ಮುಖ್ಯ ಪುಟ > ಸುದ್ದಿ ಜಗತ್ತು > ಸುದ್ದಿಗಳು > ರಾಜ್ಯ ಸುದ್ದಿ > ಹಿಂದುತ್ವ ಖಂಡಿಸ್ತೇನೆ-ನನ್ನ ತಲೆ ಕತ್ತರಿಸ್ತೀರಾ?: ಸಿದ್ದರಾಮಯ್ಯ ಸವಾಲು
ಸಲಹೆ/ಪ್ರತಿಕ್ರಿಯೆಮಿತ್ರನಿಗೆ ಕಳುಹಿಸಿಈ ಪುಟ ಮುದ್ರಿಸಿ
 
ಹಿಂದುತ್ವ ಖಂಡಿಸ್ತೇನೆ-ನನ್ನ ತಲೆ ಕತ್ತರಿಸ್ತೀರಾ?: ಸಿದ್ದರಾಮಯ್ಯ ಸವಾಲು
ಭಾರತ ಕೇವಲ ಹಿಂದೂಗಳ ದೇಶವಲ್ಲ, ಇಲ್ಲಿ ಎಲ್ಲಾ ಜಾತಿಯವರಿಗೂ ಬದುಕಲು ಅವಕಾಶವಿದೆ ಎಂದಿರುವ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ, ನಾನು ಹಿಂದುತ್ವವನ್ನು ಖಂಡಿಸುತ್ತೇನೆ, ನನ್ನ ತಲೆಯನ್ನು ಕತ್ತರಿಸುತ್ತಾರೋ ಅಂತ ನೋಡುತ್ತೇನೆ ಎಂದು ಸವಾಲು ಹಾಕಿದ್ದಾರೆ.

ಮಂಗಳವಾರ ನಗರದಲ್ಲಿ ಏರ್ಪಡಿಸಿದ್ದ ಕಾಂಗ್ರೆಸ್ ಪ್ರಚಾರ ಸಭೆಯಲ್ಲಿ ಮಾತನಾಡಿದ ಅವರು, ಹಿಂದುತ್ವ ವಿರೋಧಿಸುವವರ ಕೈ, ತಲೆ ಕತ್ತರಿಸಿ, ತಿಥಿ ಮಾಡು ಎಂಬ ಹೇಳಿಕೆ ನೀಡುತ್ತಿರುವ ಬಿಜೆಪಿ ವಿರುದ್ಧ ತೀವ್ರ ಆಕ್ಷೇಪ ವ್ಯಕ್ತಪಡಿಸಿದರು.

ಬಿಜೆಪಿಯ ಯಾವ ಅಭ್ಯರ್ಥಿಗೂ ಚುನಾವಣೆಯಲ್ಲಿ ಸ್ಪರ್ಧಿಸುವ ಹಕ್ಕಿಲ್ಲ ಎಂದು ಗುಡುಗಿದ ಅವರು, ಸಂವಿಧಾನದ ಬಗ್ಗೆ ನಂಬಿಕೆ ಇಲ್ಲದ, ದೇಶದ ಕಾನೂನಿಗೆ ಅಗೌರವ ತೋರುವ ಯಾರಿಗೂ ಚುನಾವಣೆಯಲ್ಲಿ ಸ್ಪರ್ಧಿಸುವ ಹಕ್ಕು ಇಲ್ಲ ಎಂದರು.

ಭಾರತ ಕೇವಲ ಹಿಂದೂಗಳ ದೇಶವಲ್ಲ. ಭಾರತ ಕೇವಲ ಹಿಂದುಗಳ ದೇಶವಲ್ಲ, ಮುಸ್ಲಿಂ, ಸಿಖ್, ಕ್ರೈಸ್ತ ಹೀಗೆ ನಾನಾ ಧರ್ಮದವರು ವಾಸಿಸುತ್ತಿದ್ದಾರೆ. ಆದರೆ ಚುನಾವಣೆಗಾಗಿ ಜನರ ಶಾಂತಿಗೆ ಭಂಗ ತರುವ ಮತ್ತು ಕೋಮುಗಲಭೆ ಉಂಟು ಮಾಡುವ ಕೆಲಸವನ್ನು ಬಿಜೆಪಿ ಮುಖಂಡರು ಮಾಡುತ್ತಿದ್ದಾರೆ ಎಂದು ಆರೋಪಿಸಿದರು.

ರೇಣುಕಾಚಾರ್ಯ ಎಂಬ ಶಾಸಕ ಹಿಂದುತ್ವ ಖಂಡಿಸಿದರೆ ತಲೆ ಕತ್ತರಿಸುತ್ತೇನೆ, ಕೈ ಕತ್ತರಿಸುತ್ತೇನೆ ಎನ್ನುತ್ತಾರೆ. ನಾನು ಈಗ ಹಿಂದುತ್ವ ಖಂಡಿಸುತ್ತೇನೆ ಯಾರು ಬಂದು ತಲೆ ಕತ್ತರಿಸುತ್ತಾರೋ ನೋಡುತ್ತೇನೆ ಎಂದ ಸಿದ್ದರಾಮಯ್ಯ , ಶಾಸಕ ಮತ್ತು ಸಂಸನಾದ ಕೂಡಲೇ ಏನು ಬೇಕಾದರೂ ಮಾತನಾಡಬಹುದು ಎಂಬ ಭ್ರಮೆ ಬಿಜೆಪಿಯವರಿಗಿದೆ ಎಂದು ಕಟುವಾಗಿ ಟೀಕಿಸಿದರು.
 Play Free Online Games  Click Here
 Blogs, Videos and More  Click Here
 Send Musical and Animated Cards  Click Here
 Simple,Fast & Free Email Service  Click Here
ಸಂಬಂಧಿತ ಮಾಹಿತಿ ಹುಡುಕಿ
ಮತ್ತಷ್ಟು
ಬಂಧನದ ಹಿಂದೆ ಕರಂದ್ಲಾಜೆ ಕೈವಾಡ: ಮುತಾಲಿಕ್
ಸಚಿವೆ ಶೋಭಾ ಕರಂದ್ಲಾಜೆಗೆ ಗ್ರಾಮಸ್ಥರಿಂದ ಘೇರಾವ್
ಬೆಂಗಳೂರು: ಐವರು ದರೋಡೆಕೋರರ ಸೆರೆ
ಸುಳ್ಳು ಸುದ್ದಿ ಹಬ್ಬಿಸುವುದರಲ್ಲಿ ಬಿಜೆಪಿ ನಂ-1: ಪೂಜಾರಿ
ತಾಯಿಯ ವಿರೋಧದಿಂದ ಸ್ಪರ್ಧೆ ಕೈ ಬಿಟ್ಟೆ: ಖೇಣಿ
ಬಿಜೆಪಿ-ಕಾಂಗ್ರೆಸ್‌ನಿಂದ ರಾಜ್ಯದ ಹಿತ ಸಾಧ್ಯವಿಲ್ಲ: ಎಚ್‌ಡಿಕೆ