ಮುಖ್ಯ ಪುಟ > ಸುದ್ದಿ ಜಗತ್ತು > ಸುದ್ದಿಗಳು > ರಾಜ್ಯ ಸುದ್ದಿ > ಕೋಮುಭಾವನೆ ಕೆರಳಿಸುವ ಬಿಜೆಪಿಗೆ ಪಾಠ ಕಲಿಸಿ: ಗೌಡ
ಸಲಹೆ/ಪ್ರತಿಕ್ರಿಯೆಮಿತ್ರನಿಗೆ ಕಳುಹಿಸಿಈ ಪುಟ ಮುದ್ರಿಸಿ
 
ಕೋಮುಭಾವನೆ ಕೆರಳಿಸುವ ಬಿಜೆಪಿಗೆ ಪಾಠ ಕಲಿಸಿ: ಗೌಡ
ಹಣಬಲದಿಂದ ಬೇರೆ ಪಕ್ಷದವರನ್ನು ಖರೀದಿಸಿ ಅಧಿಕಾರವನ್ನು ದುರುಪಯೋಗಪಡಿಸಿಕೊಂಡು ಜನರಲ್ಲಿ ಕೋಮುಭಾವನೆ ಬಿತ್ತುತ್ತಿರುವ ಬಿಜೆಪಿಗೆ ತಕ್ಕ ಪಾಠ ಕಲಿಸಲು ಕಾರ್ಯಕರ್ತರು ಪಣತೊಡಬೇಕು ಎಂದು ರಾಜ್ಯ ಯುವ ಕಾಂಗ್ರೆಸ್ ಅಧ್ಯಕ್ಷ, ಬೆಂಗಳೂರು ದಕ್ಷಿಣ ಲೋಕಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಕೃಷ್ಣಬೈರೇಗೌಡ ಕರೆ ನೀಡಿದರು.

ಹೆಬ್ಬಾಳ ವಿಧಾನಸಭಾ ಕ್ಷೇತ್ರದಲ್ಲಿ ಭಾನುವಾರ ಏರ್ಪಡಿಸಿದ್ದ ಯುವ ಕಾಂಗ್ರೆಸ್ ಕಾರ್ಯಕರ್ತರ ಸಮಾವೇಶದಲ್ಲಿ ಭಾಗವಹಿಸಿ ಮಾತನಾಡಿದ ಅವರು, ಬಿಜೆಪಿಯ ದುರಾಡಳಿತಕ್ಕೆ ಇತಿಶ್ರೀ ಹಾಡಲು ಇದು ಸಕಾಲ. ಕಾರ್ಯಕರ್ತರು ಪಕ್ಷದ ಪರವಾಗಿ ಪ್ರಚಾರ ಮಾಡುವ ಮೂಲಕ ಕಾಂಗ್ರೆಸ್ ಅಭ್ಯರ್ಥಿಗಳ ಗೆಲುವಿಗೆ ಸಹಕಾರಿಯಾಗಬೇಕು. ಈ ಬಾರಿ ಯುವ ಕಾಂಗ್ರೆಸ್‌ನ ಇಬ್ಬರಿಗೆ ಟಿಕೆಟ್ ದೊರೆತಿದೆ. ಮುಂದೆಯೂ ಹೆಚ್ಚಿನ ಅವಕಾಶಗಳು ಯುವ ಕಾಂಗ್ರೆಸ್ ಕಾರ್ಯಕರ್ತರಿಗೆ ಸಿಗಲಿವೆ ಎಂಬ ವಿಶ್ವಾಸ ವ್ಯಕ್ತಪಡಿಸಿದರು.

ಡಿಕೆಶಿ ಟೀಕೆ: ಕಾಂಗ್ರೆಸ್ ಮುಖಂಡರನ್ನು ಗುಜರಿ ಸಾಮಾನುಗಳಿಗೆ ಹೋಲಿಸುತ್ತಿದ್ದ ಬಿಜೆಪಿ, ಈಗ ಪಕ್ಷಾಂತರ ಮಾಡಿ ಆ ಪಕ್ಷ ಸೇರಿರುವ ಹಿಂದಿನ ಕಾಂಗ್ರೆಸ್ ನಾಯಕರಿಗೆ ಟಿಕೆಟ್ ನೀಡುತ್ತಿದೆ ಎಂದು ಕೆಪಿಸಿಸಿ ಕಾರ್ಯಾಧ್ಯಕ್ಷ ಡಿ.ಕೆ.ಶಿವಕುಮಾರ್ ಲೇವಡಿ ಮಾಡಿದರು. ಕಾಂಗ್ರೆಸ್‌ ಇದ್ದಾಗ ಗುಜರಿಯಾಗಿದ್ದವರು ಬಿಜೆಪಿ ಸೇರಿದ ನಂತರ ಯುವಕರಾಗಿದ್ದಾರೆಯೇ ಎಂದು ಪ್ರಶ್ನಿಸಿದ ಅವರು, ಆ ಪಕ್ಷಕ್ಕೆ ನಾಯಕರ ಕೊರತೆ ಇದೆ ಎಂಬುದಕ್ಕೆ ಇದು ಉದಾಹರಣೆಯಾಗಿದೆ ಎಂದರು.
 Play Free Online Games  Click Here
 Blogs, Videos and More  Click Here
 Send Musical and Animated Cards  Click Here
 Simple,Fast & Free Email Service  Click Here
ಸಂಬಂಧಿತ ಮಾಹಿತಿ ಹುಡುಕಿ
ಮತ್ತಷ್ಟು
ಹಿಂದುತ್ವದ ವಿರೋಧಿಗಳ ಕತ್ತು ಕತ್ತರಿಸಿ: ರೇಣುಕಾಚಾರ್ಯ
ಕಾಗೋಡು ವಿರುದ್ಧ ಎಫ್‌ಐಆರ್ ದಾಖಲಿಸಲು ಕೋರ್ಟ್ ಆದೇಶ
ಜೆಡಿಎಸ್ ವಿರುದ್ಧ ಮುಂಗಾರು ಮಳೆ ಕೃಷ್ಣಪ್ಪ ಬಂಡಾಯದ ಕಹಳೆ
ರಾಜ್ ಬಿಡುಗಡೆಗೆ ಹಣ ನೀಡಿದ್ದು ನಿಜ: ಶಿವರಾಜ್‌ಕುಮಾರ್
ತಾಕತ್ತಿದ್ದರೆ ನನ್ನ ಬಂಧಿಸಿ: ಕುಮಾರಸ್ವಾಮಿ
ಲೋಕಸಭೆ: ಕೃಷ್ಣಬೈರೇಗೌಡ, ವಾಟಾಳ್ ನಾಮಪತ್ರ