ಮುಖ್ಯ ಪುಟ > ಸುದ್ದಿ ಜಗತ್ತು > ಸುದ್ದಿಗಳು > ರಾಜ್ಯ ಸುದ್ದಿ > ಬೆಂಗಳೂರು: ಐವರು ದರೋಡೆಕೋರರ ಸೆರೆ
ಸಲಹೆ/ಪ್ರತಿಕ್ರಿಯೆಮಿತ್ರನಿಗೆ ಕಳುಹಿಸಿಈ ಪುಟ ಮುದ್ರಿಸಿ
 
ಬೆಂಗಳೂರು: ಐವರು ದರೋಡೆಕೋರರ ಸೆರೆ
ಐದು ಮಂದಿ ದರೋಡೆಕೋರರ ತಂಡವೊಂದನ್ನು ಬಂಧಿಸಿರುವ ಬಸವನಗುಡಿ ಠಾಣೆಯ ಪೊಲೀಸರು 30ಲಕ್ಷ ರೂ. ಬೆಲೆಯ ಕಾರು, ಚಿನ್ನಾಭರಣ, 12ಮೊಬೈಲ್‌ಗಳನ್ನು ವಶಪಡಿಸಿಕೊಂಡಿದ್ದಾರೆ.

ಬುಲ್ ಟೆಂಪಲ್ ರಸ್ತೆ ಬಿಎಂಎಸ್ ಕಾಲೇಜ್ ಟ್ರಸ್ಟ್ ಮುಂಭಾಗ ರಸ್ತೆಯಲ್ಲಿ ನಿಂತು ವಾಹನಗಳ ಚಾಲಕರನ್ನು ಅಡ್ಡಗಟ್ಟಿ ಹಲ್ಲೆ ಮಾಡಿ ಹಣ, ಆಭರಣ ದೋಚುತ್ತಿದ್ದ ಆರೋಪಿಗಳನ್ನು ಬಸವನಗುಡಿ ಠಾಣೆಯ ಪೊಲೀಸರು ಬಂಧಿಸಿದ್ದಾರೆ.

ಬಂಧಿತರನ್ನು ಗಿರಿನಗರದ ಬಿ.ಎಸ್.ಕೃಷ್ಣ ಆಲಿಯಾಸ್ ಭೀಮಯ್ಯ(39), ಕೆಂಪೇಗೌಡ ನಗರದ ಮಾದೇಶ (35), ಲೋಕೇಶ್(29), ಕೇರಳ ರಾಜ್ಯದ ಎಸ್.ಅನಿಲ್ ಕುಮಾರ್(30), ಸಿ.ಮನೋಜ್(30) ಎಂದು ಗುರುತಿಸಲಾಗಿದೆ.

ಆರೋಪಿ ಕೃಷ್ಣ ಮೂಲತಃ ಕೊಡಗಿನವನಾಗಿದ್ದು, ಬೆಂಗಳೂರಿಗೆ ಬಂದು ನಗರದ ಅನೇಕ ಹೆಸರಾಂತ ಟ್ರಾವೆಲ್ಸ್‌ಗಳಲ್ಲಿ ಕೆಲಸಮಾಡಿ ಐಷಾರಾಮಿ ಜೀವನ ನಡೆಸಲು ಕಳ್ಳತನ ಮಾಡುತ್ತಿದ್ದ. ಮಾದೇಶ ಮತ್ತು ಲೋಕೇಶ್ ಅಣ್ಣ-ತಮ್ಮ ಅವರುಗಳು ಈ ಮೊದಲಿನಿಂದಲೂ ಕಳ್ಳತನ ಮಾಡಿ ನಕಲಿ ಮದ್ಯ ಸರಬರಾಜು ಮಾಡುವಲ್ಲಿ ನಿಪುಣರಾಗಿದ್ದು, ಅಬಕಾರಿ ಇಲಾಖೆ ಅಧಿಕಾರಿಗಳ ಬಲೆಗೆ ಬಿದ್ದಿದ್ದರು. ಅನಿಲ್ ಮತ್ತು ಮನೋಜ್ ಕೇರಳ ರಾಜ್ಯದ ಪಾಲ್ಘಾಟ್ ಜಿಲ್ಲೆಯವರಾಗಿದ್ದು. ಕಾರು ಕದ್ದು ಮದ್ಯ ಸರಬರಾಜು ದಂಧೆ ನಡೆಸುತ್ತಿದ್ದರು.
 Play Free Online Games  Click Here
 Blogs, Videos and More  Click Here
 Send Musical and Animated Cards  Click Here
 Simple,Fast & Free Email Service  Click Here
ಸಂಬಂಧಿತ ಮಾಹಿತಿ ಹುಡುಕಿ
ಮತ್ತಷ್ಟು
ಸುಳ್ಳು ಸುದ್ದಿ ಹಬ್ಬಿಸುವುದರಲ್ಲಿ ಬಿಜೆಪಿ ನಂ-1: ಪೂಜಾರಿ
ತಾಯಿಯ ವಿರೋಧದಿಂದ ಸ್ಪರ್ಧೆ ಕೈ ಬಿಟ್ಟೆ: ಖೇಣಿ
ಬಿಜೆಪಿ-ಕಾಂಗ್ರೆಸ್‌ನಿಂದ ರಾಜ್ಯದ ಹಿತ ಸಾಧ್ಯವಿಲ್ಲ: ಎಚ್‌ಡಿಕೆ
ಕಾಂಗ್ರೆಸ್ ಕೆಲವರ ಸ್ವತ್ತಾಗಿದೆ: ಡಿ.ಬಿ.ಚಂದ್ರೇಗೌಡ
ಕೊನೆಗೂ ಮಂಡ್ಯದ ಅಖಾಡಕ್ಕೆ ಧುಮುಕಿದ ಅಂಬರೀಶ್
ಸಾಂಗ್ಲಿಯಾನ ವಿರುದ್ಧ ಲಿಂಬಾವಳಿ ಆಕ್ರೋಶ