ಮುಖ್ಯ ಪುಟ > ಸುದ್ದಿ ಜಗತ್ತು > ಸುದ್ದಿಗಳು > ರಾಜ್ಯ ಸುದ್ದಿ > ಆಡ್ವಾಣಿ ಪ್ರಧಾನಿ ಕನಸು ನನಸಾಗದು: ಮೊಯ್ಲಿ
ಸಲಹೆ/ಪ್ರತಿಕ್ರಿಯೆಮಿತ್ರನಿಗೆ ಕಳುಹಿಸಿಈ ಪುಟ ಮುದ್ರಿಸಿ
 
ಆಡ್ವಾಣಿ ಪ್ರಧಾನಿ ಕನಸು ನನಸಾಗದು: ಮೊಯ್ಲಿ
ಲೋಕಸಭೆ ಚುನಾವಣೆ ನಂತರ ಭಾರತೀಯ ಜನತಾ ಪಕ್ಷ ತನ್ನ ಅಸ್ತಿತ್ವವನ್ನು ಕಳೆದುಕೊಂಡು ನೇಪಥ್ಯಕ್ಕೆ ಸರಿಯಲಿದೆ ಎಂದು ಮಾಜಿ ಮುಖ್ಯಮಂತ್ರಿ ಹಾಗೂ ಚಿಕ್ಕಬಳ್ಳಾಪುರ ಲೋಕಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಎಂ.ವೀರಪ್ಪ ಮೊಯ್ಲಿ ಭವಿಷ್ಯ ನುಡಿದಿದ್ದಾರೆ.

ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಆಡ್ವಾಣಿಯವರು ತಾವೇ ಭಾವಿ ಪ್ರಧಾನಮಂತ್ರಿ ಎಂದು ಸ್ವಯಂ ಘೋಷಿಸಿಕೊಳ್ಳುತ್ತಿದ್ದಾರೆ. ಆದರೆ ಅವರ ಕನಸು ಕನಸಾಗಿಯೇ ಉಳಿಯಲಿದೆ ಎಂದು ತಿಳಿಸಿದರು.

ಅಭಿವೃದ್ದಿ ಯೋಜನೆಗಳೀಗೆ ಹಣ ಬಿಡುಗಡೆ ಮಾಡುವಲ್ಲಿ ಮುಖ್ಯಮಂತ್ರಿ ಯಡಿಯೂರಪ್ಪನವರು ತಾರತಮ್ಯ ನೀತಿ ಅನುಸರಿಸುತ್ತಿದ್ದು, ಇದ್ದ ಹಣವನ್ನೆಲ್ಲಾ ಕೇವಲ ಶಿವಮೊಗ್ಗ ಜಿಲ್ಲೆಗೆ ಮಾತ್ರ ಸುರಿಯುತ್ತಿದ್ದಾರೆ. ತಮ್ಮ ಪುತ್ರನನ್ನು ಚುನಾವಣೆಯಲ್ಲಿ ಗೆಲ್ಲಿಸಬೇಕೆಂಬ ಉದ್ದೇಶದಿಂದ ತಾವು ಇಡೀ ರಾಜ್ಯಕ್ಕೆ ಮುಖ್ಯಮಂತ್ರಿ ಎಂಬುದನ್ನೇ ಮರೆತಿದ್ದಾರೆ ಎಂದು ಕಟುವಾಗಿ ಟೀಕಿಸಿದರು.

ಕೊನೆಗಾಲದಲ್ಲಿ ಏನಾದರೂ ಸಿಗಬಹುದೆಂಬ ಆಸೆಯಿಂದ ಕಾಂಗ್ರೆಸ್‌‌ ಹಿರಿಯ ನಾಯಕರು ಬಿಜೆಪಿಗೆ ಹೋಗಿದ್ದು, ಕಾಲವೇ ಅವರಿಗೆ ತಕ್ಕಪಾಠ ಕಲಿಸಲಿದೆ ಎಂದರು. ಈ ಬಾರಿ ಲೋಕಸಭಾ ಚುನಾವಣೆಯಲ್ಲಿ ಆಯ್ಕೆಯಾಗಿ ಬಂದರೆ ಈ ಪ್ರದೇಶದಲ್ಲಿ ಕೆಂಪೇಗೌಡರ ಹಾಗೂ ಟಿಪ್ಪು ಸುಲ್ತಾನ್ ರಾಷ್ಟ್ರೀಯ ಸ್ಮಾರಕ ನಿರ್ಮಿಸುವುದಾಗಿ ಭರವಸೆ ನೀಡಿದರು.
 Play Free Online Games  Click Here
 Blogs, Videos and More  Click Here
 Send Musical and Animated Cards  Click Here
 Simple,Fast & Free Email Service  Click Here
ಸಂಬಂಧಿತ ಮಾಹಿತಿ ಹುಡುಕಿ
ಮತ್ತಷ್ಟು
'ತಲೆ ಕತ್ತರಿಸಿ' ಹೇಳಿಕೆ: ರೇಣುಕಾಚಾರ್ಯ ವಿರುದ್ಧ ದೂರು
ಕೋಮುಭಾವನೆ ಕೆರಳಿಸುವ ಬಿಜೆಪಿಗೆ ಪಾಠ ಕಲಿಸಿ: ಗೌಡ
ಹಿಂದುತ್ವದ ವಿರೋಧಿಗಳ ಕತ್ತು ಕತ್ತರಿಸಿ: ರೇಣುಕಾಚಾರ್ಯ
ಕಾಗೋಡು ವಿರುದ್ಧ ಎಫ್‌ಐಆರ್ ದಾಖಲಿಸಲು ಕೋರ್ಟ್ ಆದೇಶ
ಜೆಡಿಎಸ್ ವಿರುದ್ಧ ಮುಂಗಾರು ಮಳೆ ಕೃಷ್ಣಪ್ಪ ಬಂಡಾಯದ ಕಹಳೆ
ರಾಜ್ ಬಿಡುಗಡೆಗೆ ಹಣ ನೀಡಿದ್ದು ನಿಜ: ಶಿವರಾಜ್‌ಕುಮಾರ್