ಮುಖ್ಯ ಪುಟ > ಸುದ್ದಿ ಜಗತ್ತು > ಸುದ್ದಿಗಳು > ರಾಜ್ಯ ಸುದ್ದಿ > ತಾಯಿಯ ವಿರೋಧದಿಂದ ಸ್ಪರ್ಧೆ ಕೈ ಬಿಟ್ಟೆ: ಖೇಣಿ
ಸಲಹೆ/ಪ್ರತಿಕ್ರಿಯೆಮಿತ್ರನಿಗೆ ಕಳುಹಿಸಿಈ ಪುಟ ಮುದ್ರಿಸಿ
 
ತಾಯಿಯ ವಿರೋಧದಿಂದ ಸ್ಪರ್ಧೆ ಕೈ ಬಿಟ್ಟೆ: ಖೇಣಿ
ತಾಯಿ ಮಾತಿಗೆ ಗೌರವ ಕೊಟ್ಟು ಮಾಜಿ ಪ್ರಧಾನಿ ದೇವೇಗೌಡರ ವಿರುದ್ಧದ ಚುನಾವಣಾ ಸ್ಪರ್ಧೆಯಿಂದ ಹಿಂದೆ ಸರಿದಿರುವುದಾಗಿ ನೈಸ್ ಸಂಸ್ಥೆಯ ಅಶೋಕ್ ಖೇಣಿ ಸ್ಪಷ್ಟನೆ ನೀಡಿದ್ದಾರೆ.

ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ದೇವೇಗೌಡರ ವಿರುದ್ಧ ಹಾಸನದಲ್ಲಿ ಸ್ಪರ್ಧೆ ನಡೆಸಲು ಈಗಲೂ ಸಿದ್ಧ. ಆದರೆ ನನ್ನ ತಾಯಿ ಅದಕ್ಕೆ ವಿರೋಧ ವ್ಯಕ್ತಪಡಿಸಿರುವುದಾಗಿ ಹೇಳಿದರು.

ಅಲ್ಲದೆ ತಾನು ಚುನಾವಣೆಯಲ್ಲಿ ಸ್ಪರ್ಧಿಸುವುದನ್ನು ವಿರೋಧಿಸಿ ಉಪವಾಸ ನಡೆಸುವ ಬೆದರಿಕೆ ಹಾಕಿದ್ದಾರೆ. ತಾಯಿಯ ಮೇಲಿನ ಗೌರವದಿಂದ ಚುನಾವಣೆಯಲ್ಲಿ ಸ್ಪರ್ಧಿಸದಿರಲು ನಿರ್ಧರಿಸಿರುವುದಾಗಿ ಹೇಳಿದರು.

ಈ ಚುನಾವಣೆಯಲ್ಲಿ ತಾವು ಯಾವುದೇ ಪಕ್ಷವನ್ನು ಬೆಂಬಲಿಸುವುದಿಲ್ಲ. ಜನತಾ ದಳವೂ ಸೇರಿದಂತೆ ಎಲ್ಲ ಪಕ್ಷಗಳಲ್ಲಿಯೂ ಒಳ್ಳೆಯವರಿದ್ದಾರೆ. ಒಳ್ಳೆಯ ಜನರಿಗೆ ಮತ ಚಲಾಯಿಸಿ ಯಾರೇ ಹಣ ಕೊಟ್ಟರೂ ತೆಗೆದುಕೊಳ್ಳಿ. ಆದರೆ ಹಣ ನೀಡದವರಿಗೆ ಮತಹಾಕಿ ಎಂದು ಹೇಳಿದರು.

ನೈಸ್ ರಸ್ತೆಯ ಕಾಮಗಾರಿಗೆ ರಾಜ್ಯದ ಸರ್ಕಾರ ಸಹಕಾರ ನೀಡಿದರೆ ಬೇಗ ಮುಗಿಸುತ್ತದೆ. ಮೈಸೂರಿನಲ್ಲಿಯೂ ಇನ್ನೂ ಜಾಗವನ್ನೇ ನೀಡಿಲ್ಲ. ತಕ್ಷಣವೇ ಜಾಗ ನೀಡಿದರೆ ಕೂಡಲೇ ಕಾಮಗಾರಿ ಆರಂಭಿಸಲಾಗುವುದು ಎಂದರು.
 Play Free Online Games  Click Here
 Blogs, Videos and More  Click Here
 Send Musical and Animated Cards  Click Here
 Simple,Fast & Free Email Service  Click Here
ಸಂಬಂಧಿತ ಮಾಹಿತಿ ಹುಡುಕಿ
ಮತ್ತಷ್ಟು
ಬಿಜೆಪಿ-ಕಾಂಗ್ರೆಸ್‌ನಿಂದ ರಾಜ್ಯದ ಹಿತ ಸಾಧ್ಯವಿಲ್ಲ: ಎಚ್‌ಡಿಕೆ
ಕಾಂಗ್ರೆಸ್ ಕೆಲವರ ಸ್ವತ್ತಾಗಿದೆ: ಡಿ.ಬಿ.ಚಂದ್ರೇಗೌಡ
ಕೊನೆಗೂ ಮಂಡ್ಯದ ಅಖಾಡಕ್ಕೆ ಧುಮುಕಿದ ಅಂಬರೀಶ್
ಸಾಂಗ್ಲಿಯಾನ ವಿರುದ್ಧ ಲಿಂಬಾವಳಿ ಆಕ್ರೋಶ
ಜೈಲಿಗೆ ಹೋಗಲು ತಯಾರು: ರೇಣುಕಾಚಾರ್ಯ
ಮತದಾರರು ಯಡಿಯೂರಪ್ಪ ಕಿಸೆಯಲ್ಲಿದ್ದಾರಾ?: ಬಂಗಾರಪ್ಪ