ಹಿರಿಯ ಸ್ವಾತಂತ್ರ್ಯ ಹೋರಾಟಗಾರ, ಮಾಜಿ ಸಚಿವ ಹಾರ್ನಳ್ಳಿ ರಾಮಸ್ವಾಮಿ (87ವ.) ಶನಿವಾರ ಬೆಳಿಗ್ಗೆ ಹೃದಯಾಘಾತದಿಂದ ಇಲ್ಲಿನ ಖಾಸಗಿ ಆಸ್ಪತ್ರೆಯಲ್ಲಿ ನಿಧನ ಹೊಂದಿದರು.
ಲೋಕಶಿಕ್ಷಣ ಟ್ರಸ್ಟ್ ಅಧ್ಯಕ್ಷರೂ, ಕಾಂಗ್ರೆಸ್‌ನ ಹಿರಿಯ ಮುಖಂಡರೂ ಆಗಿದ್ದ ಹಾರ್ನಳ್ಳಿ ಕೆಲವು ದಿನಗಳಿಂದ ಅಸ್ವಸ್ಥರಾಗಿದ್ದರು. ಇಂದು ಬೆಳಿಗ್ಗೆ ಶೇಷಾದ್ರಿಪುರಂನ ಮಲ್ಲಿಗೆ ಆಸ್ಪತ್ರೆಯಲ್ಲಿ ಹೃದಯಾಘಾತದಿಂದ ನಿಧನರಾಗಿರುವುದಾಗಿ ಕುಟುಂಬದ ಮೂಲಗಳು ತಿಳಿಸಿವೆ.
ಯಡಿಯೂರಪ್ಪ ಸಂತಾಪ: ನೇರ,ನಡೆ ನುಡಿಗಳಿಂದ ಎಲ್ಲರಿಗೂ ಆಪ್ತರಾಗಿದ್ದ ಹಾರ್ನಳ್ಳಿ ರಾಮಸ್ವಾಮಿಯವರ ನಿಧನ ದೇಶಕ್ಕೆ ನಷ್ಟ ಎಂದು ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ತಿಳಿಸಿದ್ದು, ಸಂತಾಪ ವ್ಯಕ್ತಪಡಿಸಿದ್ದಾರೆ. ರಾಮಸ್ವಾಮಿ ಅವರು ಧೀಮಂತ ನಾಯಕರಾಗಿದ್ದವರು ಎಂದು ಹೇಳಿದರು. |