ಜೆಡಿಎಸ್‌ನಲ್ಲಿ 26 ವರ್ಷ ಸುದೀರ್ಘ ಸೇವೆ ಸಲ್ಲಿಸಿದ್ದರೂ ತಮ್ಮನ್ನು ಕಡೆಗಣಿಸಲಾಗಿದೆ ಎಂದು ನೊಂದುಕೊಂಡಿರುವ ಮುಂಗಾರು ಮಳೆ ಚಲನಚಿತ್ರದ ನಿರ್ಮಾಪಕ ಇ.ಕೃಷ್ಣಪ್ಪ ಜೆಡಿಎಸ್ ಬಂಡಾಯ ಅಭ್ಯರ್ಥಿಯಾಗಿ ಚಿಕ್ಕಬಳ್ಳಾಪುರ ಲೋಕಸಭೆ ಕ್ಷೇತ್ರದಿಂದ ನಾಮಪತ್ರ ಸಲ್ಲಿಸಿದ್ದಾರೆ.
ಪಕ್ಷದ ನಾಯಕರು ನನಗೆ ಮೋಸ ಮಾಡಿದ್ದಾರೆ. ಕಳೆದ 15 ದಿನಗಳಿಂದ ನನಗೆ ಬಿ ಫಾರಂ ನೀಡುವುದಾಗಿ ಭರವಸೆ ನೀಡುತ್ತಿದ್ದ ನಾಯಕರು ಕಡೆಯ ಗಳಿಗೆಯಲ್ಲಿ ಸಿ.ಆರ್.ಮನೋಹರ್‌ಗೆ ನೀಡಿದ್ದಾರೆ. ನನ್ನ ಈ ನಡೆಗೆ ಪಕ್ಷ ಯಾವುದೇ ಕ್ರಮ ಜರುಗಿಸಲಿ. ಇಷ್ಟು ವರ್ಷ ಅಲ್ಲಿ ದುಡಿದಿದ್ದೇನೆ. ಆದರೆ ಯಾವುದೇ ಪ್ರತಿಫಲ ದೊರಕಿಲ್ಲ ಎಂದು ದೂರಿದರು.
2008ರ ಮೇ ತಿಂಗಳಲ್ಲಿ ನಡೆದ ವಿಧಾನಸಭೆ ಚುನಾವಣೆಯಲ್ಲಿ ಯಲಹಂಕಾ ಕ್ಷೇತ್ರದಿಂದ ಸ್ಪರ್ಧಿಸಿದ್ದ ಕೃಷ್ಣಪ್ಪ ಸೋಲುಂಡಿದ್ದರು. ಬಳ್ಳಾರಿ ಹಾಗೂ ಶಿವಮೊಗ್ಗೆಯಲ್ಲಿ ಕಾಂಗ್ರೆಸ್ ಜೊತೆ ಕೈ ಜೋಡಿಸಿರುವ ಜೆಡಿಎಸ್, ಇಲ್ಲೂ ಕೂಡಾ ವೀರಪ್ಪ ಮೊಯಿಲಿಯವರನ್ನು ಬೆಂಬಲಿಸಲು ಈ ನಿರ್ಧಾರಕ್ಕೆ ಬಂದಿದೆ ಎಂದು ಕೃಷ್ಣಪ್ಪ ತಿಳಿಸಿದರು.
|