ಲೋಕಸಭಾ ಚುನಾವಣೆಯ ಅಖಾಡ ಗರಿಗೆದರಿದ್ದು, ಇದೀಗ ಎಲ್ಲರ ಚಿತ್ತ ಬೆಂಗಳೂರು ದಕ್ಷಿಣದತ್ತ ಹೊರಳಿದೆ. ಪ್ರಮುಖ ರಾಜಕೀಯ ಪಕ್ಷಗಳಲ್ಲದೇ ಹಲವು ಕುತೂಹಲಕಾರಿ ವ್ಯಕ್ತಿತ್ವದ ಸ್ಪರ್ಧಿಗಳ ಅಖಾಡವಾಗಿ ಪರಿಣಮಿಸಿದೆ. ಅಷ್ಟೇ ಅಲ್ಲ ಉತ್ತರದಲ್ಲಿರುವ ತೃತೀಯ ಪಕ್ಷಗಳ ಧ್ಯಾನವೂ ಈ ಕ್ಷೇತ್ರದತ್ತ ಹೊರಳಿದೆ.
ಭಾಷಾ ತಜ್ಞರು. ಶಿಕ್ಷಣ ತಜ್ಞರು, ವಿಮಾನೋದ್ಯಮಿಗಳು ಎಲ್ಲರೂ ಈ ಕ್ಷೇತ್ರದಲ್ಲಿ ಹುರಿಯಾಳುಗಳಾಗಿದ್ದಾರೆ. ಸತತ ನಾಲ್ಕು ಬಾರಿ ಗೆದ್ದ ಬಿಜೆಪಿ ಅಭ್ಯರ್ಥಿ ಅನಂತ್ ಕುಮಾರ್, ಕನ್ನಡ ಚಳವಳಿ ವಾಟಾಳ್ ನಾಗರಾಜ್, ಧ್ಯಾನ ಪ್ರಚುರಪಡಿಸುವ ಪಕ್ಷ ಪಿರಮಿಡ್ ಪಾರ್ಟಿ ಆಫ್ ಇಂಡಿಯಾದಿಂದ ಶಿವರಾಮಪ್ಪ, ಕಾಂಗ್ರೆಸ್‌ನಿಂದ ಮೊದಲ ಬಾರಿಗೆ ಲೋಕಸಭೆಗೆ ಸ್ಪರ್ಧಿಸುತ್ತಿರುವ ಶಾಸಕ ಕೃಷ್ಣಬೈರೇಗೌಡ, ಜೆಡಿಎಸ್‌ನಿಂದ ಪ್ರೊ.ಕೆ.ಇ.ರಾಧಾಕೃಷ್ಣ, ಪಕ್ಷೇತರರಾಗಿ ಏರ್ ಡೆಕ್ಕನ್ ಸ್ಥಾಪಕ ಕ್ಯಾಪ್ಟನ್ ಜಿ.ಆರ್.ಗೋಪಿನಾಥ್ ಈ ಕ್ಷೇತ್ರದ ಮೇಲೆ ಕಣ್ಣಿಟ್ಟಿದ್ದಾರೆ. ಇವರೆಲ್ಲರೂ ಸುಶಿಕ್ಷಿತರ ಮತಗಳ ಮೇಲೆಯೇ ಗಮನ ಇಟ್ಟಿದ್ದಾರೆ.
ಪಕ್ಷೇತರರಾಗಿ ಸ್ಪರ್ಧಿಸುತ್ತಿರುವ ಗೋಪಿನಾಥ್ ಅವರನ್ನು ಸಂಪರ್ಕಿಸಿ ಮೂರು ಪಕ್ಷಗಳ ಕೂಟದ ಶರದ್ ಯಾದವ್ ಅವರ ಜೆಡಿಯು ಹಾಗೂ ಮುಲಾಯಂ ಸಿಂಗ್ ಅವರ ಸಮಾಜವಾದಿ ಪಕ್ಷ ಬೆಂಬಲ ಸೂಚಿಸಿದೆ.ಕೆಲವು ಪಕ್ಷಗಳು ತಮ್ಮ ಚಿಹ್ನೆಯಿಂದಲೇ ಸ್ಪರ್ಧಿಸುವಂತೆ ಹೇಳಿವೆ.
ತಾವು ಚುನಾಯಿತರಾದ ನಂತರ ದೇಶವನ್ನು ಒಡೆಯುವ ಯಾವುದೇ ಸಿದ್ದಾಂತಗಳನ್ನು ಬೆಂಬಲಿಸುವ ಪಕ್ಷಗಳಿಗೆ ತಮ್ಮ ಬೆಂಬಲವಿಲ್ಲ. ವಿಷಯಾಧಾರಿತವಾಗಿ ಮಾತ್ರ ಬೆಂಬಲ ಸೂಚಿಸುವುದಾಗಿ ಗೋಪಿನಾಥ್ ಹೇಳೀದ್ದಾರೆ. ಆದರೆ ಈ ಜಿದ್ದಾಜಿದ್ದಿಯಲ್ಲಿ ಯಾರೂ ಗೆಲ್ಲುತ್ತಾರೋ ಕಾದು ನೋಡಬೇಕು.
|