ಸಂಸದರನ್ನು ಆಯ್ಕೆ ಮಾಡಿ ಕಳುಹಿಸುವುದು ಅವರು ಸಂಸತ್ ಕಲಾಪಗಳಲ್ಲಿ ಭಾಗವಹಿಸಿ ಚರ್ಚೆಯಲ್ಲಿ ಪಾಲ್ಗೊಂಡು ನೂತನ ಯೋಜನೆಗಳನ್ನು ಅವರ ಕ್ಷೇತ್ರಕ್ಕೆ ವಿನಿಯೋಗಿಸಲಿ ಎಂಬ ಕಾರಣಕ್ಕಾಗಿ. ಆದರೆ ಸಂಸತ್‌ಗೆ ಹೋಗದಿದ್ದ ಮೇಲೆ ಅವರು ನಮಗೆ ಯಾಕೆ ಬೇಕು ಎಂದು ಅಂಬರೀಷ್ ವಿರುದ್ಧ ಚಿತ್ರ ನಿರ್ದೇಶಕ ನಾಗತಿಹಳ್ಳಿ ಪರೋಕ್ಷವಾಗಿ ಟೀಕಿಸಿದ್ದಾರೆ.ಯಾವುದೇ ವ್ಯಕ್ತಿಯಾಗಲಿ ಒಂದು ಜವಾಬ್ದಾರಿಯನ್ನು ಹೊತ್ತ ಮೇಲೆ ಅದನ್ನು ಅಚ್ಚುಕಟ್ಟಾಗಿ ನಿಭಾಯಿಸಬೇಕು. ಅದು ಆಗದಿದ್ದ ಮೇಲೆ ಅಂತಹ ಕ್ಷೇತ್ರಕ್ಕೆ ಯಾಕೆ ಇಳಿಯಬೇಕು ಎಂದು ಅಂಬರೀಷ್ ವಿರುದ್ಧ ಕಿಡಿಕಾರಿದರು.ಪ್ರಜಾಪ್ರಭುತ್ವ ದೇಶವಾಗಿರುವ ಭಾರತದಲ್ಲಿ ಯೋಗ್ಯ ಅಭ್ಯರ್ಥಿಗಳನ್ನು ಚುನಾಯಿಸದಿರುವುದು ಪ್ರಜಾಪ್ರಭುತ್ವದ ಅಣಕವಾಗಿದೆ. ರಾಷ್ಟ್ರೀಯ ಪಕ್ಷ ಎಂದು ಹೇಳುತ್ತಿರುವ ಕೆಲವು ಪಕ್ಷಗಳು ಸರಿಯಾಗಿ ಕಾರ್ಯನಿರ್ವಹಿಸುತ್ತಿಲ್ಲ ಎಂದರು.ಇಂದು ನಮ್ಮಲ್ಲಿ ಶ್ರಮ ಸಂಸ್ಕೃತಿ ಮಾಯವಾಗುತ್ತಿದೆ. ದುಡಿಯುವ ಬದಲು ಮೋಸದಿಂದ ಹಣ ಮಾಡಲು ಪ್ರಯತ್ನಿಸುತ್ತಾರೆ. ಭ್ರಷ್ಟಾಚಾರ ನಿರ್ಮೂಲನೆಗೆ ಯುವಕರು ಶ್ರಮಿಸಬೇಕು ಎಂದು ಅವರು ಸಲಹೆ ನೀಡಿದರು. |