್ಗೆ ಟಿವಿ 9 ತನಿಖಾ ವರದಿಯನ್ನು ಬಿತ್ತರಿಸಿತ್ತು. ಈ ವರದಿಗಾಗಿ ಅತ್ಯತ್ತಮ ಪ್ರಾದೇಶಿಕ ವಾಹಿನಿ ಎಂಬ ಪ್ರಶಸ್ತಿಯನ್ನು ಟಿವಿ 9 ತನ್ನ ಮಡಿಲಿಗೆ ಹಾಕಿಕೊಂಡಿದೆ. ಜೊತೆಗೆ ತೆಲುಗು ಟಿವಿ 9 ವಾರ್ತಾವಾಹಿನಿಯ 'ನವೀನ' ಎಂಬ ಮಹಿಳಾ ಕಾರ್ಯಕ್ರಮಕ್ಕೂ ಗೋಯಂಕಾ ಪ್ರಶಸ್ತಿ ಸಿಕ್ಕಿದೆ.
ದೃಶ್ಯ ಮತ್ತು ಮಾಧ್ಯಮ ಕ್ಷೇತ್ರದ ರಾಜಕೀಯ, ತನಿಖಾ ವರದಿ ಸೇರಿದಂತೆ ಹಲವಾರು ವಿಭಾಗಗಳಿಗೆ ಪ್ರತಿವರ್ಷ ರಾಮನಾಥ್ ಗೋಯಂಕಾ ಪ್ರಶಸ್ತಿ ನೀಡಲಾಗುತ್ತಿದ್ದು, ಪ್ರಸಕ್ತ ಸಾಲಿನಲ್ಲಿ ಟಿವಿ9 ಕನ್ನಡ ವಾರ್ತಾ ವಾಹಿನಿ ತನಿಖಾ ವರದಿಗಾಗಿ ಗೋಯಂಕಾ ಪ್ರಶಸ್ತಿಯನ್ನು ತನ್ನ ಮುಡಿಗೇರಿಸಿಕೊಂಡಿದೆ. |