ನಾನು ನೀತಿ ಸಂಹಿತೆಯನ್ನು ಉಲ್ಲಂಘಿಸುವ ಯಾವುದೇ ಮಾತನಾಡಿಲ್ಲ ಎಂದು ಕಾರವಾರ ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಅನಂತಕುಮಾರ್ ಹೆಗಡೆ ಚುನಾವಣಾ ಆಯೋಗದ ಪ್ರಿನ್ಸಿಪಲ್ ಸೆಕ್ರೆಟರಿ ತಪಸ್ ಕುಮಾರ್ ಅವರಿಗೆ ಉತ್ತರ ನೀಡಿದ್ದಾರೆ.
ಮಾರ್ಚ್ 21ರಂದು ಮುಂಡಗೋಡಿನಲ್ಲಿ ನಡೆದ ಸಭೆಯಲ್ಲಿ 'ಮುಸ್ಲಿಮರು ಪುಂಡಾಟಿಕೆ ನಿಲ್ಲಿಸದಿದ್ದರೆ ಈದ್ ಮಿಲಾದ್ ಆಚರಿಸಲು ಅವಕಾಶ ನೀಡುವುದಿಲ್ಲ' ಎಂಬ ಅನಂತಕುಮಾರ್ ಹೆಗಡೆ ಅವರ ಪ್ರಚೋದನಾಕಾರಿ ಹೇಳಿಕೆಗೆ ಸಂಬಂಧಿಸಿದಂತೆ ಚುನಾವಣಾ ಆಯೋಗ ಏಪ್ರಿಲ್ 1ರಂದು ವಿವರಣೆ ಕೇಳಿ ನೋಟಿಸ್ ನೀಡಿತ್ತು.
ಈ ನೋಟಿಸ್‌ಗೆ ಉತ್ತರ ನೀಡಿದ ಹೆಗಡೆ, ತಾನು ಮಾರ್ಚ್ 21ರಂದು ಮುಂಡಗೋಡಿನಲ್ಲಿ ಇರಲಿಲ್ಲ, ಅಲ್ಲದೇ ಮುಸ್ಲಿಮರ ವಿರುದ್ಧ ಯಾವುದೇ ಹೇಳಿಕೆ ನೀಡಿಲ್ಲ. ಮಾ.19ರಂದು ಬೆಂಗಳೂರಿಗೆ ತೆರಳಿ 22ಕ್ಕೆ ವಾಪಸಾಗಿದ್ದೇನೆ. ಈ ವಿಷಯಕ್ಕೆ ಸಂಬಂಧಿಸಿದಂತೆ ದಾಖಲೆಗಳನ್ನು ಬೇಕಾದರೂ ಹಾಜರುಪಡಿಸುತ್ತೇನೆ ಎಂದು ತಿಳಿಸಿದ್ದಾರೆ. |