ಮುಖ್ಯ ಪುಟ > ಸುದ್ದಿ ಜಗತ್ತು > ಸುದ್ದಿಗಳು > ರಾಜ್ಯ ಸುದ್ದಿ > ಸಚಿವೆ ಶೋಭಾ ಕರಂದ್ಲಾಜೆಗೆ ಗ್ರಾಮಸ್ಥರಿಂದ ಘೇರಾವ್
ಸಲಹೆ/ಪ್ರತಿಕ್ರಿಯೆಮಿತ್ರನಿಗೆ ಕಳುಹಿಸಿಈ ಪುಟ ಮುದ್ರಿಸಿ
 
ಸಚಿವೆ ಶೋಭಾ ಕರಂದ್ಲಾಜೆಗೆ ಗ್ರಾಮಸ್ಥರಿಂದ ಘೇರಾವ್
NRB
ಕೃಷಿ ಭೂಮಿಯನ್ನು ಸಂಘಪರಿವಾರದ ಸಂಘಟನೆಯೊಂದಕ್ಕೆ ಮಂಜೂರು ಮಾಡಿದ ಪ್ರಕರಣದ ಹಿನ್ನೆಲೆಯಲ್ಲಿ ಮಾಗಡಿ ರಸ್ತೆ ಚನ್ನೇನಹಳ್ಳಿ ಗ್ರಾಮಸ್ಥರು ಸಚಿವೆ ಶೋಭಾ ಕರಂದ್ಲಾಜೆ ಅವರಿಗೆ ಘೇರಾವ್ ಹಾಕಿದ ಘಟನೆ ಮಂಗಳವಾರ ನಡೆಯಿತು.

ಬೆಂಗಳೂರು ಉತ್ತರ ಕ್ಷೇತ್ರದ ಅಭ್ಯರ್ಥಿ ಡಿ.ಬಿ.ಚಂದ್ರೇಗೌಡ ಪರ ತಾವರೆಕೆರೆ, ಚೋಳನಾಯಕನಹಳ್ಳಿ, ಚಿಕ್ಕನಹಳ್ಳಿ ಭಾಗದಲ್ಲಿ ಪ್ರಚಾರ ನಡೆಸಿ ಆ ಭಾಗದಲ್ಲಿ ಪ್ರಚಾರ ನಡೆಸುತ್ತಿದ್ದ ಸಂದರ್ಭದಲ್ಲಿ ಚನ್ನೇನಹಳ್ಳಿಯಲ್ಲಿ ಮತಯಾಚನೆ ಸಂದರ್ಭದಲ್ಲಿ ಗ್ರಾಮಸ್ಥರು ಕರಂದ್ಲಾಜೆ ವಿರುದ್ಧ ವಾಗ್ದಾಳಿ ನಡೆಸಿದರು.

ಕೃಷಿಯನ್ನೇ ಅವಲಂಬಿಸಿರುವ ಗ್ರಾಮಸ್ಥರು ಭೂಮಿಯನ್ನು ಕಳೆದುಕೊಂಡು ಬದಕಲು ಏನು ಮಾಡಬೇಕು ಎಂದು ಶೋಭಾ ಕರಂದ್ಲಾಜೆ ಅವರಿಗೆ ಗ್ರಾಮಸ್ಥರು ಘೇರಾವ್ ಹಾಕಿ ಪ್ರಶ್ನಿಸಿದರು. ನಂತರ ಡಿ.ಬಿ.ಚಂದ್ರೇಗೌಡ ಸಮಾಧಾನಪಡಿಸುವ ಯತ್ನ ನಡೆಸಿದರಾದರೂ, ಗ್ರಾಮಸ್ಥರ ಆಕ್ರೋಶದ ನಡುವೆ ಸಮಾಧಾನದ ಮಾತನ್ನು ಕೇಳುವ ಪರಿಸ್ಥಿತಿಯಲ್ಲಿ ಇರಲಿಲ್ಲವಾದ್ದರಿಂದ ಡಿ.ಬಿ.ಮೂಕಪ್ರೇಕ್ಷಕರಾದರು.

ನಂತರ ಬಿಜೆಪಿ ಕಾರ್ಯಕರ್ತರು ಮಧ್ಯಪ್ರವೇಶಿಸಿ, ಸ್ಥಳೀಯ ಮುಖಂಡರು ಸಮಾಧಾನಪಡಿಸಿ ಸಚಿವೆ ಹಾಗೂ ಚಂದ್ರೇಗೌಡ ಅವರನ್ನು ಕಳುಹಿಸಿಕೊಟ್ಟರು.
 Play Free Online Games  Click Here
 Blogs, Videos and More  Click Here
 Send Musical and Animated Cards  Click Here
 Simple,Fast & Free Email Service  Click Here
ಸಂಬಂಧಿತ ಮಾಹಿತಿ ಹುಡುಕಿ
ಮತ್ತಷ್ಟು
ಬೆಂಗಳೂರು: ಐವರು ದರೋಡೆಕೋರರ ಸೆರೆ
ಸುಳ್ಳು ಸುದ್ದಿ ಹಬ್ಬಿಸುವುದರಲ್ಲಿ ಬಿಜೆಪಿ ನಂ-1: ಪೂಜಾರಿ
ತಾಯಿಯ ವಿರೋಧದಿಂದ ಸ್ಪರ್ಧೆ ಕೈ ಬಿಟ್ಟೆ: ಖೇಣಿ
ಬಿಜೆಪಿ-ಕಾಂಗ್ರೆಸ್‌ನಿಂದ ರಾಜ್ಯದ ಹಿತ ಸಾಧ್ಯವಿಲ್ಲ: ಎಚ್‌ಡಿಕೆ
ಕಾಂಗ್ರೆಸ್ ಕೆಲವರ ಸ್ವತ್ತಾಗಿದೆ: ಡಿ.ಬಿ.ಚಂದ್ರೇಗೌಡ
ಕೊನೆಗೂ ಮಂಡ್ಯದ ಅಖಾಡಕ್ಕೆ ಧುಮುಕಿದ ಅಂಬರೀಶ್